Get Updates
Get notified of breaking news, exclusive insights, and must-see stories!

Boat Trip: ಮೈ ಮೇಲೆ ಬಟ್ಟೆ ಇಲ್ಲದೆ ಪ್ರೇಮಿಗಳ ದಿನ ಹಡಗಿನಲ್ಲಿ ಪ್ರವಾಸ: ಎಲ್ಲಿ? ಯಾವಾಗ? ಸಂಪೂರ್ಣ ವಿವರ ಇಲ್ಲಿದೆ...

ಮೈ ಮತ್ತು ಮನಸ್ಸು ರಿಲ್ಯಾಕ್ಸ್‌ ಆಗಲು ಜನ ಪ್ರವಾಸವನ್ನು ಕೈಗೊಳ್ಳುವುದು ಸಹಜ. ಪ್ರವಾಸ ನವೀನ ಉತ್ಸಾಹವನ್ನು ಮರುಕಳಿಸುತ್ತದೆ. ಒತ್ತಡದ ಬದುಕಿಗೆ ಕೊಂಚ ಬ್ರೇಕ್ ಹಾಕಲು ಜನ ಆಯ್ಕೆ ಮಾಡಿಕೊಳ್ಳುವ ಮೊದಲ ಮಾರ್ಗ ಅಂದರೆ ಅದು ಪ್ರವಾಸ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಪ್ರವಾಸದ ಬಗ್ಗೆ ಕೇಳಿ ಜನ ಶಾಕ್ ಆಗಿದ್ದಾರೆ. ಹಡಗಿನಲ್ಲಿ ಮಾಡುವ ಈ ಪ್ರವಾಸದಲ್ಲಿ ಪ್ರಯಾಣಿಕರು ಬಟ್ಟೆ ಇಲ್ಲದೆ ಪ್ರಯಾಣಿಸಬಹುದು. ಹಾಗಾದರೆ ಯಾವುದೀ ಪ್ರವಾಸ? ಎಲ್ಲಿ ಮತ್ತು ಯಾವಾಗ ಇದೆ?

ಬೇರ್ ನೆಸೆಸಿಟೀಸ್ ಟೂರ್ ಮತ್ತು ಟ್ರಾವೆಲ್ (Bare Necessities Tour & Travel) ಕಂಪನಿ ವಿಶೇಷ ಹಾಗೂ ವಿನೂತನ ಪ್ರವಾಸವನ್ನು ಆಯೋಜಿಸುತ್ತಿದೆ. ಇದು ಹತ್ತು ದಿನದ ಹಡಗು ಪ್ರವಾಸದ ಬಗ್ಗೆ ವಿವರಣೆಯನ್ನು ಹಂಚಿಕೊಂಡಿದೆ. ಇದಕ್ಕೆ ಬಿಗ್ ನ್ಯೂಡ್ ಬೋಟ್ 2025 (Big Nude Boat 2025) ಎಂದು ಹೆಸರಿಸಲಾಗಿದೆ. ಹೆಸರೇ ಹೇಳುವಂತೆ 'ಬಿಗ್ ನ್ಯೂಡ್ ಬೋಟ್‌' ಪ್ರವಾಸದಲ್ಲಿ ಪ್ರಯಾಣಿಕರು ಬೆತ್ತಲೆಯಾಗಿ ಪ್ರಯಾಣ ಮಾಡುತ್ತಾರೆ.

Boat trip without clothes Florida to Caribbean cruise ship trip without clothes in 2025 complete details here

ಹೌದು... ಜೀವನದಲ್ಲಿ ಒಮ್ಮೆಯಾದರೂ ಕ್ರೂಸ್ ಹಡಗು ಪ್ರಯಾಣ ಮಾಡುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಇದಕ್ಕಾಗಿ 'ಬಿಗ್ ನ್ಯೂಡ್ ಬೋಟ್‌' ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಪ್ರವಾಸವೊಂದನ್ನು ಆಯೋಜಿಸಿದೆ. ಫ್ಲೋರಿಡಾದಿಂದ ಕೆರಿಬಿಯನ್‌ಗೆ 2025ರಲ್ಲಿ 10 ದಿನಗಳ ಕ್ರೂಸ್ ಹಡಗು ಪ್ರಯಾಣವನ್ನು ಆಯೋಜಿಸಲಾಗಿದೆ. ಈ ಪ್ರವಾಸ ಫೆಬ್ರವರಿ 3ರಿಂದ ಫೆಬ್ರವರಿ 14 ರವರೆಗೆ ನಡೆಯಲಿದ್ದು ಇದರಲ್ಲಿ ಬೆತ್ತಲೆಯಾಗಿ ಪ್ರಯಾಣಿಸಬಹುದಾಗಿದೆ.

ಈ ಪ್ರವಾಸ 2025 ಫೆಬ್ರವರಿ 3 ರಿಂದ ಫ್ಲೋರಿಡಾದಿಂದ ಹಡಗಿನಲ್ಲಿ ಆರಂಭವಾಗುತ್ತದೆ. ಈ ಹಡಗಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೆತ್ತಲೆಯಾಗಿ ಬಹಾಮಾಸ್, ಪೋರ್ಟೊ ರಿಕೊ, ಸೇಂಟ್ ಮಾರ್ಟೆನ್, ಡೊಮಿನಿಕಾ, ಮಾರ್ಟಿನಿಕ್ ಮತ್ತು ಸೇಂಟ್ ಲೂಸಿಯಾಕ್ಕೆ ಭೇಟಿ ನೀಡುತ್ತಾರೆ. ಪ್ರವಾಸದ ಉದ್ದಕ್ಕೂ ಬಟ್ಟೆ ಇಲ್ಲದೆ ಪ್ರಯಾಣಿಕರು ಇರಬಹುದಾಗಿದೆ.

Boat trip without clothes Florida to Caribbean cruise ship trip without clothes in 2025 complete details here

ಬೆತ್ತಲೆಯಾಗಿರುವುದು ಕಡ್ಡಾಯ...!

ಈ ಪ್ರವಾಸದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ಕೆಲ ನಿಯಮಗಳು ಇವೆ. ಆ ನಿಯಮಗಳನ್ನು ಕಡ್ಡಾಯವಾಗಿ ಪ್ರಯಾಣಿಕರು ಪಾಲಿಸಬೇಕು. ಯಾವ ಸ್ಥಳದಲ್ಲಿ ಬಟ್ಟೆ ಇಲ್ಲದೆ ಎಷ್ಟು ಸಮಯ ಇರಲು ಅವಕಾಶವಿರುತ್ತೋ ಅಷ್ಟೇ ಹೊತ್ತು ಆ ಸ್ಥಳದಲ್ಲಿ ಮಾತ್ರ ಪ್ರಯಾಣಿಕರೆಲ್ಲರೂ ಬೆತ್ತಲೆಯಾಗಿ ಇರಬೇಕಾಗುತ್ತದೆ. ಯಾವ ಸ್ಥಳದಲ್ಲಿ ಬಟ್ಟೆ ಹಾಕಿಕೊಳ್ಳುವುದು ಕಡ್ಡಾಯವಾಗಿರುತ್ತೋ ಆ ಸ್ಥಳದಲ್ಲಿ ಪ್ರಯಾಣಿಕರು ಬಟ್ಟೆಯನ್ನು ಕಡ್ಡಾಯವಾಗಿ ಧರಿಸಲೇಬೇಕು. ಇದು 'ಬಿಗ್ ನ್ಯೂಡ್ ಬೋಟ್‌' ಪ್ರವಾಸದ ನಿಯಮವಾಗಿದೆ.

ನಗ್ನತೆಯ ಬಗ್ಗೆ ಕಾಲ ಕಾಲಕ್ಕೆ ಹಡಗಿನಲ್ಲಿ ಘೋಷಣೆ...

ಅಲ್ಲದೆ ಹಡಗಿನಲ್ಲಿ ಪ್ರಯಾಣಿಕರಿಗೆ ಕಾಲ ಕಾಲಕ್ಕೆ ಸಂದೇಶಗಳನ್ನು ನೀಡಲಾಗುತ್ತದೆ. ಆ ಪ್ರಕಾರ ಪ್ರಯಾಣಿಕರು ನಡೆದುಕೊಳ್ಳಬೇಕಾಗುತ್ತದೆ. ಹಡಗನ್ನು ಬಂದರಿನಲ್ಲಿ ನಿಲ್ಲಿಸಿದಾಗ ಹಾಗೂ ಹಡಗು ಬಂದರಿನಿಂದ ಹೊರಡುವವರೆಗೆ, ನಗ್ನತೆಯನ್ನು ಮತ್ತೆ ಅನುಮತಿಸುವ ಘೋಷಣೆಯಾಗುವವರೆಗೆ ಎಲ್ಲಾ ಪ್ರಯಾಣಿಕರು ಬಾಲ್ಕನಿಗಳು ಸೇರಿದಂತೆ ಸಂಪೂರ್ಣ ಹಡಗಿನ ಉದ್ದಕ್ಕೂ ಬಟ್ಟೆ ಧರಿಸಿರಬೇಕು. ಹಡಗು ಸಮುದ್ರದಲ್ಲಿ ಇದ್ದಾಗ ಅಥವಾ ಚಲಿಸುತ್ತಿರುವ ಸಮಯದಲ್ಲಿ ಪ್ರಯಾಣಿಕರು ನಗ್ನರಾಗಬಹುದು. ಇದಕ್ಕಾಗಿ ಘೋಷಣೆಗಳನ್ನೂ ಕೂಡ ಹಡಗಿನಲ್ಲಿ ಮಾಡಲಾಗುತ್ತದೆ. ಈ ಬಗ್ಗೆ ಟ್ರಾವೆಲ್ ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

Boat trip without clothes Florida to Caribbean cruise ship trip without clothes in 2025 complete details here

ಫೋಟೋ ಮತ್ತು ವೀಡಿಯೊಕ್ಕೆ ನಿರ್ಬಂಧ...

ಅತಿಥಿಗಳು ತಮ್ಮ ರೂಮ್ ಹೊರಗೆ, ಪೂಲ್ ಪ್ರದೇಶ ಮತ್ತು ಬಫೆ ಪ್ರದೇಶದಲ್ಲಿ ಒಳುಡುಪಿನೊಂದಿಗೆ ಅಥವಾ ಟವೆಲ್ ಮೇಲೆ ಕುಳಿತುಕೊಳ್ಳಲು ಅನುಮತಿಸಲಾಗುತ್ತದೆ. ಆದರೆ ಹಡಗಿನಲ್ಲಿ ಘೋಷಣೆಗಳಾದಾಗ ಪ್ರಯಾಣಿಕರು ಬೆತ್ತಲೆಯಾಗಿರಬೇಕಾಗುತ್ತದೆ. ಪ್ರಯಾಣಿಕರು ಹಡಗಿನಲ್ಲಿರುವ ಯಾರೊಬ್ಬರ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುವಂತಿಲ್ಲ. ಬಿಗ್ ನ್ಯೂಡ್ ಬೋಟ್‌ನಾದ್ಯಂತ ಯಾವುದೇ ಫೋಟೋ ವಲಯ ಇರುವುದಿಲ್ಲ ಎಂದು ಬೇರ್ ನೆಸೆಸಿಟೀಸ್ ಟೂರ್ ಮತ್ತು ಟ್ರಾವೆಲ್ ಕಂಪನಿ ತಿಳಿಸಿದೆ.

ಅನುಚಿತವಾಗಿ ಸ್ಪರ್ಶಿಸುವುದಕ್ಕೆ ನಿರ್ಬಂಧ ಇಲ್ಲ..

ಅಲ್ಲದೆ ಮೋಹಿಸುವುದು ಅಥವಾ ಅನುಚಿತವಾಗಿ ಸ್ಪರ್ಶಿಸುವುದಕ್ಕೆ ಇಲ್ಲಿ ಯಾವುದೇ ನಿರ್ಬಂಧಗಳು ಇರುವುದಿಲ್ಲ. ಹಾಗೆಯೇ ಬಂದರಿನಲ್ಲಿರುವ ಇತರ ಹಡಗುಗಳ ಮುಂದೆ ನಗ್ನವಾಗಿರಬಹುದಾಗಿದೆ. ಅಲ್ಲದೆ ಘೋಷಣೆಯಾದಾಗ ಹಡಗಿನಲ್ಲಿ ಇರುವ ಪ್ರಯಾಣಿಕರು ಒಳ ಉಡುಗೆಗಳನ್ನು ಸಹ ಧರಿಸಲು ಅನುಮತಿಸಲಾಗುವುದಿಲ್ಲ. ಸಂಪೂರ್ಣವಾಗಿ ಬೆಲ್ಲತೆಯಾಗಿರಬೇಕಾಗುತ್ತದೆ. ಕ್ರೂಸ್ ನಿಯಮಗಳನ್ನು ಅನುಸರಿಸಲು ವಿಫಲರಾದವರು ಕ್ರೂಸ್‌ನಿಂದ ವಜಾಗೊಳಿಸಲ್ಪಡುತ್ತಾರೆ ಎಂದು ಬೇರ್ ನೆಸೆಸಿಟೀಸ್ ಟೂರ್ ಮತ್ತು ಟ್ರಾವೆಲ್ (Bare Necessities Tour & Travel) ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಆನ್‌ಲೈನ್‌ ಬುಕ್ಕಿಂಗ್

ಈ ಬೆತ್ತಲೆ ಹಡಗು ಪ್ರವಾಸ ಮಾಡುವವರು ಆನ್‌ಲೈನ್‌ ಮೂಲಕ ಬುಕ್ ಮಾಡಲು ತಿಳಿಸಲಾಗಿದೆ. ಬಿಗ್ ನ್ಯೂಡ್ ಬೋಟ್ 2025 (Big Nude Boat 2025) ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಕೇಳಲಾದ ಮಾಹಿತಿಯನ್ನು ನವೋದಿಸುವ ಮೂಲಕ ಆಸಕ್ತರು ಈ ಹಡಗಿನಲ್ಲಿ ಪ್ರಯಾಣ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+