BMTC: ಬಿಎಂಟಿಸಿ ಎರಡು ಹೊಸ ಮಾರ್ಗ, ಕೋರಮಂಗಲಕ್ಕೆ ನಾನ್ ಎಸಿ ಬಸ್
ಬೆಂಗಳೂರು, ಜುಲೈ 07: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎರಡು ಹೊಸ ಮಾರ್ಗವನ್ನು ಪರಿಚಯಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಮಾರ್ಗದಲ್ಲಿ ನಾನ್ ಎಸಿ ಬಸ್‌ಗಳನ್ನು ಓಡಿಸುತ್ತಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹೊಸ ಬಸ್ ಮಾರ್ಗದ ಕುರಿತು ಬಿಎಂಟಿಸಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. 170 ಮತ್ತು 141-ಕೆ ಹೆಸರಿನ ಮಾರ್ಗದ ಬಸ್ ಕೋರಮಂಗಲ-ಜಯನಗರ 4ನೇ ಬ್ಲಾಕ್ ಮತ್ತು ಕೋರಮಂಗಲ-ಶಿವಾಜಿನಗರ ನಡುವೆ ಸಂಪರ್ಕ ಕಲ್ಪಿಸುತ್ತವೆ.

ಕೋರಮಂಗಲ-ಜಯನಗರ 4ನೇ ಬ್ಲಾಕ್ ಮಾರ್ಗದಲ್ಲಿ 18 ಟ್ರಿಪ್ ಮತ್ತು ಕೋರಮಂಗಲ-ಶಿವಾಜಿನಗರ ನಡುವೆ 10 ಟ್ರಿಪ್ ಬಸ್ ಸೇವೆ ಆರಂಭಿಸಲಾಗಿದೆ. ಈ ಮಾರ್ಗದಲ್ಲಿ ನಾನ್ ಎಸಿ ಬಸ್‌ಗಳು ಸಂಚಾರ ನಡೆಸಲಿವೆ. ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬಸ್ ಮಾರ್ಗದ ವಿವರ: 170 ಮಾರ್ಗದ ಬಸ್ ಕೋರಮಂಗಲ-ಜಯನಗರ 4ನೇ ಬ್ಲಾಕ್ ನಡುವೆ ಸಂಚಾರ ನಡೆಸುತ್ತದೆ. ಈ ಬಸ್ ಕೋರಮಂಗಲದಿಂದ ಹೊರಟು ಸೆಂಟ್ ಫ್ರಾನ್ಸಿಸ್ ಕಾಲೇಜು, ಕೆಆರ್‌ಎಂ 80 ಅಡಿ ರಸ್ತೆ, ಕೋರಮಂಗಲ ಕಲ್ಯಾಣ ಮಂಟಪ, ಆಡುಗೋಡಿ, ಬೆಂಗಳೂರು ಡೈರಿ ಸರ್ಕಲ್, ಕಾರ್ಮಲ್ ಕಾನ್ವೆಂಟ್ ಮಾರ್ಗವಾಗಿ ಸಂಚಾರ ನಡೆಸಲಿದೆ.
ಈ ಬಸ್ ಕೋರಮಂಗಲದಿಂದ 7.30, 8.30, 9.25, 10.25, 11.45, 12.45, 14.00, 15.00, 16:15, 17:15ಕ್ಕೆ ಹೊರಡಲಿದೆ. ಜಯನಗರ 4ನೇ ಬ್ಲಾಕ್‌ನಿಂದ 8.25, 9.25, 10.50, 11.50, 12.40, 13.40, 14.55, 15.55ಕ್ಕೆ ಹೊರಡಲಿದೆ ಎಂದು ಮಾಹಿತಿ ನೀಡಲಾಗಿದೆ.
141-ಕೆ ಮಾರ್ಗದ ಬಸ್ ಕೋರಮಂಗಲ-ಶಿವಾಜಿನಗರ ನಡುವೆ ಸಂಚಾರ ನಡೆಸುತ್ತದೆ. ಈ ಬಸ್ ಸೆಂಟ್ ಫ್ರಾನ್ಸಿಸ್ ಕಾಲೇಜು, ಕೆಆರ್‌ಎಂ 80 ಅಡಿ ರಸ್ತೆ, ರಾಜೇಂದ್ರ ನಗರ, ವಿವೇಕನಗರ, ಆಸ್ಟಿನ್ ಟೌನ್, ಮಯೋ ಹಾಲ್ ಮೂಲಕ ಸಂಚಾರ ನಡೆಸಲಿದೆ.
ಬಸ್ ಕೋರಮಂಗಲದಿಂದ 8, 9.25, 12.15, 14.30 ಮತ್ತು 16.45ಕ್ಕೆ ಹೊರಡಲಿದೆ. ಶಿವಾಜಿನಗರದಿಂದ 8.55, 11.20, 13.10, 15.25 ಮತ್ತು 17.45ಕ್ಕೆ ಸಂಚಾರವನ್ನು ಆರಂಭಿಸಲಿದೆ.
ಹೊಸ ಮೆಟ್ರೋ ಮಾರ್ಗ: ಬಿಎಂಟಿಸಿ ಜುಲೈ 3ರಂದು MF-2 ಹೆಸರಿನ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿತ್ತು. ಈ ಬಸ್ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ (ಹಿಂಭಾಗದ ಗೇಟ್) ಮತ್ತು ರಾಮಮೂರ್ತಿ ನಗರ ಬ್ರಿಡ್ಜ್ ನಡುವೆ ಸಂಚಾರ ನಡೆಸುತ್ತದೆ.
ನಾನ್ ಎಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿವೆ.
ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ (ಹಿಂಭಾಗದ ಗೇಟ್) ಮತ್ತು ರಾಮಮೂರ್ತಿ ನಗರ ಬ್ರಿಡ್ಜ್ ನಡುವಿನ ಬಸ್ ಬಿ. ಚನ್ನಸಂದ್ರ, ಎಸ್‌ಬಿಐ ಬ್ಯಾಂಕ್, ಕಸ್ತೂರಿ ನಗರ 2ನೇ ಹಂತ, ಬೆನ್ನಿಗಾನಹಳ್ಳಿ ಬ್ರಿಡ್ಜ್, ಸದಾನಂದ ನಗರ ಮಾರ್ಗದಲ್ಲಿ ಪ್ರತಿದಿನ 20 ಟ್ರಿಪ್ ಸಂಚರಿಸಲಿವೆ. ಬಸ್ ರಾಮಮೂರ್ತಿ ನಗರ ಬ್ರಿಡ್ಜ್‌ನಿಂದ 7.40, 8.20, 9, 9.40, 17.25, 18.05, 18.45, 19.50, 20.30 ಸಮಯಕ್ಕೆ ನಿರ್ಗಮಿಸುತ್ತದೆ.
ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ 7.20, 8, 8.40, 9.20, 10.25, 17.05, 17.45, 18.25, 19.30, 20.10, 20.50ಕ್ಕೆ ನಿರ್ಗಮಿಸಲಿದೆ. ಈ ಬಸ್ ಸಂಚಾರದಿಂದ ಬಿಎಂಟಿಸಿ ಮೂಲಕ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಜನರಿಗೆ ಅನುಕೂಲವಾಗಲಿದೆ.












Click it and Unblock the Notifications