BMTC: ಎರಡು ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ, ವೇಳಾಪಟ್ಟಿ
ಬೆಂಗಳೂರು, ಜೂನ್ 22: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಬೇಡಿಕೆಯಂತೆ ಎರಡು ಹೊಸ ಮಾರ್ಗದಲ್ಲಿ ಸಾಮಾನ್ಯ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬಿಎಂಟಿಸಿ ಪ್ರಯಾಣಿಕರ ಬೇಡಿಕೆಯಂತೆ ಹಲವಾರು ಹೊಸ ಮಾರ್ಗವನ್ನು ಪರಿಚಯಿಸುತ್ತದೆ. ಈಗ ಇದೇ ಮಾದರಿಯಲ್ಲಿ ಎರಡು ಹೊಸ ಮಾರ್ಗವನ್ನು ಘೋಷಣೆ ಮಾಡಿದ್ದು, ಬಸ್ ಹೊರಡುವ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ಒಂದು ಮಾರ್ಗದ ಬಸ್ 302-ಕೆ ಶಿವಾಜಿನಗರ- ಕೆ ಚನ್ನಸಂದ್ರ ನಡುವೆ ಸಂಚಾರ ನಡೆಸುತ್ತದೆ. ಈ ಮಾರ್ಗದ ಬಸ್ ಐಟಿಸಿ, ಸೇವಾನಗರ, ಬಾಣಸವಾಡಿ, ಹೊರಮಾವು, ಜಯಂತಿ ನಗರ, ಕಲ್ಕೆರೆ ಮೂಲಕ ಸಾಗುತ್ತದೆ.
2ನೇ ಮಾರ್ಗ 401-ಎನ್. ಬನಶಂಕರಿ ಬಸ್ ನಿಲ್ದಾಣ- ಮಲ್ಲೇಶ್ವರ ಬಸ್ ನಿಲ್ದಾಣ 18ನೇ ಕ್ರಾಸ್. ಈ ಮಾರ್ಗದ ಬಸ್ ವಿಜಯನಗರ, ಮಾಗಡಿ ರಸ್ತೆ ಟೋಲ್‌ಗೇಟ್, ಇಎಸ್ಐ, ನವರಂಗ್ ಮೂಲಕ ಸಂಚಾರ ನಡೆಸುತ್ತದೆ.
ವೇಳಾಪಟ್ಟಿಯ ವಿವರ: 401-ಎನ್. ಬನಶಂಕರಿ ಬಸ್ ನಿಲ್ದಾಣ- ಮಲ್ಲೇಶ್ವರ ಬಸ್ ನಿಲ್ದಾಣ 18ನೇ ಕ್ರಾಸ್. ಈ ಮಾರ್ಗದ ಬಸ್ ಬನಶಂಕರಿಯಿಂದ ಹೊರಟು ಕತ್ರಿಗುಪ್ಪೆ, ಪಿಇಎಸ್ ಕಾಲೇಜು, ನಾಯಂಡಹಳ್ಳಿ, ವಿಜಯನಗರ ಟಿಟಿಎಂಸಿ, ಮಾಗಡಿ ರಸ್ತೆ ಟೋಲ್‌ಗೇಟ್, ಬಾಶ್ಯಂ ವೃತ್ತ, ಇಎಸ್‌ಐ, ನವರಂಗ್, ಮಲ್ಲೇಶ್ವರ ವೃತ್ತ ಮೂಲಕ ಮಲ್ಲೇಶ್ವರ ಬಸ್ ನಿಲ್ದಾಣ ತಲುಪಲಿದೆ.
ಬನಶಂಕರಿ ಬಸ್ ನಿಲ್ದಾಣದಿಂದ ಬಸ್‌ಗಳು 7.35, 8.05, 8.35, 8.55, 9.35, 10.30, 11, 11.30, 11.50, 12.20, 12.50, 14.45, 15.05, 15.40, 17.10, 17.40, 20.10ಕ್ಕೆ ಹೊರಡಲಿದೆ.
ಮಲ್ಲೇಶ್ವರ ಬಸ್ ನಿಲ್ದಾಣದಿಂದ ಬಸ್ 6.40, 7.45, 8.20, 8.50, 9.20. 9.50, 10.35, 11.10, 11.40, 12.40, 13.00, 13.30, 14.30, 15.55, 16.25, 16.50, 18.55ಕ್ಕೆ ಹೊರಡಲಿದೆ.
302-ಕೆ ಶಿವಾಜಿನಗರ- ಕೆ ಚನ್ನಸಂದ್ರ ನಡುವಿನ ಬಸ್. ಶಿವಾಜಿನಗರದಿಂದ ಹೊರಟು ಕಂಟೋನ್ಮೆಂಟ್ ರೈಲು ನಿಲ್ದಾಣ, ಕೋಲ್ಸ್ ಪಾರ್ಕ್, ಐಟಿಸಿ, ಕ್ಲಾರೆನ್ ಶಾಲೆ, ಸೇವಾ ನಗರ, ಬಾಣಸವಾಡಿ, ಹೊರಮಾವು ಪೆಟ್ರೋಲ್ ಬಂಕ್, ಹೊರಮಾವು, ಜಯಂತಿ ನಗರ, ಕಲ್ಕೆರೆ ಮೂಲಕ ಕೆ ಚನ್ನಸಂದ್ರ ತಲುಪಲಿದೆ.
ಶಿವಾಜಿನಗರದಿಂದ ಬಸ್ 7.45, 8.15, 10.15, 10.30, 16.10, 17.00, 18.45, 19.45, 21.15ಕ್ಕೆ ಹೊರಡಲಿದೆ.
ಕೆ ಚನ್ನಸಂದ್ರದಿಂದ ಬಸ್ 5.30, 8.45, 9.20, 11.15, 11.30, 17.15, 18.05, 19.50, 20.50ಕ್ಕೆ ಹೊರಡಲಿದೆ.
ಬಿಎಂಟಿಸಿ ಬಸ್ ಬೆಂಗಳೂರು ನಗರದ ಜನರ ಜೀವನಾಡಿ. ನಮ್ಮ ಮೆಟ್ರೋ, ಆಟೋ, ಕ್ಯಾಬ್ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಬಂದರೂ ಸಹ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಪ್ರತಿದಿನ 6 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳು ಜನರ ಸೇವೆಗಾಗಿ ರಸ್ತೆಗೆ ಇಳಿಯುತ್ತವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರು ನಗರ, ಉಪನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಣೆಯ ವಿಸ್ತಾರ ಹೊಂದಿದೆ. ದಿನಂಪ್ರತಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೊಸ ಹೊಸ ಮಾರ್ಗವನ್ನು ಬಿಎಂಟಿಸಿ ಪರಿಚಯಿಸುತ್ತಲೇ ಬರುತ್ತಿದೆ. ನೂತನ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿವಿಧ ಹೊಸ ಐಷಾರಾಮಿ ಮಾದರಿ ಬಸ್ ಸೇವೆಯನ್ನು ಸಹ ಬಿಎಂಟಿಸಿ ಆರಂಭಿಸಿದೆ. ಸಾಮಾನ್ಯ ಎಸಿ, ನಾನ್ ಎಸಿ, ವಿದ್ಯುತ್ ಬಸ್‌ಗಳನ್ನು ಬಿಎಂಟಿಸಿ ಓಡಿಸುತ್ತಿದೆ. ಅಲ್ಲದೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕಾಗಿ ಪ್ರತ್ಯೇಕವಾಗಿ ವಾಯುವಜ್ರ ಬಸ್‌ಗಳನ್ನು ಓಡಿಸಲಾಗುತ್ತಿದೆ.












Click it and Unblock the Notifications