Tirupati: ಬೀದರ್-ತಿರುಪತಿ ನಡುವೆ ವಿಶೇಷ ರೈಲು, ನಿಲ್ದಾಣ, ವೇಳಾಪಟ್ಟಿ

ಬೀದರ್, ಅಕ್ಟೋಬರ್ 14: ಕಲ್ಯಾಣ ಕರ್ನಾಟಕ ಭಾಗದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಸಿಹಿಸುದ್ದಿಯೊಂದಿದೆ. ಬೀದರ್-ತಿರುಪತಿ ನಡುವೆ ವಿಶೇಷ ರೈಲು ಓಡಿಸಲಾಗುತ್ತಿದೆ. 4 ವಾರಗಳ ಕಾಲ ಸಂಚಾರ ನಡೆಸುವ ವಿಶೇಷ ರೈಲು ಇದಾಗಿದ್ದು, ಭಕ್ತರು ರೈಲು ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ವಿವಿಧ ಜಿಲ್ಲೆಗಳ ಮೂಲಕ ರೈಲು ಸಂಚಾರ ನಡೆಸುವುದಿರಂದ ದೇವಾಲಯಕ್ಕೆ ಭೇಟಿ ನೀಡುವ ಜನರಿಗೆ ಈ ರೈಲು ಅನುಕೂಲವಾಗಿದೆ.

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಬೀದರ್-ತಿರುಪತಿ ರೈಲು ಸೇವೆ ಬಗ್ಗೆ ಮಾಹಿತಿ ನೀಡಿದ್ದಾರೆ. ಜನರು ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಭಾಗಕ್ಕೆ ವಿಶೇಷ ರೈಲು ಸೇವೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Bidar to Tirupati Special Train Schedule For Festivals

ರೈಲು ಸಂಖ್ಯೆ 07621/ 07622 ತಿರುಪತಿ-ಬೀದರ್ ನಡುವೆ ಸಂಚಾರವನ್ನು ನಡೆಸಲಿದೆ. ಕಳೆದ ವರ್ಷ ಸಹ ಹಬ್ಬದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ವಿಶೇಷ ರೈಲು ಓಡಿಸಲಾಗಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ವರ್ಷವೂ ಅದೇ ಮಾರ್ಗದಲ್ಲಿ ಹಬ್ಬದ ಸಂದರ್ಭಕ್ಕಾಗಿ ವಿಶೇಷ ರೈಲನ್ನು ಓಡಿಸಲಾಗುತ್ತಿದೆ.

ರೈಲು ವೇಳಾಪಟ್ಟಿ, ನಿಲ್ದಾಣ: ರೈಲು ಸಂಖ್ಯೆ 07621 ಅಕ್ಟೋಬರ್ 20, 27 ಮತ್ತು ನವೆಂಬರ್ 3ರಂದು ಭಾನುವಾರ ಸಂಜೆ 7.10ಕ್ಕೆ ಜಾಲ್ನಾ ರೈಲು ನಿಲ್ದಾಣದಿಂದ ಹೊರಡಲಿದೆ. ಪರತೂರ, ಸೇಲೂ, ಮನ್ವಥ ರೋಡ್, ಪರಭಾಣಿ ಜಂಕ್ಷನ್, ಪರಳಿ ವೈಜಿನಾಥ, ಉದಗಿರಿ ಮೂಲಕ ಸೋಮವಾರ ಮುಂಜಾನೆ 3.30ಕ್ಕೆ ಭಾಲ್ಕಿ ಹಾಗೂ 4 ಗಂಟೆಗೆ ಬೀದರ್‌ಗೆ ಬರಲಿದೆ. 4.02ಕ್ಕೆ ಹೊರಟು ಜಹಿರಾಬಾದ್, ವಿಕಾರಾಬಾದ್, ಚಿತ್ತಾಪುರ, ಯಾದಗಿರಿ, ರಾಯಚೂರು, ಮಂತ್ರಾಲಯ ರೋಡ್, ರೇಣಿಗುಂಟ ಮಾರ್ಗವಾಗಿ ಸೋಮವಾರ ಸಂಜೆ 6.30ಕ್ಕೆ ತಿರುಪತಿ ತಲುಪಲಿದೆ.

ರೈಲು ಸಂಖ್ಯೆ 07622. ಅಕ್ಟೋಬರ್ 14, 21, 28 ಮತ್ತು ನವೆಂಬರ್ 4ರಂದು ಸೋಮವಾರ ರಾತ್ರಿ 9.10ಕ್ಕೆ ತಿರುಪತಿಯಿಂದ ಹೊರಟು ಮಂಗಳವಾರ ಬೆಳಗ್ಗೆ 8.57ಕ್ಕೆ ಬೀದರ್, 9.48ಕ್ಕೆ ಭಾಲ್ಕಿ ತಲುಪಲಿದೆ. ಸಂಜೆ 7 ಗಂಟೆಗೆ ಜಾಲ್ನಾಗೆ ತಲುಪಲಿದೆ ಎಂದು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಮತ್ತೊಂದು ವಿಶೇಷ ರೈಲು: ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ 2 ಟ್ರಿಪ್ ವಿಶೇಷ ರೈಲು ಸೇವೆಯನ್ನು ಘೋಷಣೆ ಮಾಡಲಾಗಿದೆ.

ರೈಲು ಸಂಖ್ಯೆ 06587 ಎಸ್‌ಎಂವಿಟಿ ಬೆಂಗಳೂರು-ಭಗತ್ ಕಿ ಕೋರಿ ವಿಶೇಷ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಅಕ್ಟೋಬರ್ 25 ಮತ್ತು 30 ರಂದು 17:45 ಗಂಟೆಗೆ ಹೊರಟು, ಮೂರನೇ ದಿನ 12:45 ಗಂಟೆಗೆ ಭಗತ್ ಕಿ ಕೋರಿ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 06588 ಭಗತ್-ಕಿ-ಕೋಠಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 28 ಮತ್ತು ನವೆಂಬರ್ 2ರಂದು ಭಗತ್-ಕಿ-ಕೋರಿಯಿಂದ 5 ಗಂಟೆಗೆ ಹೊರಟು, ಮರುದಿನ 23:30 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.

ರೈಲು ಎರಡು ದಿಕ್ಕಿನ ಮಾರ್ಗದಲ್ಲಿ, ಬಾಣಸವಾಡಿ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಲೋನಾವಲ, ಕಲ್ಯಾಣ್, ವಸಾಯಿ ರೋಡ್, ವಾಪಿ, ಸೂರತ್, ವಡೋದರಾ ಜಂಕ್ಷನ್, ಅಹಮದಾಬಾದ್ ಜಂಕ್ಷನ್, ಮಹೇಶನಾ ಜಂಕ್ಷನ್, ಪಾಲನ್‌ಪುರ್‌ ಜಂಕ್ಷನ್, ಅಬು ರೋಡ್, ಪಿಂಡ್ವಾರಾ, ಜವಾಯಿ ಬಂದ್, ಫಲ್ನಾ, ಮಾರ್ವಾರ್ ಜಂಕ್ಷನ್, ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ರೈಲು 2ನೇ ದರ್ಜೆ ಹವಾನಿಯಂತ್ರಿತ-4, 3ನೇ ದರ್ಜೆ ಹವಾನಿಯಂತ್ರಿತ-15 ಮತ್ತು ಬ್ರೇಕ್ ವ್ಯಾನ್ ಮತ್ತು ಜನರೇಟರ್ ಕಾರ್‌ಗಳು-2 ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+