Bidar Airport: ಬೆಂಗಳೂರು-ಬೀದರ್ ನಡುವೆ ಮತ್ತೆ ವಿಮಾನ ಹಾರಾಟ
ಬೆಂಗಳೂರು, ಅಕ್ಟೋಬರ್ 30: ಬೀದರ್‌ಗೆ ಮತ್ತೆ ವಿಮಾನ ಸೇವೆಯನ್ನು ಕಲ್ಪಿಸಲು ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಂಡಿದೆ. ಟ್ರೂ ಜೆಟ್ ಮತ್ತು ಸ್ಟಾರ್ ಎರಡು ವಿಮಾನಯಾನ ಸಂಸ್ಥೆಗಳು ಬೀದರ್‌ಗೆ ವಿಮಾನ ಸಂಪರ್ಕ ಒದಗಿಸಿದ್ದವು. ಆದರೆ ಈಗ ಯಾವುದೇ ವಿಮಾನಗಳ ಸಂಚಾರವಿಲ್ಲ. ಬೀದರ್‌ಜ ಜನರು ಹೈದರಾಬಾದ್‌ಗೆ ತೆರಳಿ ಅಲ್ಲಿಂದ ವಿಮಾನವನ್ನು ಏರಿ ಬೇರೆ ನಗರಕ್ಕೆ ಸಂಚಾರವನ್ನು ನಡೆಸಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೀದರ್-ಬೆಂಗಳೂರು ನಡುವೆ ವಿಮಾನ ಸೇವೆಯನ್ನು ಆರಂಭಿಸಲು ಒಪ್ಪಿಗೆಯನ್ನು ನೀಡಲಾಗಿದೆ. ಕೆಲವೇ ದಿನಗಳಲ್ಲಿ ಬೀದರ್‌ನ ಜನರು ಮತ್ತೆ ವಿಮಾನದಲ್ಲಿ ಸಂಚಾರವನ್ನು ನಡೆಸಬಹುದಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್. ಕೆ. ಪಾಟೀಲ, ಬೀದರ್ ವಿಮಾನ ನಿಲ್ದಾಣದಿಂದ ಬೆಂಗಳೂರು-ಬೀದರ್-ಬೆಂಗಳೂರು ಮಾರ್ಗವಾಗಿ ವಿಮಾನಯಾನ ಕಾರ್ಯಾಚರಣೆ ಮಾಡಲು ನಿರ್ಣಯಿಸಲಾಗಿದೆ ಎಂದು ಹೇಳಿದರು.
2023ರ ಡಿಸೆಂಬರ್‌ನಿಂದ ಬೀದರ್‌ನಿಂದ ಯಾವುದೇ ವಿಮಾನಗಳು ಹಾರಾಟವನ್ನು ನಡೆಸುತ್ತಿಲ್ಲ. ಕೇಂದ್ರ ಸರ್ಕಾರ ಉಡಾನ್ ಸೇರಿದಂತೆ ಯಾವುದೇ ಯೋಜನೆಯಡಿಯೂ ಬೀದರ್‌ಗೆ ನೆರವು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಆದ್ದರಿಂದ ಈ ಕರ್ನಾಟಕ ಸರ್ಕಾರ ಸಹಾಯಧನವನ್ನು ಭರಿಸಿ ಬೀದರ್-ಬೆಂಗಳೂರು ನಡುವೆ ವಿಮಾನ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಕೆಲವೇ ದಿನಗಳಲ್ಲಿ ವಿಮಾನಯಾನ ಸಂಸ್ಥೆಗಳು ಬೀದರ್-ಬೆಂಗಳೂರು ನಡುವೆ ವಿಮಾನ ಸಂಪರ್ಕವನ್ನು ಆರಂಭಿಸುವ ನಿರೀಕ್ಷೆ ಇದೆ.
ಬೀದರ್ ವಿಮಾನ ನಿಲ್ದಾಣ: 2020ರ ಫೆಬ್ರವರಿಯಲ್ಲಿ ಕಲ್ಯಾಣ ಕರ್ನಾಟಕದ ಎರಡನೇ ವಿಮಾನ ನಿಲ್ದಾಣವಾದ ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿತ್ತು. 2008-09ರಲ್ಲಿ ಭಾರತೀಯ ವಾಯುಪಡೆಯ ಮನವೊಲಿಸಿ ವಿಮಾನ ತರಬೇತಿ ಕೇಂದ್ರದ ರನ್ ವೇ ಬಳಕೆ ಮಾಡಿಕೊಂಡು ಬೀದರ್-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭಿಸಲಾಗಿತ್ತು.
ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಇದನ್ನು ತೆಗೆದುಕೊಂಡು 15 ಕೋಟಿ ರೂ. ವೆಚ್ಚದಲ್ಲಿ 13.62 ಎಕರೆ ಜಮೀನಿನಲ್ಲಿ ಟರ್ಮಿನಲ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸಿತು. ಕಲಬುರಗಿ ಬಳಿಕ ಕಲ್ಯಾಣ ಕರ್ನಾಟಕದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣವಾಯಿತು.
2020ರ ಫೆಬ್ರವರಿ 7ರಂದು ಬೀದರ್-ಬೆಂಗಳೂರು ನಡುವೆ ಟ್ರೂ ಜೆಟ್ 72 ಸೀಟರ್‌ನ ವಿಮಾನ ಹಾರಾಟವನ್ನು ಆರಂಭಿಸಿತು. ಆದರೆ ಪ್ರಯಾಣಿಕರ ಕೊರತೆ ಮತ್ತು ಆರ್ಥಿಕ ನಷ್ಟದ ನೆಪವೊಡ್ಡಿ ಕೆಲವು ತಿಂಗಳುಗಳಲ್ಲಿಯೇ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಯಿತು.
ಪ್ರಯಾಣಿಕರ ಒತ್ತಾಯದ ಮೇರೆಗೆ 2022ರ ಜೂನ್ 15ರಂದು ಸ್ಟಾರ್ ಏರ್ ಬೀದರ್‌ನಿಂದ ವಿಮಾನ ಸೇವೆಯನ್ನು ಆರಂಭಿಸಿತು. ಆದರೆ 2023ರ ಡಿಸೆಂಬರ್ 23ರಂದು ಈ ವಿಮಾನ ಸೇವೆಯೂ ರದ್ದಾಗಿದೆ. ಬಳಿಕ ಬೀದರ್‌ನಿಂದ ಯಾವುದೇ ವಿಮಾನಗಳು ಹಾರಾಟವನ್ನು ನಡೆಸುತ್ತಿಲ್ಲ.
ಬೀದರ್‌ನಿಂದ 150 ಕಿ. ಮೀ. ದೂರದ ಹೈದರಾಬಾದ್‌ನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅಲ್ಲದೇ ಬೀದರ್ ಪಕ್ಕದ ಕಲಬುರಗಿಯಲ್ಲಿ ವಿಮಾನ ನಿಲ್ದಾಣವಿದ್ದು, ಪ್ರತಿದಿನ 5ಕ್ಕೂ ಅಧಿಕ ವಿಮಾನಗಳು ಹಾರಾಟ ನಡೆಸುತ್ತವೆ. ಆದರೆ ಬೀದರ್ ವಿಮಾನ ನಿಲ್ದಾಣಕ್ಕೆ ನೀರಸ ಪ್ರತಿಕ್ರಿಯೆ ಸಿಗುತ್ತಿದೆ.
ಕೆಲವು ದಿನಗಳ ಹಿಂದೆ ಬೀದರ್ ಸಂಸದ ಸಾಗರ್ ಖಂಡ್ರೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಕೆ. ರಾಮಮೋಹನ್ ನಾಯ್ಡು ಭೇಟಿಯಾಗಿ ಹೊಸದಾಗಿ ಬೀದರ್‌ನಿಂದ ವಿಮಾನ ಸಂಚಾರವನ್ನು ಆರಂಭಿಸಬೇಕು ಎಂದು ಮನವಿ ಮಾಡಿದ್ದರು.
ಅರಣ್ಯ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬೃಹತ್ ಕೈಗಾರಿಕೆ & ಮೂಲ ಸೌಕರ್ಯ ಖಾತೆ ಸಚಿವ ಎಂ. ಬಿ. ಪಾಟೀಲ ಭೇಟಿಯಾಗಿ ಬೀದರ್‌ನಿಂದ ವಿಮಾನ ಸೇವೆ ಪುನಃ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಈಗ ಕರ್ನಾಟಕ ಸರ್ಕಾರವೇ ಬೀದರ್‌ನಿಂದ ವಿಮಾನ ಹಾರಾಟವನ್ನು ಆರಂಭಿಸಲು ಮುಂದಾಗಿದೆ.












Click it and Unblock the Notifications