ಭುವನೇಶ್ವರಕ್ಕೆ ‘ಟೆಂಪಲ್ ಸಿಟಿ’ ಎಂಬ ಹೆಸರು ಯಾಕೆ? ಇಲ್ಲಿವೆ ಅಚ್ಚರಿ ಸಂಗತಿಗಳು
ಭಾರತವನ್ನು ದೇವಾಲಯಗಳ ದೇಶ ಎಂದು ಕರೆಯುತ್ತಾರೆ ಇದಕ್ಕೆ ಕಾರಣ ಇಲ್ಲಿರುವ ಆಧ್ಯಾತ್ಮಿಕ ಪರಂಪರೆ. ದೇಶದ ವಿವಿಧ ಭಾಗಗಳಲ್ಲಿ ಅನೇಕ ಪ್ರಸಿದ್ಧ ದೇವಸ್ಥಾನಗಳಿದ್ದರೂ, ಭುವನೇಶ್ವರ ನಗರವು ವಿಶೇಷವಾಗಿ ಟೆಂಪಲ್ ಸಿಟಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. ಒಡಿಶಾ ರಾಜ್ಯದ ರಾಜಧಾನಿಯಾಗಿರುವ ಈ ನಗರವು ಸಾವಿರಾರು ವರ್ಷಗಳ ಇತಿಹಾಸವಿರುವ, ವಾಸ್ತುಶಿಲ್ಪದ ಅದ್ಬುತತೆ ಮತ್ತು ಧಾರ್ಮಿಕ ಶ್ರೇಷ್ಟತೆಯನ್ನು ಒಟ್ಟುಗೂಡಿಸಿಕೊಂಡಿದೆ.
ಟೆಂಪಲ್ ಸಿಟಿ ಎಂದು ಯಾಕೆ ಕರೆಯುತ್ತಾರೆ?
ಭುವನೇಶ್ವರಕ್ಕೆ ಟೆಂಪಲ್ ಸಿಟಿ ಎಂದು ಕರೆಯಲಾಗುತ್ತದೆ. ಈ ಹೆಸರನ್ನು ದೊರೆಯಲು ಪ್ರಮುಖ ಕಾರಣವೆಂದರೆ ಇಲ್ಲಿ ಕಾಣಸಿಗುವ ದೇವಾಲಯಗಳು ಅಪಾರ ಸಂಖ್ಯೆಗಳಲ್ಲಿ ಇವೆ ಮತ್ತು ಅವುಗಳ ಪಾರಂಪರಿಕ ಮಹತ್ವ ಹೊಂದಿವೆ. ಪುರಾತನ ಕಾಲದಲ್ಲಿ ಈ ಪ್ರದೇಶದಲ್ಲಿ ಸುಮಾರು 700ಕ್ಕೂ ಹೆಚ್ಚು ದೇವಾಲಯಗಳಿದ್ದವು ಎಂದು ಹೇಳಲಾಗುತ್ತದೆ. ಪ್ರಸ್ತತ ದಿನಗಳಲ್ಲಿ ಅವುಗಳು ಕೆಲವೇ ದೇವಾಲಯಗಳು ಉಳಿದಿದ್ದರೂ, ಅವುಗಳ ಗತ ವೈಭವ ಮತ್ತು ಶಿಲ್ಪಕಲೆಯ ಅದ್ಭುತತೆ ಇನ್ನೂ ಕಣ್ಮನ ಸೆಳೆಯುವಂತಿವೆ.

ಇಲ್ಲಿನ ದೇವಾಲಯಗಳು ಮುಖ್ಯವಾಗಿ ಕಳಿಂಗ ವಾಸ್ತುಶಿಲ್ಪ ಅದರ ಶೈಲಿಯನ್ನು ತೋರಿಸುತ್ತವೆ. ಗೋಪುರಗಳ ಆಕಾರ, ಸೂಕ್ಷ್ಮ ಶಿಲ್ಪಕಲೆ ಮತ್ತು ಕಲ್ಲಿನಿಂದ ನಿರ್ಮಾಣ ಮಾಡಿದ ದೇವಾಲಯಗಳು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.
ಪರಂಪರೆ ಮತ್ತು ಇದರ ಇತಿಹಾಸ
ಭುವನೇಶ್ವರದ ಇತಿಹಾಸವು ಕ್ರಿ.ಶ. 6ನೇ ಶತಮಾನದಿಂದಲೇ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ. 6ನೇ ಶತಮಾನದಿಂದ 15ನೇ ಶತಮಾನವರೆಗೆ ಹಲವಾರು ರಾಜವಂಶಸ್ಥರು ಇಲ್ಲಿನ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ, ಆದ್ದರಿಂದ ಈ ನಗರವನ್ನು ಪ್ರಮುಖ ಆಧ್ಯಾತ್ಮಿಕ ಮತ್ತು ಪವಿತ್ರ ಕೇಂದ್ರವಾಗಿ ಬೆಳೆಸಿವೆ. ಈ ನಗರವು ಶೈವ ಮತ್ತು ವೈಷ್ಣವ ಸಂಪ್ರದಾಯಗಳ ಸಂಗಮವಾಗಿ ಖ್ಯಾತಿಯನ್ನು ಹೊಂದಿದೆ. ಶಿವನಿಗೂ ಮತ್ತು ವಿಷ್ಣುವಿಗೆ ಸಮರ್ಪಿತವಾದ ಅನೇಕ ದೇವಾಲಯಗಳು ಒಂದೆ ಪ್ರದೇಶಗಳಲ್ಲಿ ಕಾಣಸಿಗುತ್ತವೆ.

ಸುವರ್ಣ ತ್ರಿಭುಜದ ಭಾಗ
ಭುವನೇಶ್ವರವು ಪ್ರಸಿದ್ಧ ಪ್ರವಾಸೋದ್ಯಮ ವಲಯವಾದ 'ಸುವರ್ಣ ತ್ರಿಭುಜ'ದ ಒಂದು ಭಾಗವಾಗಿದೆ. ಇದರ ಜೊತೆಗೆ ಪುರಿ ಜಗನ್ನಾಥ ದೇವಾಲಯ ಮತ್ತು ಕೊನಾರ್ಕ್ ಸೂರ್ಯ ದೇವಾಲಯ ಸೇರಿ ಒಡಿಶಾದ ಪ್ರಮುಖ ಧಾರ್ಮಿಕ ಮತ್ತು ಪಾರಂಪರಿಕ ಸ್ಥಳಗಳನ್ನು ರೂಪಿಸುತ್ತವೆ. ಈ ಮೂರು ಸ್ಥಳಗಳಿಗೆ ಪ್ರತಿವರ್ಷವು ಲಕ್ಷಾಂತರ ಪ್ರವಾಸಿಗರು ಬೇಟಿ ನೀಡುತ್ತಾರೆ.
ಪ್ರಮುಖ ದೇವಾಲಯಗಳು ಮತ್ತು ಅವುಗಳ ವೈಶಿಷ್ಟ್ಯಗಳು
* ಲಿಂಗರಾಜ ದೇವಾಲಯ (Lingaraj Temple): 11ನೇ ಶತಮಾನದ ಈ ಭವ್ಯವಾದ ಶಿವನ ದೇವಾಲಯವು ಭುವನೇಶ್ವರದ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ ಶಿವ ಮತ್ತು ವಿಷ್ಣು ಎರಡರ ತತ್ವಗಳ ಸಮನ್ವಯ ಕಂಡುಬರುತ್ತದೆ.
* ರಾಜಾರಾಣಿ ದೇವಾಲಯ (Rajarani Temple): ಈ ದೇವಾಲಯವು ತನ್ನದೆ ಆದ ಸುಂದರ ಕಲ್ಲಿನ ಶಿಲ್ಪಕಲೆಗಾಗಿ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು 'ಲವ್ ಟೆಂಪಲ್' ಎಂದೂ ಕರೆಯಲಾಗುತ್ತದೆ.
* ಮುಕ್ತೇಶ್ವರ ದೇವಾಲಯವು (Muktesvara Temple): ಈ ದೇವಾಲಯವು ಶಿವನಿಗೆ ಸಮರ್ಪಿತವಾದ ಅದ್ಭುತ ದೇವಾಲಯವಾಗಿದೆ. ಕಳಿಂಗ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿ ಭಾವಿಸಲಾಗುತ್ತದೆ. ಇದರ ತೊರಣ ದ್ವಾರ ಅತ್ಯಂತ ವಿಶಿಷ್ಟವಾಗಿದೆ.
* ಅನಂತ ವಾಸುದೇವ ದೇವಾಲಯ (Ananta Vasudeva Temple): 13ನೇ ಶತಮಾನದ ಪ್ರಸಿದ್ಢ ವೈಷ್ಣವ ದೇವಾಲಯವಾಗಿದ್ದು ವಿಷ್ಣುವಿನ ಅವತಾರವಾದ ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ ಎಂದು ಹೇಳಲಾಗುತ್ತದೆ. ಶೈವ ದೇವಾಲಯಗಳ ಮಧ್ಯೆ ಇರುವ ವೈಷ್ಣವ ದೇವಾಲಯವಾಗಿ ಇದು ವಿಶಿಷ್ಟ ಸ್ಥಾನ ಪಡೆದಿದೆ
* ವಿಷ್ಣು ದೇವಾಲಯ (Vishnu Temple): 12ನೇ ಶತಮಾನದ ಈ ದೇವಾಲಯವು ವಿಷ್ಣು ಭಕ್ತರಿಗೆ ಪ್ರಮುಖ ತಾಣವಾಗಿದೆ.
ಭುವನೇಶ್ವರವು ಕೇವಲ ಪವಿತ್ರ ಕ್ಷೇತ್ರ ಮಾತ್ರವಲ್ಲ, ಇದು ಇತಿಹಾಸ ಮತ್ತು ಸಂಸ್ಕೃತಿಯನ್ನು ಜೀವಂತವಾಗಿ ಉಳಿಸುವ ಸಂಗ್ರಹಾಲಯವೂ ಆಗಿದೆ. ಇಲ್ಲಿ ಭೇಟಿ ನೀಡುವವರು ಪುರಾತನ ದೇವಾಲಯಗಳ ಜೊತೆಗೆ ಸ್ಥಳೀಯ ಸಂಸ್ಕೃತಿ, ಹಬ್ಬಗಳು ಮತ್ತು ಪರಂಪರೆಗಳನ್ನು ಅನುಭವಿಸಬಹುದು. ವಾಸ್ತುಶಿಲ್ಪದ ಅದ್ಭುತತೆ ಮತ್ತು ಆಧ್ಯಾತ್ಮಿಕ ವಾತಾವರಣದಿಂದ 'ಟೆಂಪಲ್ ಸಿಟಿ ಆಫ್ ಇಂಡಿಯಾ' ಎಂಬ ಹೆಸರನ್ನು ಸಮರ್ಥನಿಯವಾಗಿ ಉಳಿಸಿಕೊಂಡಿದೆ. ಇದು ಪ್ರವಾಸಿಗರು ಮತ್ತು ಭಕ್ತರು ಜೀವನದಲ್ಲಿ ಕನಿಷ್ಠ ಒಮ್ಮೆಯಾದರು ಭೇಟಿ ನೀಡಲೇಬೇಕಾದ ಪವಿತ್ರ ತಾಣವಾಗಿದೆ.














Click it and Unblock the Notifications