ಬೆಂಗಳೂರು-ಮಂಗಳೂರು ರೈಲು ಟರ್ಮಿನಲ್, ವೇಳಾಪಟ್ಟಿ ಬದಲು: ವಿವರಗಳು

ಬೆಂಗಳೂರು, ಅಕ್ಟೋಬರ್ 03: ಉದ್ಯಾನ ನಗರಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸುವ ರೈಲುಗಳ ವೇಳಾಪಟ್ಟಿ ಮತ್ತು ಟರ್ಮಿನಲ್‌ನಲ್ಲಿ ಬದಲಾವಣೆಯಾಗಲಿದೆ. 151 ದಿನಕ್ಕೆ ಅನ್ವಯವಾಗುವಂತೆ ರೈಲು ಯಶವಂತಪುರ ಜಂಕ್ಷನ್ ಬದಲು, ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಮೂಲಕ ಸಂಚಾರವನ್ನು ನಡೆಸಲಿದೆ. ರೈಲು ಸಂಚಾರ ನಡೆಸುವ ಪ್ರಯಾಣಿಕರು ಈ ಕುರಿತು ಮಾಹಿತಿ ತಿಳಿದುವುದು ಉತ್ತಮ.

ನೈಋತ್ಯ ರೈಲ್ವೆಯ ಸೂಚನೆಯಂತೆ ದಕ್ಷಿಣ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಯಶವಂತಪುರ ಜಂಕ್ಷನ್‌ನಲ್ಲಿ ಪ್ರಮುಖ ಕಾಮಗಾರಿಯನ್ನು ಕೈಗೊಂಡ ಕಾರಣಕ್ಕೆ ರೈಲು ಸಂಖ್ಯೆ 16511/ 16512 ಕೆಎಸ್ಆರ್ ಬೆಂಗಳೂರು-ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಟರ್ಮಿನಲ್ ಬದಲಾವಣೆ ಮಾಡಲಾಗಿದೆ.

Bengaluru Mangaluru Kannur Train Terminal And Schedule Change

ನವೆಂಬರ್ 1, 2024 ರಿಂದ 31 ಮಾರ್ಚ್ 2025ರ ತನಕ ಮಂಗಳೂರು ಮೂಲಕ ಸಂಚಾರ ನಡೆಸುವ ಕೆಎಸ್ಆರ್ ಬೆಂಗಳೂರು-ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಟರ್ಮಿನಲ್ ಬದಲಾವಣೆಯಾಗಲಿದೆ. ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ಯಶವಂತಪುರ ಮೂಲಕ ಸಂಚಾರ ನಡೆಸುವಂತೆ ಮಾಡಲಾಗಿದೆ. ಆದ್ದರಿಂದ ರೈಲು ಮೆಜೆಸ್ಟಿಕ್‌ ನಿಲ್ದಾಣಕ್ಕೆ ಆಗಮಿಸುವುದಿಲ್ಲ.

ಬದಲಾವಣೆ ವಿವರಗಳು: ರೈಲು ನಂಬರ್ 16511/ 16512 ಕೆಎಸ್ಆರ್ ಬೆಂಗಳೂರು-ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ಯಶವಂತಪುರ ಮೂಲಕ ಸಂಚಾರ ನಡೆಸಲಿದೆ.

ರೈಲು ಸಂಖ್ಯೆ 16511 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ 20.00 ಗಂಟೆಗೆ ಹೊರಟು, ಯಶವಂತಪುರಕ್ಕೆ 21.25ಕ್ಕೆ ಆಗಮಿಸಿ 21.45ಕ್ಕೆ ಹೊರಡಲಿದೆ ಎಂದು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

ಅದೇ ರೀತಿ ರೈಲು ಸಂಖ್ಯೆ 16512 ಕಣ್ಣೂರಿನಿಂದ 17.05ಕ್ಕೆ ಹೊರಟು ಯಶವಂತಪುರಕ್ಕೆ 6.10 ಆಗಮಿಸಿ, 6.30ಕ್ಕೆ ಹೊರಟು, 7.45ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ತಲುಪಲಿದೆ. ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ಪ್ರವಾಸದ ಯೋಜನೆ ರೂಪಿಸಿ ಎಂದು ಕರೆ ನೀಡಲಾಗಿದೆ.

ಪ್ರಯಾಣಿಕರು ಈ ರೈಲುಗಳ ಪರಿಷ್ಕೃತ ಸಮಯಕ್ಕಾಗಿ, ಯಾವುದೇ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ ಅಥವಾ ವೆಬ್‌ಸೈಟ್‌ Www.enquiry.indianrail.gov.in ಭೇಟಿ ನೀಡಿ.

ವಿವಿಧ ಕಾಮಗಾರಿಗಳು: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ಪುನರ್ ಅಭಿವೃದ್ಧಿಗೊಳಿಸಲಾಗುತ್ತಿದೆ. 1, 2, 3 ಮತ್ತು 4ನೇ ಪಿಟ್‌ಲೈನ್ ಕಾರ್ಯದ ಹಿನ್ನಲೆಯಲ್ಲಿ ನವೆಂಬರ್ 1 ರಿಂದ ಮಾರ್ಚ್ 31ರ ತನಕ 8 ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ. ಕೆಎಸ್ಆರ್ ಬೆಂಗಳೂರು ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಯಶವಂತಪುರ ಜಂಕ್ಷನ್ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.

ಮುಂಬರುವ 20-30 ವರ್ಷಗಳಲ್ಲಿ ರೈಲು ನಿಲ್ದಾಣದಲ್ಲಿ ಉಂಟಾಗುವ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸುಮಾರು 350 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದ ರೈಲುಗಳಿಗೆ ಇದು ಪ್ರಮುಖ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದ ಮಾದರಿಯಲ್ಲಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಈಗಾಗಲೇ ಪ್ರಾಥಮಿಕ ಸಿವಿಲ್ ಕಾಮಗಾರಿಗಳು ಆರಂಭವಾಗಿದ್ದು, ನವೆಂಬರ್‌ 1ರಿಂದ ಮುಖ್ಯ ಕಾಮಗಾರಿಗೆ ಚಾಲನೆ ದೊರೆಯಲಿದೆ. ಆದ್ದರಿಂದ ನಿಲ್ದಾಣದ ವಿವಿಧ ಪಿಟ್‌ಲೈನ್‌ಗೆ ಬರುವ ರೈಲುಗಳನ್ನು ರದ್ದುಗೊಳಸಲಾಗಿದೆ, ಇಲ್ಲವೇ ಬೇರೆ ನಿಲ್ದಾಣಗಳಿಗೆ ಬದಲಾವಣೆ ಮಾಡಲಾಗಿದೆ. 2025ರ ಮಾರ್ಚ್‌ಗೆ ಕಾಮಗಾರಿಗಳು ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+