New Year 2025: ಹೊಸ ವರ್ಷದ ಆಚರಣೆಗೆ ಬೆಂಗಳೂರು ಖಾಲಿ ಖಾಲಿ: ಪ್ರಮುಖ ಪ್ರವಾಸಿ ತಾಣಗಳು ಫುಲ್
ಹೊಸ ವರ್ಷ ಸ್ವಾಗತಿಸುವ ಬಹುತೇಕ ಬೆಂಗಳೂರಿಗರು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಹೀಗಾಗಿ ಬೆಂಗಳೂರು ಬಹುತೇಕ ಖಾಲಿ ಖಾಲಿಯಾಗಿದ್ದು ರೆಸಾರ್ಟ್, ಹೋಮ್ ಸ್ಟೇ, ಲಾಡ್ಜ್ ಹಾಗೂ ರಾಜ್ಯದ ಪ್ರಮುಖ ವೀಕ್ಷಣಿಯ ಸ್ಥಳಗಳಲ್ಲಿ ಜನ ಸಾಗರವೇ ಕಂಡುಬರುತ್ತಿದೆ.
ಹೌದು... ಪ್ರತೀ ಬಾರಿ ಹೊಸ ವರ್ಷವನ್ನು ಸ್ವಾಗತಿಸಲು ರಾಜ್ಯದ ಜನ ಗೋವಾದತ್ತ ಹೆಚ್ಚಾಗಿ ಮುಖ ಮಾಡುತ್ತಿದ್ದರು. ಇದೀಗ 2025 ಅನ್ನು ಸ್ವಾಗತಿಸಲು ಜನ ರಾಜ್ಯದ ಇತರ ಪ್ರಮುಖ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳತ್ತ ಹೆಚ್ಚಾಗಿ ಪ್ರಯಾಣ ಬೆಳೆಸಿದ್ದಾರೆ. ರಾಜ್ಯದ ಕಡಲ ತೀರಗಳು, ದೇವಸ್ಥಾನಗಳು, ಹಸಿರು ತಾಣಗಳಿಗೆ ಹೆಚ್ಚಾಗಿ ಜನ ಭೇಟಿ ನೀಡುತ್ತಿದ್ದಾರೆ. ಹಾಗಾದರೆ ಈ ಬಾರಿ ಹೊಸ ವರ್ಷಕ್ಕೆ ಜನ ಹೆಚ್ಚಾಗಿ ಆಯ್ಕೆ ಮಾಡಿಕೊಂಡಿರುವ ಕಡಲ ತೀರಗಳು ಯಾವುವು?

ರಾಜ್ಯದ ಪ್ರಮುಖ ಕಡಲ ತೀರಗಳಿಗೆ ಭೇಟಿ- 2025
ಕರ್ನಾಟಕದ ಕಾರವಾರದ ಕರಾವಳಿ ತೀರದಲ್ಲಿರುವ ದ್ವೀಪ ದೇವ್‌ಭಾಗ್. ಕಾಳಿ ನದಿ ಹರಿದು ಬಂದು ಈ ಸಮುದ್ರವನ್ನು ಸೇರುವುದರಿಂದ ಹಾಗೂ ದಟ್ಟವಾದ ಕಾಡನ್ನು ಇದು ಹೊಂದಿರುವುದರಿಂದ ಪ್ರಕೃತಿ ಪ್ರೇಮಿಗಳಿಗೆ ಹಾಗೂ ಸಹಾಸಿಗಳಿಗೆ ಒಳ್ಳೆಯ ತಾಣವಾಗಿದೆ. ಜೊತೆಗೆ ಮುರುಡೇಶ್ವರ ಬೀಚ್, ಮಂಗಳೂರು ಬೀಚ್, ಗೋಕರಣ ಬೀಚ್, ಕಾರವಾರ, ಮಲ್ಪೆ ಬೀಚ್ ಗಳಲ್ಲಿ ಜನ ಹೆಚ್ಚಾಗಿ ಕಂಡುಬರುತ್ತಿದ್ದಾರೆ.

ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ಭೇಟಿ- 2025
ಹೊಸ ವರ್ಷವನ್ನು ದೇವರ ಆಶೀರ್ವಾದದ ಮೂಲಕ ಸ್ವಾಗತಿಸಲು ಜನ ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಹಂಪಿಯ ವಿರೂಪಾಕ್ಷ ದೇವಸ್ಥಾನ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ, ಶೃಗೇರಿಯ ವಿದ್ಯಾಶಂಕರ ದೇವಸ್ಥಾನ, ಮುರುಡೇಶ್ವರ ಶಿವ ದೇವಸ್ಥಾನ, ಹಂಪಿ ವಿಠ್ಠಲ ದೇವಸ್ಥಾನ, ಗೋಕರ್ಣದ ಮಹಾಬಲೇಶ್ವರ, ಬೇಲೂರು ಚೆನ್ನಕೇಶ್ವರ ದೇವಸ್ಥಾನ, ಕೋಲಾರ ಕೋಟಿಲಿಂಗೇಶ್ವರ, ಪಟ್ಟದಕಲ್ಲು ಮಲ್ಲಿಕಾರ್ಜುನ, ಬಲ್ಲಿಗಾವಿ ಕೇದಾರೇಶ್ವರ, ಐಹೊಳೆ ಗ್ರಾಮದ ದುರ್ಗಾ ದುಡಿ, ಬಾಗಲಕೋಟೆ ಬಾದಾಮಿ ಗುಹಾ ದೇವಾಲಯಗಳಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ರಾಜ್ಯದ ಹಸಿರು ತಾಣಗಳಿಗೆ ಭೇಟಿ- 2025
ಪ್ರಸ್ತುತ ಚುಮು ಚುಮು ಚಳಿ ಶುರುವಾಗಿದೆ. ಬೆಳಗಿನ ಮಂಜು ಹಿತ ನೀಡುತ್ತಿದೆ. ಈ ಸಂದರ್ಭದಲ್ಲಿ ಹಚ್ಚ ಹಸಿರು ತಾಣಗಳಿಗೆ ಭೇಟಿ ನೀಡಿದರೆ ಅದರಲ್ಲಿರುವ ಮಜಾನೇ ಬೇರೆ. ವಿಶೇಷವಾಗಿ ಜಲಪಾತಗಳು ಇರುವ ಸ್ಥಳಗಳು ಹಾಗೂ ದೇವಸ್ಥಾನಗಳಿಗೆ ಜನ ಕಿಕ್ಕಿರುದು ಭೇಟಿ ನೀಡುತ್ತಿದ್ದಾರೆ.

ಚಿಕ್ಕಮಗಳೂರಿನ ಕಲ್ಲತ್ತಗಿರಿ, ಅಬ್ಬೆ ಫಾಲ್ಸ್, ಝರಿ ಫಾಲ್ಸ್ ಮತ್ತು ಹೆಬ್ಬೆ ಫಾಲ್ಸ್ ನೋಡುಗರಿಗೆ ಹಿತ ನೀಡುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅಲ್ಲಿನ ವಾತಾವರಣ, ಶುದ್ಧ ಗಾಳಿ, ಸುತ್ತಲಿನ ಪ್ರಕೃತಿ, ಮಸುಕಾದ ಮಂಜು, ಸೌಂದರ್ಯದ ನೈಜ ಅನುಭೂತಿ ಸಿಗುವುದು ಈ ಪ್ರದೇಶಗಳಲ್ಲಿ ಎಂದೇ ಹೇಳಬಹುದು. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲಿ ತುಂಬಿ ಹರಿಯುವ ನದಿಗಳು, ಸಮುದ್ರ ತನ್ನದೇ ಆದ ರೀತಿಯಲ್ಲಿ ಮನಸ್ಸಿಗೆ ಮುದ ನೀಡುತ್ತವೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಜನರ ಸಂಖ್ಯೆ ಕೂಡ ಹೆಚ್ಚಾಗಿದೆ.
ಮಡಿಕೇರಿಯಲ್ಲಿ ಭಾಗಮಂಡಲ, ಮಂದಾಲ್‌ಪಟ್ಟಿ, ಪುಷ್ಪಗಿರಿ ಬೆಟ್ಟ, ಮಕ್ಕಳಗುಡಿ ಬೆಟ್ಟ, ಶಾಂತಳ್ಳಿ, ಕುಂದಳ್ಳಿ, ಕುಮಾರಳ್ಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಳ್ಳಯ್ಯನಗಿರಿ, ಕುದುರೆಮುಖ, ಬಾಬಾ ಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಕೊಟ್ಟಿಗೆಹಾರ, ಶೃಂಗೇರಿ ಅರಣ್ಯ ಪ್ರದೇಶ, ಕಲ್ಲತ್ತಗಿರಿಯನ್ನು ಜನ ನೋಡಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಗೋಕರ್ಣ, ಯಾಣ, ಶಿರಸಿ, ಭಟ್ಕಳ, ಕೋಗಾರಘಟ್ಟ, ಕರಿಕಾನ ಪರಮೇಶ್ವರಿ, ದಾಂಡೇಲಿ, ಸಾತೊಡ್ಡಿ, ಜೇನುಕಲ್ಲು ಹಾಗೂ ಹಾಸನ ಜಿಲ್ಲೆಯಲ್ಲಿ ರೊಟ್ಟಿಕಲ್ಲು, ಬೆಟ್ಟದಮನೆ, ಮರಗುಂದ, ಮಂಜರಾಬಾದ್ ಕೋಟೆ, ಕೆಂಪುಹೊಳೆಗೆ ಹೆಚ್ಚು ಜನ ಭೇಟಿ ನೀಡುತ್ತಿದ್ದಾರೆ.
ಅಷ್ಟೇ ಅಲ್ಲ ಜಲಪಾತದ ತವರೂರು ಎಂದೇ ಹೆಸರುವಾಸಿಯಾಗಿರುವ ಶಿವಮೊಗ್ಗದಲ್ಲಿ ಸಾಕಷ್ಟು ಪ್ರದೇಶಗಳಿದ್ದು ಆಗುಂಬೆ ಮತ್ತು ಜೋಗ ಪ್ರಮುಖ ಆಕರ್ಷಣೆ ಸ್ಥಳಗಳಿಗೆ ಜನ ಭೇಟಿ ನಿಡುತ್ತಿದ್ದಾರೆ. ಇದರಿಂದಾಗಿ ಈ ಭಾಗದ ಹೋಮ್‌ಸ್ಟೈ, ರೆಸಾರ್ಟ್ಗಳು ಭರ್ತಿ ಆಗಿವೆ. ಅಲ್ಲದೆ ಖಾಸಗಿ ಕ್ಯಾಬ್, ಟಿಟಿ, ಬಸ್, ಕಾರ್ ಬುಕ್ಕಿಂಗ್ ಫುಲ್ ಆಗಿದೆ. ಒಟ್ಟಿನಲ್ಲಿ ಚಳಿಗಾಲದ ಮಂಜನ್ನು ಆಸ್ವಾದಿಸಲು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ಭೇಟಿ ನೀಡುವುದು ಅವಶ್ಯಕವೆಂದೇ ಹೇಳಬಹುದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications