Bengaluru 1 Day Trip: ಯಶವಂತಪುರ - ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಮುತ್ಯಾಲಮಡುವು ಜಲಪಾತ ಪ್ರವಾಸ, ಪ್ಯಾಕೇಜ್ ವಿವರ
Bengaluru 1 Day Trip: ಬೇಸಿಗೆ ರಜೆ ಪ್ರಾರಂಭವಾಗಿದೆ. ಈ ರಜೆ ಅವಧಿಯಲ್ಲಿ ನೀವು ಒಂದು ದಿನ ಪ್ರವಾಸ ಮಾಡುವುದಕ್ಕೆ ಸೂಕ್ತವಾದ ಜಾಗಗಳಲ್ಲಿ ಯಶವಂತಪುರದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮೂಲಕ ಮುತ್ಯಾಲಮಡುವು ಜಲಪಾತಕ್ಕೆ ಪ್ರವಾಸ ಪ್ಲ್ಯಾನ್ ಮಾಡಿಕೊಳ್ಳಬಹುದು. ಒಂದು ದಿನದಲ್ಲಿ ಮುತ್ಯಾಲಮಡುವು ಜಲಪಾತಕ್ಕೆ ಪ್ರವಾಸ ಮಾಡುವುದು ಹೇಗೆ, ಈ ಜಾಗದ ವಿಶೇಷವೇನು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ಬಸ್ ಪ್ಯಾಕೇಜ್ ವ್ಯವಸ್ಥೆ ಹೇಗಿದೆ, ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ ಹಾಗೂ ಪ್ರಯಾಣದ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಯಶವಂತಪುರದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮೂಲಕ ಮುತ್ಯಾಲಮಡುವು ಜಲಪಾತಕ್ಕೆ ಪ್ರವಾಸ ಹೋಗುವುದು ಬೆಂಗಳೂರಿನಲ್ಲಿ ಒಂದು ದಿನದ ಪ್ರವಾಸಕ್ಕೆ (One Day Trip) ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದಾಗಿದೆ. KSTDC (Karnataka State Tourism Development Corporation) ಯಶವಂತಪುರದಿಂದ ಈ ಮಾರ್ಗದಲ್ಲಿ ಪ್ರತಿದಿನ ವಿಶೇಷ ಪ್ರವಾಸದ ಪ್ಯಾಕೇಜ್ ಅನ್ನು ಈಗಾಗಲೇ ಪರಿಚಯಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವಿಶೇಷ ಹಾಗೂ ಮುತ್ಯಾಲಮಡುವು ಜಲಪಾತದ ವಿಶೇಷತೆ ನೋಡೋಣ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು (Bannerghatta Biological Park) ಬೆಂಗಳೂರಿನ ದಕ್ಷಿಣಕ್ಕೆ ಸುಮಾರು 22 ಕಿ.ಮೀ ದೂರದಲ್ಲಿದೆ. ಇದು ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ. ಈ ಉದ್ಯಾನವನದ ವ್ಯಾಪ್ತಿಯು 731.88 ಹೆಕ್ಟೇರ್ ಇದೆ. ಇದರಲ್ಲಿ ಮೃಗಾಲಯ, ಆಕರ್ಷಕ ಸಫಾರಿ ಪಾರ್ಕ್ (ಸಿಂಹ, ಹುಲಿ, ಕರಡಿ), ಭಾರತದ ಮೊದಲ ಚಿಟ್ಟೆ ಪಾರ್ಕ್ ಹಾಗೂ ರಕ್ಷಣಾ ಕೇಂದ್ರವು ಸಹ ಇದೆ. ಬೆಂಗಳೂರು ನಗರದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಈ ಪ್ರದೇಶವು ಒಂದು ದಿನದ ಪ್ರವಾಸಕ್ಕೆ ಅತ್ಯಂತ ಸೂಕ್ತವಾಗಿದೆ. ಪ್ರಕೃತಿ ಪ್ರಿಯರಿಗೆ ಈ ಪ್ರದೇಶವು ಹೊಸ ಅನುಭವವನ್ನೇ ನೀಡಬಲ್ಲದು.
ಈ ಪ್ರದೇಶದ ಪ್ರಮುಖ ಆಕರ್ಷಣೆಗಳ ಮಾಹಿತಿ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಸಫಾರಿಗೆ ಫೇಮಸ್ ಆಗಿದೆ. ಸಿಂಹ, ಹುಲಿ, ಬಿಳಿ ಹುಲಿ, ಕರಡಿ ಸೇರಿದಂತೆ ವಿವಿಧ ಪ್ರಾಣಿಗಳನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಚಿಟ್ಟೆ ಪಾರ್ಕ್. ದೇಶದ ಮೊದಲ ಚಿಟ್ಟೆ ಪಾರ್ಕ್, ವೈವಿಧ್ಯಮಯ ಚಿಟ್ಟೆಗಳ ತಾಣ ಇಲ್ಲಿದೆ. ಚಿಟ್ಟೆಗಳ ಕಲರವ ನೋಡಬಹುದು. ಸುಸಜ್ಜಿತ ಮೃಗಾಲಯವಿದ್ದು, ವಿವಿಧ ಪ್ರಾಣಿ-ಪಕ್ಷಿಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಬೆಳಿಗ್ಗೆ 9:30 ರಿಂದ ಸಂಜೆ 5:00 ರವರೆಗೆ (ಮಂಗಳವಾರ ರಜೆ) ಇರಲಿದೆ.
ಮುತ್ಯಾಲಮಡುವು ಜಲಪಾತದ ವಿಶೇಷತೆ
ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮುತ್ಯಾಲಮಡುವು ಜಲಪಾತ ಇದೆ. ಇತ್ತೀಚಿನ ವರ್ಷಗಳಲ್ಲಿ ಈ ಜಲಪಾತದ ಗತವೈಭವ ಮರುಕಳಿಸಿದೆ. ಇದು ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ಆನೇಕಲ್‌ನಲ್ಲಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಹಾಗೂ ವಸತಿ ಗೃಹಗಳು ಇಲ್ಲಿವೆ.

KSTDC ಬಸ್ ಪ್ಯಾಕೇಜ್ ವ್ಯವಸ್ಥೆ ಸಂಪೂರ್ಣ ವಿವರ
ಬೆಂಗಳೂರಿನಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮುತ್ಯಾಲಮಡುವು ಜಲಪಾತ ಮತ್ತು ಇತರ ಸ್ಥಳಗಳನ್ನು ಒಳಗೊಂಡ ಒಂದು ದಿನದ ಪ್ರವಾಸದ ಪ್ಯಾಕೇಜ್ ಅನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪರಿಚಯಿಸಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಮುತ್ಯಾಲಮಡುವು ಜಲಪಾತ ಪ್ಯಾಕೇಜ್ ವಿವರ
ಪ್ರವಾಸದ ಅವಧಿ: ಒಂದು ದಿನ
ನಿರ್ಗಮನ ಸ್ಥಳ: ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರ
ನಿರ್ಗಮನ ಸಮಯ: ಬೆಳಿಗ್ಗೆ 07:15
ದೂರವಾಣಿ / ಸಂಪರ್ಕ ಸಂಖ್ಯೆ: 080-43344334/ 8970650070
ಪ್ಯಾಕೇಜಿಂಗ್ ಸಮಯದ ವಿವರ
ಸಮಯ: ವಿವಿಧ ಪ್ರದೇಶ ವೀಕ್ಷಣೆ ವಿವರ
ಬೆಳಿಗ್ಗೆ 7.15: ಕೆಎಸ್‌ಟಿಡಿಸಿ-ಬುಕಿಂಗ್ ಕೌಂಟರ್‌ನಿಂದ ನಿರ್ಗಮನ ಯಶವಂತಪುರ
ಬೆಳಿಗ್ಗೆ 8:45ರಿಂದ 9:30: ಬನ್ನೇರುಘಟ್ಟದ ಮಯೂರ ವನಶ್ರೀಯಲ್ಲಿ ಉಪಾಹಾರ
ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:30: ಸಫಾರಿ, ಮೃಗಾಲಯ ವೀಕ್ಷಣೆ, ಚಿಟ್ಟೆ ಪಾರ್ಕ್ ವೀಕ್ಷಣೆ
ಮಧ್ಯಾಹ್ನ 1:30ರಿಂದ 2:15: ಬನ್ನೇರುಘಟ್ಟದ ಮಯೂರ ವನ ಶ್ರೀಯಲ್ಲಿ ಊಟ
3:30ರಿಂದ ಸಂಜೆ 6:30: ಮುತ್ಯಾಲಮಡುವು ಜಲಪಾತ, ದೋಣಿ ವಿಹಾರ ಮತ್ತು ಸೂರ್ಯಾಸ್ತ ವೀಕ್ಷಣೆ
ಸಂಜೆ 06:30ರಿಂದ ರಾತ್ರಿ 9: ಕೆಎಸ್‌ಟಿಡಿಸಿ - ಬುಕಿಂಗ್ ಕೌಂಟರ್‌ಗೆ ಪ್ರಯಾಣ, ಯಶವಂತಪುರ
ಪ್ಯಾಕೇಜ್ ಬುಕ್ಕಿಂಗ್ ಲಿಂಕ್ ವಿವರ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ಯ ವೆಬ್ ಸೈಟ್: https://kstdc.co/tour_packages/yeshwanthpur-bannerghatta-muthyala-maduvu/ ಭೇಟಿ ನೀಡುವ ಮೂಲಕ ನೀವು ಯಶವಂತಪುರ - ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಮುತ್ಯಾಲಮಡುವು ಜಲಪಾತ ಪ್ರವಾಸ ಪ್ಯಾಕೇಜಿಂಗ್ ಬುಕ್ ಮಾಡಿಕೊಳ್ಳಬಹುದಾಗಿದೆ.
ದರ ವಿವರ: ಈ ಪ್ಯಾಕೇಜಿಂಗ್‌ನ ಮೊತ್ತವು ಒಬ್ಬರಿಗೆ 1,680 ರೂಪಾಯಿ ಆಗಿರುತ್ತದೆ.
ಹೆಚ್ಚಿನ ಮಾಹಿತಿಗೆ: 080-43344334/ 8970650070












Click it and Unblock the Notifications