ಬೆಳಗಾವಿ-ಸಿಕಂದರಾಬಾದ್ ರೈಲು ಮಂಗಳೂರು ತನಕ ವಿಸ್ತರಣೆ
ಬೆಳಗಾವಿ, ಮೇ 08; ಕರಾವಳಿ ಭಾಗದ ಜನರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಬೆಳಗಾವಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಲಾಗಿದೆ. 7/5/2023 ರಿಂದ ಒಂದು ತಿಂಗಳ ಕಾಲ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ರೈಲು ಸಂಖ್ಯೆ 07335/ 07336 ಬೆಳಗಾವಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಣೆ ಮಾಡುವ ಪ್ರಸ್ತಾಪಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಇಲಾಖೆ ರೈಲಿನ ನಿಲ್ದಾಣ, ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ.

ಈ ಪರಿಷ್ಕೃತ ಆದೇಶ 7/5/2023 ರಿಂದ 31/5/2023ರ ತನಕ ಬೆಳಗಾವಿಯಿಂದ
8/5/2023 ರಿಂದ 1/6/2023ರ ತನಕ ಮಂಗಳೂರುನಿಂದ ಜಾರಿಯಲ್ಲಿರಲಿದೆ ಎಂದು ರೈಲ್ವೆ ಇಲಾಖೆ ಆದೇಶದಲ್ಲಿ ತಿಳಿಸಿದೆ.
ವೇಳಾಪಟ್ಟಿಯ ವಿವರ; ರೈಲು ಸಂಖ್ಯೆ 07335 ಬೆಳಗಾವಿ-ಮಂಗಳೂರು ಬೆಳಗಾವಿಯಿಂದ ಪ್ರತಿದಿನ ಮಧ್ಯಾಹ್ನ 1.10ಕ್ಕೆ ಮೇ 7 ರಿಂದ ಮೇ 31ರ ತನಕ ಹೊರಡಲಿದೆ. ಮಂಗಳೂರನ್ನು ಮರುದಿನ ಮಧ್ಯಾಹ್ನ 12.50ಕ್ಕೆ ತಲುಪಲಿದೆ.
ರೈಲು ನಂಬರ್ 07336 ಮಂಗಳೂರು-ಬೆಳಗಾವಿ ರೈಲು ಮಂಗಳೂರಿನಿಂದ ಪ್ರತಿದಿನ ಮಧ್ಯಾಹ್ನ 3.40ಕ್ಕೆ ಮೇ 8ರಿಂದ ಜೂನ್ 1ರ ತನಕ ಹೊರಡಲಿದೆ. ಬೆಳಗಾವಿಯನ್ನು ಮರುದಿನ ಮಧ್ಯಾಹ್ನ 3.55ಕ್ಕೆ ತಲುಪಲಿದೆ.
ನಿಲ್ದಾಣಗಳ ವಿವರ; ಬೆಳಗಾವಿ-ಮಂಗಳೂರು ನಡುವಿನ ರೈಲು ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಎಸ್ಎಸ್‌ಎಸ್ ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ದರೋಜಿ, ಬಳ್ಳಾರಿ, ಗುಂತಕಲ್, ಅಧೋನಿ, ಕೋಸಗಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ, ಚಿತ್ತಾಪುರ, ಸೇರಂ, ತಂದೂರು, ವಿಕಾರಾಬಾದ್, ಲಿಂಗಂಪಲ್ಲಿ, ಬೇಗಂಪೇಟ್, ಸಿಕಂದರಾಬಾದ್, ಕಾಜಿಪೇಟ್, ವಾರಂಗಲ್, ಮಹಬೂಬಾಬಾದ್, ದೋರಣಗಲ್, ಬ್ರಾಹ್ಮಚಲಂ ನಿಲ್ದಾಣದ ಮೂಲಕ ಸಾಗಲಿದೆ.
ಮಂಗಳೂರು-ಬೆಳಗಾವಿ ನಡುವಿನ ರೈಲು ನಿಲ್ದಾಣಗಳು; ಮಂಗಳೂರು-ಬೆಳಗಾವಿ ಮಾರ್ಗದ ರೈಲು ಭದ್ರಾಚಲಂ, ದೋರಣಕಲ್, ವಾರಂಗಲ್, ಕಾಜಿಪೇಟ್, ಸಿಕಂದರಾಬಾದ್, ಬೇಗಂಪೇಟ್, ಲಿಂಗಪಲ್ಲಿ, ವಿಕಾರಾಬಾದ್, ಸೇರಂ, ಚಿತ್ತಾಪುರ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಕೊಸಗಿ, ಅಧೋನಿ, ಗುಂತಕಲ್, ಬಳ್ಳಾರಿ, ದರೋಜಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.












Click it and Unblock the Notifications