Kedaranath Tour Package: ಬೆಂಗಳೂರಿನಿಂದ 9 ದಿನಗಳ ಕೇದಾರನಾಥ ಟೂರ್ ಪ್ಯಾಕೇಜ್ ಮಾಹಿತಿ ಇಲ್ಲಿದೆ
ಉತ್ತರಖಂಡದ ನಾಲ್ಕು ಪವಿತ್ರವಾದ ಹಿಂದೂ ದೇವಾಲಯಗಳಲ್ಲಿ ಕೇದಾರನಾಥ ಕೂಡ ಒಂದು. ಉಳಿದ ದೇವಾಲಯಗಳೆಂದರೆ ಯಮುನೋತ್ರಿ, ಗಂಗೋತ್ರಿ ಮತ್ತು ಬದರಿನಾಥವಾಗಿದೆ. ಇವುಗಳನ್ನು ಜೀವನದಲ್ಲಿ ಒಮ್ಮೆಯಾದರೂ ದರ್ಶಿಸಿದರೆ ಮೋಕ್ಷ ಲಭಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಪ್ರತೀ ವರ್ಷ ದೇಶದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.
ಚಾರ್‌ಧಾಮ್ ಯಾತ್ರೆಯು ಮೇ10 ರಿಂದ ಪ್ರಾರಂಭವಾಗುತ್ತಿದೆ. ಕೇದಾರನಾಥ ದೇವಾಲಯ ಮೇ10 ರಿಂದ ಭಕ್ತರಿಗಾಗಿ ತೆರೆಯಲಿದೆ. ಹೀಗಾಗಿ ನೀವೇನಾದ್ರೂ ಉತ್ತರಖಂಡದ ಕೇದಾರನಾಥ ದೇವಸ್ಥಾನಕ್ಕೆ ಹೋಗಬೇಕು ಅಂದುಕೊಂಡಿದ್ದರೆ ಇಲ್ಲಿದೆ ನಿಮಗಾಗಿ ಟೂರ್ ಪ್ಯಾಕೇಜ್.

ಬೆಂಗಳೂರಿನಿಂದ 9 ದಿನಗಳ ಕೇದಾರನಾಥ ಟೂರ್ ಪ್ಯಾಕೇಜ್ ಇದಾಗಿದೆ. ಈ ಪ್ಯಾಕೇಜ್ ದರ 18500 ರೂಪಾಯಿ. ಈ ಪ್ಯಾಕೇಜ್ ಹೋಗಿ ಬರುವ ರೈಲು ಪ್ರಯಾಣ ದರ, ಅಲ್ಲಿ ಸುತ್ತಾಡಲು ಬಸ್ ಹಾಗೂ ಊಟ ತಿಂಡಿ ರೂಮ್ ವ್ಯವಸ್ಥೆ ಕೂಡ ಒಳಗೊಂಡಿದೆ. ಇದನ್ನು ಬೆಂಗಳೂರಿನ ರವಿ ಕಿರಣ್ ಟೂರ್ ಪ್ಯಾಕೇಜ್ ಆರ್ಗನೈಝೇಷನ್ಸ್ ಆಯೋಜಿಸುತ್ತಿದೆ.
ಈ ಕೇದರನಾಥ ಟೂರ್ ಪ್ಯಾಕೇಜ್ ಒಟ್ಟು ಒಂಬತ್ತು ದಿನಗಳ ಟೂರ್ ಪ್ಯಾಕೇಜ್ ಅಗಿದೆ. ಬೆಂಗಳೂರಿನಿಂದ ರೈಲು ಪ್ರಯಾಣ ಆರಂಭವಾಗುತ್ತದೆ. ಹಾಗಾದರೆ ನೀವು ಪ್ರಯಾಣಿಸುವ ರೈಲು ದರವೆಷ್ಟು? ಅಲ್ಲಿ ವೀಕ್ಷಿಸುವ ಪ್ರಮುಖ ಸ್ಥಳಗಳ ಬಗೆಗಿನ ಮಾಹಿತಿ ಇಲ್ಲಿದೆ.

ವೀಕ್ಷಿಸುವ ಪ್ರಮುಖ ಸ್ಥಳಗಳು:-
*ಹರಿದ್ವಾರ ಗಂಗಾ ಆರತಿ
*ಚಂಡಿ ದೇವಿ ದೇವಸ್ಥಾನ
*ಕೇದಾರನಾಥ ದೇವಸ್ಥಾನ
*ಗುಪ್ತಕಾಶಿ-ಅರ್ಥನಾರೀಶ್ವರ ದೇವಸ್ಥಾನ
*ಬದರಿನಾಥ ದೇವಸ್ಥಾನ
*ಧ ಫಸ್ಟ್ ಇಂಡಿಯನ್ ವಿಲೇಜ್- ಮಾನಾಕ್ಸೈಡ್*ದೇವ್ ಪ್ರಯಾಗ್
*ರಿಶಿಕೇಷ
ಬೆಂಗಳೂರಿನಿಂದ ರೈಲು ಮೂಲಕ ಪ್ರಯಾಣ ಮಾಡಬೇಕಾಗುತ್ತದೆ. ಅಲ್ಲಿ ಸ್ಥಳಗಳನ್ನು ನೋಡಲು ಬಸ್ ವ್ಯವಸ್ಥೆ ಇರಲಿದೆ. ಊಟ ತಿಂಡಿ ಹಾಗೂ ರೂಮ್ ವ್ಯವಸ್ಥೆ ಕೂಡ ಪ್ಯಾಕೇಜ್ ಒಳಗೊಂಡಿರುತ್ತದೆ.
ಪ್ಯಾಕೇಜ್ ರೈಲು ಪ್ರಯಾಣ ದರ ಹೇಗಿದೆ..
*ನಾನ್ ಎಸಿ ಸ್ಲೀಪರ್ ಕೋಚ್ 18500/-
*ಎಸಿ ಕೋಚ್ 20,000 /-
*ಟೂ ವೇ ಎಸಿ ಟಿಕೆಟ್ 21,500/-
(ರೈಲಿನಲ್ಲಿ ಊಟ,ತಿಂಡಿ ವ್ಯವಸ್ಥೆ ನೀವೇ ಮಾಡಿಕೊಳ್ಳಬೇಕು)
ನೀವು ಕೇದಾರನಾಥ ಜೊತೆಗೆ ಬದರಿನಾಥ ನೋಡಿಕೊಂಡು ಬರಬೇಕು ಅಂದುಕೊಂಡಿದ್ದರೆ, ಅದು 12 ದಿನದ ಪ್ಯಾಕೇಜ್ ಆಗಿದೆ. ಇದಕ್ಕೆ 27,000 ಪ್ಯಾಕೇಜ್ ದರ ಇದೆ. 27,000 ಪ್ಯಾಕೇಜ್ ಪಡೆಯುವ ಒಬ್ಬ ವ್ಯಕ್ತಿ ಒಂದು ರೂಂನಲ್ಲಿ ಮೂರು ಜನರೊಂದಿಗೆ ಶೇರ್ ಮಾಡಿಕೊಳ್ಳಬೇಕು. 30,000 ರೂಪಾಯಿ ಪೇ ಮಾಡಿದರೆ ಒಂದು ರೂಮ್‌ನಲ್ಲಿ ಇಬ್ಬರೊಂದಿಗೆ ಇರಬೇಕಾಗುತ್ತದೆ. ಇಂಥಹ ಹಲವಾರು ಪ್ಯಾಕೇಜ್‌ಗಳು ಈಗ ಇರಲಿದ್ದು ನೀವು ಕೂಡ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.












Click it and Unblock the Notifications