Get Updates
Get notified of breaking news, exclusive insights, and must-see stories!

Travel Guide: ಅಕ್ಟೋಬರ್‌ ತಿಂಗಳಲ್ಲಿ ಭೇಟಿ ನೀಡಬೇಕಾದ ಬಾಗಲಕೋಟೆಯ ಪ್ರವಾಸಿ ತಾಣಗಳಿವು.....

ಗಣೇಶ ಚತುರ್ಥಿ ಮುಗಿತು. ಇನ್ನೇನು ದಸರಾ ದೀಪಾವಳಿ ಹಬ್ಬಗಳ ಆಗಮನಕ್ಕೆ ಹೆಚ್ಚಿನ ಸಮಯವಿಲ್ಲ. ಕೆಲ ದಿನಗಳು ಕಳೆದರೆ ಹಬ್ಬದ ತಯಾರಿಯಲ್ಲಿ ನೀವು ಬ್ಯೂಸಿ ಆಗಬಹುದು. ಹೀಗಾಗಿ ಗಣೇಶ ಹಬ್ಬದ ಮೂಡ್‌ನಿಂದ ದಸರಾ ದೀಪಾವಳಿ ಹಬ್ಬದ ಮೂಡ್‌ಗೆ ನೀವು ಹೊಂದಿಕೊಳ್ಳಲು ಸ್ವಲ್ಪ ವಿಶ್ರಾಂತಿ ಅಗತ್ಯವಿದೆ ಅಂತಾದರೆ ಒಂದೊಳ್ಳೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು.

ಈ ಬಾರಿ ವೀಕೆಂಡ್‌ಗೆ ನೀವೇನಾದ್ರು ಪ್ರವಾಸ ಹೋಗಲು ಬಯಸುತ್ತಿದ್ದರೆ ನಾವು ನಿಮಗೆ ಬಾಗಲಕೋಟೆಗೆ ಪ್ರಯಾಣ ಬೆಳೆಸಲು ಸಲಹೆ ನೀಡುತ್ತೇವೆ. ಯಾಕೆಂದರೆ ಬಾಗಲಕೋಟೆಯಲ್ಲಿ ಭಾರತದಲ್ಲಿ ಮಹತ್ವದ ಯಾತ್ರಾಸ್ಥಳವಿದೆ. ಮಲಪ್ರಭಾ ನದಿಯ ದಡದಲ್ಲಿ ಐಹೊಳೆ, ಕೃಷ್ಣಾನದಿ ಹರಿಯುವ ಆಲಮಟ್ಟಿ ಆಣೆಕಟ್ಟು, ಸ್ಮಾರಕಗಳಿರುವ ಪಟ್ಟದಕಟ್ಟು ಹೀಗೆ ಅನೇಕ ಪ್ರಮುಖ ಪ್ರವಾಸಿತಾಣಗಳಿವೆ. ಬಾಗಲಕೋಟೆಯಲ್ಲಿ ನೋಡುವ ಪ್ರವಾಸಿ ತಾಣಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Information in Kannada about must-see tourist spots in Bagalkote district

ಕೂಡಲಸಂಗಮ

ಪ್ರಸಿದ್ಧ ಹಿಂದೂ ಕವಿ ಹಾಗೂ ತತ್ವಜ್ಞಾನಿ ಬಸವಣ್ಣನವರ ಹೆಸರು ಕೇಳಿದರೆ ತಕ್ಷಣ ನೆನಪಿಗೆ ಬರುವುದು ಕೂಡಲ ಸಂಗಮ. ಇದು ಮಲಪ್ರಭಾ ನದಿ ಮತ್ತು ಕೃಷ್ಣಾ ನದಿಯ ಸಂಗಮದ ಸ್ಥಳವಾಗಿದೆ. ಈ ಅದ್ಬುತ ಸ್ಥಳವನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ.

ಈ ಜನಪ್ರಿಯ ಸ್ಥಳವು ಹಿಂದೂಗಳಿಗೆ ಪ್ರಮುಖ ಯಾತ್ರಾಸ್ಥಳವಾಗಿದೆ. ಈ ಪಟ್ಟಣವು ಶಿವನಿರ್ಪಿತವಾದ ಹಲವಾರು ದೇವಾಲಯಗಳನ್ನು ಹೊಂದಿದೆ. ಇದು ಬಸವಣ್ಣನವರ ಜನ್ಮಸ್ಥಳವೂ ಆಗಿದೆ. ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಸಂಗಮೇಶ್ವರ ದೇವಾಲಯ 12ನೇ ಶತಮಾನದಲ್ಲಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟಿತು. ಇದು ಬಾಗಲಕೋಟೆಯಿಂದ 51km ದೂರದಲ್ಲಿದೆ.

Information in Kannada about must-see tourist spots in Bagalkote district

ಐಹೊಳೆ

ಇನ್ನೂ ಐಹೊಳೆ. ಐಹೊಳೆಯಲ್ಲಿ ಕಂಡುಬರುವ ದೇವಾಲಯಗಳ ಸಮೂಹವು ಅನೇಕರ ಗಮನವನ್ನು ಸೆಳೆಯುತ್ತದೆ. ಹೀಗಾಗಿ ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಬಾಕಿಯಿರುವ ಪಟ್ಟಿಯಲ್ಲಿದೆ. ಈ ಐತಿಹಾಸಿಕ ನಗರದಲ್ಲಿ 125ಕ್ಕೂ ಹೆಚ್ಚು ದೇವಾಲಯಗಳನ್ನು ಒಳಗೊಂಡಿರುವ 20 ದೇವಾಲಯ ಸಂಕೀರ್ಣಗಳನ್ನು ಕಾಣಬಹುದು. ಇವೆಲ್ಲವೂ ಚಾಲುಕ್ಯರ ಹೊರತು ಬೇರೆ ಯಾರಿಂದಲೂ ನಿರ್ಮಿಸಲ್ಪಟ್ಟಿಲ್ಲ.

Information in Kannada about must-see tourist spots in Bagalkote district

ಮಹಾಕೂಟ

ಮಹಾಕೂಟ ಬಾಗಕೋಟೆಯ ಒಂದು ಹಳ್ಳಿ. ಇದು ಹಲವಾರು ಸುಂದರವಾದ ದೇವಾಲಯ ಸಮೂಹಗಳಿಗೆ ಹೆಸರುವಾಗಿದೆ. ಇವುಗಳಲ್ಲಿ ಹೆಚ್ಚಿನವು ಶಿವ ದೇವರಿಗೆ ಅರ್ಪಿತವಾದುದಾಗಿದೆ. ಈ ದೇವಾಲಯಗಳ ವಾಸ್ತುಶೈಲಿಯು ದ್ರಾವಿಡ ಮತ್ತು ನಾಗರ ಶೈಲಿಗಳ ಶ್ರೇಷ್ಠ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ ಹಾಗೂ ಚಾಲುಕ್ಯರ ವಾಸ್ತುಶಿಲ್ಪವನ್ನು ಹೊಂದಿದೆ.

Information in Kannada about must-see tourist spots in Bagalkote district

ಪಟ್ಟದಕಲ್ಲು

ಬಾಗಲಕೋಟೆಯಲ್ಲಿ ಪಟ್ಟದಕಲ್ಲು ಪ್ರೇಕ್ಷಣೀಯ ಸ್ಥಳವಾಗಿದೆ. ಈ ಹಿಂದೆ ಪಟ್ಟದಕಲ್ಲನ್ನು ಪಟ್ಟದ ಕಿಸುವೊಲಲ್ ಎಂದು ಕರೆಯಲಾಗುತ್ತಿತ್ತು. ಇದನ್ನು ಅಕ್ಷರಶ: 'ಕಿರೀಟದ ಮಾಣಿಕ್ಯಗಳ ನಗರ' ಎಂದು ಅನುವಾದಿಸಲಾಗುತ್ತದೆ. ಬಾಗಲಕೋಟೆಯ ಈ ಸುಂದರ ನಗರವು 8ನೇ ಶತಮಾನದಲ್ಲಿ ಚಾಲುಕ್ಯ ರಾಜವಮಶದಿಂದ ನಿರ್ಮಿಸಲಾದ ರಾಜಮನೆತನದ ಕಟ್ಟಡಗಳು ಮತ್ತು ಸ್ಮಾರಕಗಳಿಂದಾಗಿ ಜನಪ್ರಿಯವಾಗಿದೆ.

Information in Kannada about must-see tourist spots in Bagalkote district

ಬಾದಾಮಿ

ಬಾದಾಮಿಯು ಪ್ರಕೃತಿ ಮತ್ತು ಇತಿಹಾಸದ ಸಂಪೂರ್ಣ ಅನುಭವವನ್ನು ನೀಡುತ್ತದೆ. ಈ ದೇವಾಲಯವು ಅದರಲ್ಲೂ ಬಾದಾಮಿಯು ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ಜಗತ್ಪ್ರಸಿದ್ದ ಗುಹಾಂತರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿ ಅವರ ಅತ್ಯುತ್ತಮ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ.

ಆಲಮಟ್ಟಿ ಆಣೆಕಟ್ಟು

ಇಷ್ಟಕ್ಕೇ ನಿಮ್ಮ ಪ್ರವಾಸ ಪೂರ್ಣಗೊಳ್ಳುವುದಿಲ್ಲ. ಸಂಜೆ ಹೊತ್ತು ಕೊಂಚ ವಿಶ್ರಾಂತಿಯೊಂದಿಗೆ ನಿಮ್ಮ ಪ್ರವಾಸ ಮುಗಿಸಬೇಕು ಅಂದುಕೊಂಡಿದ್ದರೆ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಬಹುದು. ಆದರೆ ಇದು ಬಾಗಲಕೋಟೆಯಲ್ಲಿಲ್ಲ. ಬದಲಿಗೆವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲುಕಿನಲ್ಲಿ ಇದೆ. ಇದನ್ನು ಲಾಲ ಬಹಾದ್ದೂರ ಶಾಸ್ತ್ರಿ ಸಾಗರ ಎಂದು ಕರೆಯಲಾಗುತ್ತದೆ. ಸಂಜೆ ಒಂದು ಐದು ಗಂಟೆ ಸುಮಾರಿಗೆ ಆಣೆಕಟ್ಟನ್ನು ನೋಡಿಕೊಂಡು ಬಳಿಕ ಕಾರಂಜಿಯನ್ನು ವೀಕ್ಷಿಸಬಹುದು.

ಬಾಗಲಕೋಟೆಗೆ ಭೇಟಿ ನೀಡಲು ಉತ್ತಮ ಸಮಯ

ಅಕ್ಟೋಬರ್‌ನಿಂದ ಫೆಬ್ರವರಿ ವರೆಗೆ ಬಾಗಲಕೋಟೆಗೆ ಭೇಟಿ ನೀಡಲು ಅತ್ಯುತ್ತಮ ಋತುವಾಗಿದೆ.

ಬಾಗಲಕೋಟೆ ತಲುಪುವುದು ಹೇಗೆ

ರಸ್ತೆ ಮೂಲಕ:-

*ಹುಬ್ಬಳ್ಳಿಯಿಂದ ಬಾಗಲಕೋಟೆಗೆ NH52 ಮೂಲಕ 122.6 ಕಿ.ಮೀ

*ವಿಜಯಪುರದಿಂದ ಬಾಗಲಕೋಟೆಗೆ NH52 ಮೂಲಕ 83.8 ಕಿ.ಮೀ

*ಬೆಳಗಾವಿಯಿಂದ ಬಾಗಲಕೋಟಕ್ಕೆ ಬಾಚಿ-ರಾಯಚು ಮೂಲಕ 140.5 ಕಿ.ಮೀ

*ಬೆಂಗಳೂರಿನಿಂದ ಬಾಗಲಕೋಟೆಗೆ NH 48 ಮೂಲಕ 529.0 ಕಿ.ಮೀ


ರೈಲಿನಿಂದ :-

* (ಬೆಂಗಳೂರಿನಿಂದ ಬಾಗಲಕೋಟೆ) ರೈಲಿನ ಹೆಸರು: ಬಸವ ಎಕ್ಸ್‌ಪ್ರೆಸ್ ರೈಲು ಸಂಖ್ಯೆ: 17307 ನಿರ್ಗಮನ ಸಮಯ 17:00

*(ಹುಬ್ಬಳ್ಳಿಯಿಂದ ಬಾಗಲಕೋಟ) ರೈಲಿನ ಹೆಸರು: UBL SUR PASS ರೈಲು ಸಂಖ್ಯೆ: 56906 ನಿರ್ಗಮನ ಸಮಯ 13:00

*(ಬಿಜಾಪುರದಿಂದ ಬಾಗಲಕೋಟೆ) ರೈಲಿನ ಹೆಸರು: ಸೋಲಾಪುರ - ಧಾರವಾಡ ಪ್ಯಾಸೆಂಜರ್ ರೈಲು ಸಂಖ್ಯೆ: 56903 ನಿರ್ಗಮನ ಸಮಯ: 02:55

ಏರೋಪ್ಲೇನ್ ಮೂಲಕ:-

ನಾಗ್ಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಜಿಲ್ಲಾ ಕೇಂದ್ರದಿಂದ ಸರಿಸುಮಾರು 151 ಕಿಲೋಮೀಟರ್ ದೂರದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+