Karnataka Temples: ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ 15 ದೇವಾಲಯಗಳ ಪಟ್ಟಿ ಇಲ್ಲಿದೆ, ಪರಿಶೀಲಿಸಿ
ಬೆಂಗಳೂರು, ಏಪ್ರಿಲ್ .07: ಪ್ರವಾಸಿಯೊಬ್ಬರು ನಮ್ಮ ರಾಜ್ಯದಲ್ಲಿ ಭೇಟಿ ನೀಡಬಹುದಾದ ಅತ್ಯಂತ ಸುಂದರ, ಆಕರ್ಷಕ ದೇವಾಲಯಗಳ ಪಟ್ಟಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬ ಹಿಂದುವೂ ಒಮ್ಮೆಯಾದರೂ ಈ ದೇವಾಲಯಗಳಿಗೆ ಭೇಟಿ ನೀಡಲೇಬೇಕು ಎಂದು ಅವರು ಹೇಳಿದ್ದಾರೆ. ಅವರು, ರಾಜ್ಯದಾದ್ಯಂತ 15 ದೇವಸ್ಥಾನಗಳ ಪಟ್ಟಿ ನೀಡಿದ್ದಾರೆ. ಇನ್ಯಾಕೆ ತಡ ನೀವು ಹೊರಡಿ, ನಿಮ್ಮ ಕುಟುಂಬದವರನ್ನು ಕರೆದುಕೊಂಡು ಹೊಗಿ.
1. *ಬೇಲೂರಿನ ಚೆನ್ನಕೇಶವ ದೇವಸ್ಥಾನ*
ಜನಪ್ರಿಯ ಪ್ರವಾಸಿ ತಾಣವಾಗಿರುವ ಬೇಲೂರು ಹಾಸನದಿಂದ ಸುಮಾರು 38 ಕಿ.ಮೀ ದೂರದಲ್ಲಿದೆ. ಚೆನ್ನಕೇಶವ ದೇವಾಲಯವು ನೃತ್ಯ, ಬೇಟೆ ಮತ್ತು ಇತರ ಅನೇಕ ಭಂಗಿಗಳಲ್ಲಿ 80 ಕ್ಕೂ ಹೆಚ್ಚು ಮದನಿಕಾ ಶಿಲ್ಪಗಳನ್ನು ಹೊಂದಿದೆ. ಬೇಲೂರು ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

2. *ಹಂಪಿಯ ವಿಠ್ಠಲ ದೇವಸ್ಥಾನ*
ಸಂಗೀತದ ಕಂಬಗಳು ಮತ್ತು ಕಲ್ಲಿನ ರಥದಂತಹ ಅದ್ಭುತವಾದ ಕಲ್ಲಿನ ರಚನೆಗಳಿಗೆ ಹೆಸರುವಾಸಿಯಾಗಿದೆ ಹಂಪಿ. 50 ರೂಪಾಯಿಯ ಕರೆನ್ಸಿ ನೋಟುಗಳಲ್ಲಿ ಕಾಣಿಸಿಕೊಂಡಿರುವ ಈ ದೇವಾಲಯವು 15 ನೇ ಶತಮಾನದಷ್ಟು ಹಿಂದಿನದು. ಇದನ್ನು ವಿಜಯನಗರ ಸಾಮ್ರಾಜ್ಯದ ಅರಸರಲ್ಲಿ ಒಬ್ಬನಾದ ರಾಜ IIನೇ ದೇವರಾಯನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಹಂಪಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಪ್ರಮುಖ ಆಕರ್ಷಣೆಗಳಿಂದ ಕೂಡಿದೆ.
3. *ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ*
ಕರ್ನಾಟಕದ ಅತಿ ದೊಡ್ಡ ದೇವಾಲಯ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ. ಇದನ್ನು 19 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಗೋಪುರವು ಒಂಬತ್ತು ಮಹಡಿಗಳನ್ನು ಹೊಂದಿದ್ದು, ಗೋಪುರವು 120 ಅಡಿಗಳನ್ನು ಹೊಂದಿದೆ. ಗಾರೆ ಚಿತ್ರಗಳು, ಅಲಂಕಾರಗಳು ಮತ್ತು ಏಳು ಚಿನ್ನದ ಕಲಶಗಳನ್ನು ಹೊಂದಿದೆ.
4. *ಮೈಸೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ*
ಈ ದೇವಾಲಯವು ಮೈಸೂರಿನ ಪೂರ್ವದ ಅಂಚಿನಲ್ಲಿರುವ ಚಾಮುಂಡಿ ಬೆಟ್ಟದ ಮೇಲೆ 1000 ಅಡಿ ಎತ್ತರದಲ್ಲಿದೆ. ದುರ್ಗಾ ದೇವಿಯು ಇಲ್ಲಿ 'ಚಾಮುಂಡಿ' ರೂಪದಲ್ಲಿ ಪೂಜಿಸುವ ದೇವತೆಯಾಗಿದ್ದು, 'ಶಕ್ತಿ'ಯ ಉಗ್ರ ರೂಪ. ಚಾಮುಂಡೇಶ್ವರಿ ರಾಕ್ಷಸ ಮಹಿಷಾಸುರನ ಸಂಹಾರಕಿ ಎಂದು ಕರೆಯಲಾಗಿದೆ. ಮೈಸೂರಿಗೆ ಭೇಟಿ ನೀಡುವವರು ಚಾಮುಂಡಿ ಬೆಟ್ಟಕ್ಕೆ ಹೋಗುವುದ ವಾಡಿಕೆ.
5. *ಹಂಪಿ ವಿರೂಪಾಕ್ಷ ದೇವಸ್ಥಾನ*
ವಿರೂಪಾಕ್ಷ ದೇವಾಲಯವು ವಿನಾಶದ ನಂತರವು ಹಲವು ವರ್ಷಗಳಿಂದ ಉಳಿದುಕೊಂಡಿದೆ. ಹಂಪಿಯ ಅವಶೇಶಗಳ ನಡುವೆ ಇನ್ನೂ ಎತ್ತರವಾಗಿ ಮತ್ತು ರಾಜ್ಯದ ಹೆಮ್ಮೆಯಾಗಿ ಇನ್ನು ಉಳಿದುಕೊಂಡಿದೆ. ಇದು ಹಂಪಿಯ ಏಕೈಕ ದೇವಾಲಯವಾಗಿದ್ದು, ಪ್ರಧಾನ ದೇವತೆಯೊಂದಿಗೆ ಸಕ್ರಿಯ ಪೂಜಾ ಕಾರ್ಯಗಳನ್ನು ಇನ್ನೂ ನಡೆಸಲಾಗುತ್ತಿದೆ. ಹಂಪಿ ವಿರೂಪಾಕ್ಷನ ಜಾತ್ರೆ ಪ್ರಸಿದ್ಧವಾದದ್ದು.

6. *ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನ*
ಕ್ರಿ.ಶ 1338 ರಲ್ಲಿ ನಿರ್ಮಿಸಲಾದ ಇದು ಹೊಯ್ಸಳ (ಚಾಲುಕ್ಯ) ಮತ್ತು ದ್ರಾವಿಡ ವಾಸ್ತುಶೈಲಿಗಳೆರಡನ್ನೂ ಒಟ್ಟುಗೂಡಿಸಿ ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾದ ವಿಶಿಷ್ಟ ಸ್ಮಾರಕವಾಗಿದೆ. ಇದು ತನ್ನ ಪೂರ್ವ ಭಾಗದಲ್ಲಿ ಹನ್ನೆರಡು ಸ್ತಂಭಗಳನ್ನು ಹೊಂದಿದೆ, ಪ್ರತಿಯೊಂದೂ ಹನ್ನೆರಡು ರಾಶಿಚಕ್ರದ ಚಿಹ್ನೆಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ.
7. *ಪಟ್ಟದಕಲ್ಲಿನ ಮಲ್ಲಿಕಾರ್ಜುನ ದೇವಸ್ಥಾನ*
ಈ ದೇವಾಲಯವನ್ನು ಚಾಲುಕ್ಯರ ದೊರೆ ವಿಕ್ರಮಾದಿತ್ಯನ ಎರಡನೇ ಹೆಂಡತಿ 745 AD ನಲ್ಲಿ ನಿರ್ಮಿಸಿದ್ದಾರೆ. ಇದು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ದೇವಸ್ಥಾನದ ದೇವರುಗಳ ಸುಂದರವಾದ ಕೆತ್ತನೆಗಳು ಮತ್ತು ರಾಮಾಯಣ, ಮಹಾಭಾರತ ಮತ್ತು ಪಂಚತಂತ್ರದ ದೃಶ್ಯಗಳ ಕಂಬಗಳನ್ನು ಹೊಂದಿದೆ.

8. *ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ*
ಈ ಶಿವ ವಿಷ್ಣು ದೇವಾಲಯವನ್ನು ವಿಶಿಷ್ಟವಾದ ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ಸಾಬೂನು ಕಲ್ಲು ಬಳಸಿ ನಿರ್ಮಿಸಲಾಗಿದೆ.
9. *ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನ*
ಕೋಲಾರದ ಕಮ್ಮಸಂದ್ರ ಗ್ರಾಮದಲ್ಲಿರುವ ಈ ಕೋಟಿಲಿಂಗೇಶ್ವರ ದೇವಾಲಯವು ಏಷ್ಯಾದಲ್ಲಿಯೇ ಅತಿ ದೊಡ್ಡ ಮತ್ತು ಎತ್ತರದ ಶಿವಲಿಂಗವನ್ನು ಹೊಂದಿದ್ದು ಜನಪ್ರಿಯವಾಗಿದೆ. ಇಲ್ಲಿ ವರ್ಷಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.
10. *ಐಹೊಳೆಯ ದುರ್ಗಾ ದೇವಸ್ಥಾನ*
ದುರ್ಗಾ ದೇವಾಲಯವನ್ನು 8 ನೇ ಶತಮಾನದ ಆರಂಭದಲ್ಲಿ ಸ್ಥಾಪಿಸಲಾಯಿಗಿದೆ. ಇದನ್ನು ಮೂಲತಃ ಸೂರ್ಯನಿಗೆ ಸಮರ್ಪಿಸಲಾಗಿತ್ತು. ಇದು ಶೈವ, ವೈಷ್ಣವ, ಶಕ್ತಿ ಮತ್ತು ವೈದಿಕ ದೇವತೆಗಳ ಕಲಾಕೃತಿಗಳನ್ನು ಚಿತ್ರಿಸುತ್ತದೆ.

11. *ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ*
ಇದು ಮೈಸೂರು ನಗರದಿಂದ ಪೂರ್ವಕ್ಕೆ 38 ಕಿಮೀ ದೂರದಲ್ಲಿದೆ. ಈ ಚೆನ್ನಕೇಶವ ದೇವಸ್ಥಾನ ಮುಖ್ಯವಾಗಿ ಅದರ ಸಂಕೀರ್ಣ ಕೆತ್ತನೆಗಳು, ಶಾಸನಗಳು ಮತ್ತು ಚಿತ್ರಣಗಳಿಗೆ ಹೆಸರುವಾಸಿಯಾಗಿದೆ. ದೇವಾಲಯವು ಸಣ್ಣ ದೇವಾಲಯಗಳ ಸ್ತಂಭಗಳ ಆವರಣದೊಂದಿಗೆ ಪ್ರಾಂಗಣದಲ್ಲಿ ಇದೆ.
12. *ಬಾಗಲಕೋಟೆಯ ಬಾದಾಮಿ ಗುಹಾ ದೇವಾಲಯ*
ಗುಹೆಗಳಲ್ಲಿ ಸುತ್ತುವರಿದಿರುವ ಮೂರು ಬ್ರಾಹ್ಮಣ ಮತ್ತು ಒಂದು ಜೈನ ದೇವಾಲಯದ ಈ ನಾಲ್ಕು ದೇವಾಲಯಗಳ ಗುಂಪು ಬಾದಾಮಿ ಕೋಟೆಯ ಎದುರಿನ ಬೆಟ್ಟದಿಂದ ಕೆತ್ತಲಾಗಿದೆ. ಚಾಲುಕ್ಯ ರಾಜ ಮಂಗಳೇಶನು ಈ ಗುಹಾಂತರ ದೇವಾಲಯಗಳನ್ನು ಪೂರ್ಣಗೊಳಿಸಲು ಕಾರಣನಾಗಿದ್ದರು. ಗುಹೆಗಳನ್ನು ತಲುಪಲು ಸುಮಾರು 2000 ಮೆಟ್ಟಿಲುಗಳನ್ನು ಹತ್ತಬೇಕು.
13. *ಉಡುಪಿಯ ಶ್ರೀ ಕೃಷ್ಣ ಮಠ*
ಕೃಷ್ಣ ಮಠವನ್ನು 13 ನೇ ಶತಮಾನದಲ್ಲಿ ವೈಷ್ಣವ ಸಂತ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು. ಅವರು ವೇದಾಂತದ ದ್ವೈತ ಸಿದ್ದಾಂತದ ಸ್ಥಾಪಕರು. ಮಧ್ವಾಚಾರ್ಯರು 'ಗೋಪಿಚಂದನ'ದ ದೊಡ್ಡ ತುಂಡಿನಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಕಂಡುಕೊಂಡರು ಎಂದು ನಂಬಲಾಗಿದೆ.
14. *ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ*
ಈ ದೇವಾಲಯಅದರ ವಿವರವಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. 14 ನೇ ಶತಮಾನದಲ್ಲಿ ಈ ದೇವಾಲಯವನ್ನು ಲೂಟಿ ಮಾಡಲಾಯಿತು. ಅದರ ನಂತರ ಅದು ಪಾಳು ಬಿದ್ದಿತು. ಪ್ರಸಿದ್ಧ ದೇವಾಲಯವು ದೇವಾಲಯವನ್ನು ನಿರ್ಮಿಸಿದ ರಾಜ ವಿಷ್ಣುವರ್ಧನ ಹೊಯ್ಸಳೇಶ್ವರನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ ಎಂದು ತಿಳಿದಿದೆ.

15. *ಮುರುಡೇಶ್ವರ ಶಿವ ದೇವಾಲಯ*
ಈ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಮೂರು ಕಡೆ ಅರಬ್ಬಿ ಸಮುದ್ರದಿಂದ ಸುತ್ತುವರಿದಿದೆ. ಇದು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಯನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
-
ಸಿಂದಗಿಯ ಗೊಲ್ಲಾಳೇಶ್ವರ ಜಾತ್ರಾ ಮಹೋತ್ಸವ ಶುರು: 70 ಅಡಿ ರಥೋತ್ಸವಕ್ಕೆ ದಿನಗಣನೆ, ಐತಿಹಾಸಿಕ ಹಿನ್ನೆಲೆ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications