ಇನ್ನ ಮುದ್ದಾಣು ಮಹಾತೊಭಾರ ಶ್ರೀ ಮಹಾಲಿಂಗೇಶ್ವರ

ಪೌರಾಣಿಕ ಹಿನ್ನೆಲೆ : ಭಾರ್ಗವ ಮುನಿಗಳು ಇಲ್ಲಿಗೆ ಸಮೀಪದ ಬೆಟ್ಟದಲ್ಲಿ ಶಿವನನ್ನು ಧ್ಯಾನಿಸುತ್ತಾ ಅಘೋರ ತಪಸ್ಸು ನಡೆಸಿದಾಗ ಮುನಿಗಳಿಗೆ ಶಿವ ಪ್ರತ್ಯಕ್ಷನಾದ. ಬೇಕಾದ ವರವನ್ನು ಕೇಳೆಂದು ಭಾರ್ಗವ ಮುನಿಗಳಿಗೆ ಶಿವ ಹೇಳಿದಾಗ, ಈ ಕ್ಷೇತ್ರದಲ್ಲಿ ಬಂದು ನೆಲೆಸುವಂತೆ ಮುನಿಗಳು ದೇವರನ್ನು ಪ್ರಾರ್ಥಿಸಿದರು. ಮುನಿಗಳ ಬೇಡಿಕೆಯನ್ನು ಒಪ್ಪಿದ ಶಿವ ಈಕ್ಷೇತ್ರದಲ್ಲಿ ನೆಲೆಸಿದ ಎನ್ನುವುದು ಪ್ರತೀತಿ.
1300 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ದಿನ ಮೂರು ಹೊತ್ತು ಪೂಜೆ ಸಲ್ಲುತ್ತದೆ. ತುಳುನಾಡಿನ ಭಾಷೆಯಲ್ಲಿ ದಿನದ ಮೂರು ಹೊತ್ತು ಪೂಜೆ ಸಲ್ಲಿಸಲಾಗುವ ದೇವಾಲಯಕ್ಕೆ "ಮಹಾತೋಭಾರ" ದೇವಾಲಯವೆಂದು ಕರೆಯುತ್ತಾರೆ. ಇನ್ನ ದೇವಾಲಯ ಮತ್ತು ಕ್ಷೇತ್ರಕ್ಕೆ ಸಮೀಪವಿರುವ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಾಲಯ ಭಾರ್ಗವ ಗೋತ್ರದವರಿಗೆ ಕುಲದೇವಸ್ಥಾನ. ಕ್ಷೇತ್ರದಲ್ಲಿ ಪ್ರಮುಖ ಭೂತಾರಾಧನೆ 'ವಾರಾಹಿ ಪಂಜುರ್ಲಿಗೆ' ನಡೆಯುತ್ತದೆ.
ಇತ್ತೀಚೆಗೆ ದೇವಾಲಯದ ಜೀರ್ಣೋದ್ದಾರ ಕೆಲಸ ನಡೆದಿತ್ತು. ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ಮತ್ತು ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ತಲುಪುವುದು ಹೇಗೆ? : ಮಂಗಳೂರುನಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಪಡುಬಿದ್ರೆ (ಎಕ್ಸ್ ಪ್ರೆಸ್ ಬಸ್ ಗಳ ನಿಲುಗಡೆಯಿದೆ) ಎನ್ನುವ ಸ್ಥಳದಲ್ಲಿ ಇಳಿಯಬೇಕು. ಅಲ್ಲಿಂದ ಕಾರ್ಕಳಕ್ಕೆ ಹೋಗುವ ಬೈಪಾಸ್ ನಲ್ಲಿ ಎಂಟು ಕಿ.ಮೀ ದೂರ ಕ್ರಮಿಸಿದ ನಂತರ, ಬಲಕ್ಕೆ ಮೂರು ಕಿ.ಮೀ ಒಳಗೆ ಹೋಗಬೇಕು (ಬಲಕ್ಕೆ ತಿರುಗುವಾಗ ದೇವಾಲಯದ ಸ್ವಾಗತ ಗೋಪುರವನ್ನು ಕಾಣಬಹುದು).
ವಿಳಾಸ
ಇನ್ನ ಮುದ್ದಾಣು ಮಹಾತೊಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ
ಶ್ರೀಕ್ಷೇತ್ರ ಇನ್ನ, ಕಾರ್ಕಳ ತಾಲೂಕು
ಉಡುಪಿ ಜಿಲ್ಲೆ - 576 146
ದೂರವಾಣಿ : 08258 – 268108












Click it and Unblock the Notifications