• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರಿ ಧೋರಣೆಗಳೇ ಇಲ್ಲದ ಸರಕಾರ ಇದ್ದರೆಷ್ಟು, ಬಿಟ್ಟರೆಷ್ಟು?

By Mahesh
|

ರಾಜ್ಯದಿಂದ ಹೊರಕ್ಕೆ ಹೋಗುತ್ತಿಲ್ಲ. ದೇವನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಶಿಫ್ಟ್ ಆಗುತ್ತಿದೆ. ಇದು ಬಿಟ್ಟು ಈ ಬಗ್ಗೆ ಬಂದಿರುವ ಸುದ್ದಿಗಳೆಲ್ಲ ಸುಳ್ಳು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಅದರೆ, ಇನ್ಫೋಸಿಸ್ ತಗಾದೆ, ಸರ್ಕಾರದ ವಿಳಂಬ ನೀತಿ, ಮೂಲ ಸೌಕರ್ಯಗಳ ಕೊರತೆಗಳ ಬಗ್ಗೆ ಓದುಗರಿಂದ ಪ್ರತಿಕ್ರಿಯೆಗಳು ಬರುತ್ತಲೇ ಇವೆ. ಇವುಗಳಲ್ಲಿ ಆಯ್ದ ಪ್ರತಿಕ್ರಿಯೆ ಇಲ್ಲಿದೆ.

ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಸರಕಾರಕ್ಕೆ (ಕೇಂದ್ರ ಅಥವಾ ರಾಜ್ಯ) ಸಂದಾಯ ಮಾಡುವ ತೆರಿಗೆಗಳು ಸರಕಾರದ ಬೊಕ್ಕಸ ಸೇರುತ್ತವೆ. ಇದು ನಿಮಗೆ ತಿಳಿದಿರಲಿ - ಉದ್ಯೋಗಿಗಳು ಸಂದಾಯಿಸುವ ಇನಕಮ್-ಟ್ಯಾಕ್ಸ್ ಕೇಂದ್ರ ಸರಕಾರಕ್ಕೆ ಹೋಗುತ್ತದೆಯಾದರೂ ಅದರ ಸಿಂಹ ಪಾಲು ರಾಜ್ಯ ಸರಕಾರಕ್ಕೆ ಹರಿದು ಬರುತ್ತದೆ.[ಇನ್ಫೋಸಿಸ್ ಶಿಫ್ಟಿಂಗ್: ಸಿಎಂ ಸಿದ್ದು ಜಾಣ ಉತ್ತರ]

ಈ ವಿಷಯ ಸೆಂಟ್ರಲ್ ಫೈನಾನ್ಸ್ ಕಮಿಶನ್ ಅವಾರ್ಡ್ ಪ್ರಕಾರ ರಾಜ್ಯಕ್ಕೆ ಸಂದಾಯವಾಗುತ್ತದೆ. ಉದ್ಯೋಗಿಗಳು ಯಾವುದೇ ರಾಜ್ಯದವರಾಗಿರಬಹುದು. ಅದರಿಂದ ರಾಜ್ಯ ಸರಕಾರಕ್ಕೇ ಹಣ ಬರುತ್ತದೆ. ಇದಲ್ಲದೇ ಸ್ಥಳೀಯರಿಗೂ ಬೇರೆ ರೂಪದಲ್ಲಿ ಲಾಭಗಳಾಗುತ್ತವೆ. ಮನೆಗಳ ನಿರ್ಮಾಣ, ಇತರೇ ವಾಣಿಜ್ಯ - ಕಾಳುಕಡ್ಡಿ, ಬಟ್ಟೆಬರೆ, ಶಾಲಾ-ಕಾಲೇಜು ಇತ್ಯಾದಿ.

ಇಷ್ಟೆಲ್ಲ ತೆರಿಗೆಗಳು ಸಂಗ್ರಹವಾದರೂ ರಾಜ್ಯ ಸರಕಾರ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾದರೆ ಯಾವುದೇ ಕಂಪನಿ (ಇನ್ಫೋಸಿಸ್ ಇರಲಿ ಅಥವಾ ಬೇರೆ ಯಾರೇ ಆಗಲಿ) ತಮ್ಮ ವ್ಯವಹಾರವನ್ನು ಸಾಗಿಸಲು ಆಗುವುದಿಲ್ಲ. ಈ ವಿಷಯ ಅರ್ಥವಾದರೆ ತಾವು ಈ ತರಹ ಮಾತನಾಡುತ್ತಿರಲಿಲ್ಲ.

ಕನ್ನಡಿಗರಿಗೆ ಅವಕಾಶ ಕಡಿಮೆ ಎನ್ನುವ ಮಾತನ್ನೇ ಇಟ್ಟುಕೊಂಡು - ಅವರು ಹೋದರೆ ಹೋಗಲಿ ಎನ್ನುವ ಧೋರಣೆ ತಪ್ಪು. ಕನ್ನಡಿಗರಿಗೆ ಅವಕಾಶಗಳು ಕಡಿಮೆ - ನಾನೂ ಒಪ್ಪುತ್ತೇನೆ. ಈ ಬಗ್ಗೆ ಕರ್ನಾಟಕ ಸರಕಾರ ಕಳೆದ 50 ವರ್ಷಗಳಿಂದಲೂ ಕೆಲಸ ಮಾಡಿಲ್ಲ. ಸರೋಜಿನಿ ಮಹಿಷಿ ವರದಿಯನ್ನು ಯಾಕೆ ಅನುಷ್ಠಾನಗೊಳಿಸಿಲ್ಲ...? [ಇನ್ಫೋಸಿಸ್ ತಗಾದೆ, ಸರ್ಕಾರ ಏನ್ಮಾಡ್ಬೇಕು?]

ಎನ್ನುವ ಪ್ರಶ್ನೆಯನ್ನು ನಾವು ಕನ್ನಡಿಗರು ಸರಕಾರಕ್ಕೆ ಎಸೆಯಬೇಕು. ಸರಿ ಉತ್ತರ ಬಾರದಿದ್ದರೆ ಸರಕಾರವನ್ನೇ ಕಿತ್ತೆಸೆಯಬೇಕು. ಇದು ಯಾವುದೋ ಕಾಲದಲ್ಲಿ ಆಗಿರಬೇಕಾಗಿತ್ತು. ಅದಾಗದಿದ್ದರಿಂದಲೇ ಇವತ್ತು ಪರಿಸ್ಥಿತಿ ಹೀಗಾಗಿರೋದು,

ಉದಾಹರಣೆಗೆ, ಐಟಿಐ, ಎಚ್‍ಎಮ್‍ಟಿ, ಬಿಇಎಲ್, ಎಚ್‍ಎ‍ಎಲ್ ಸಂಸ್ಥೆಗಳಲ್ಲಿ ಎಷ್ಟು ಕನ್ನಡಿಗರಿಗೆ ಅವಕಾಶ ಸಿಕ್ಕಿತ್ತು...? ಅವು ಸರಕಾರೀ ಸಂಸ್ಥೆಗಳು ತಾನೆ..? ಅಲ್ಲಿ ಕನ್ನಡಿಗರಿಗೆ ಅವಕಾಶ ಕಲ್ಪಿಸಲು ಹೋರಾಡದ ಸರಕಾರ ಈಗ ಧಿಡೀರನೇ ಕಾರ್ಯವೆಸಗಿದರೆ ನಷ್ಟವಾಗುವುದು ಸರಕಾರಕ್ಕೇನೇ. [ದೇವನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಇನ್ಫಿ]

ಮಂತ್ರಿಗಳ ಐಷಾರಾಮಿಗೆ ದುಡ್ಡು ಬೇಕು. ಇವತ್ತು ಕರ್ನಾಟಕದಲ್ಲಿರುವಷ್ಟು ಪೆಟ್ರೋಲ್ ಬೆಲೆ ಬೇರೆಲ್ಲೂ ಇಲ್ಲ. ಗೋವಾದಲ್ಲಿ ಬೆಲೆ 20 ರೂಗಳಷ್ಟು ಕಡಿಮೆ ಇದೆ. ಸರಿಯಾದ ನೀತಿ ಧೋರಣೆಗಳೆ ಇಲ್ಲದ ಸರಕಾರ ಇದ್ದರೆಷ್ಟು.... ಬಿಟ್ಟರೆಷ್ಟು....?

ಈ ಬಗ್ಗೆ ಎಲ್ಲರೂ ಚಿಂತಿತರಾಗಿ ಗಮನ ಹರಿಸಿ..... ಹೋದರೆ ಹೋಗಲಿ ಎನ್ನುವ ಧೋರಣೆ ಬೇಡಾ..ಸತ್ಯವಾಚಕ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Letters to Editor : Infosys and other companies will be provided with necessary support. IT Investment region is being progressed at fast pace said CM Siddaramaiah. But Karnataka Government has no proper policy to provide infrastructure to any companies a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more