ಅನುಪಮಾ ಅವರೇ, ಆತ್ಮರಕ್ಷಣೆಗಾಗಿ ಪಿಸ್ತೂಲು ಇಟ್ಟುಕೊಳ್ಳಿ!

By: ವಿಶ್ವಮಾನವ
Subscribe to Oneindia Kannada

ದೇವರು, ದೆವ್ವ ಈ ಪದಗಳನ್ನು ಬಳಸುವವರು ವಿದ್ಯಾವಂತ ಅವಿವೇಕಿಗಳಾಗಿರುತ್ತಾರೆ. ತಮ್ಮ ಕೈಲಾಗದ ಕೆಲಸವನ್ನು ಸಾಧಿಸಲು ಇಂಥವರುಗಳು ಈ ಕಣ್ಣಿಗೆ ಕಾಣದ, ಕೈಗೆ ಸಿಕ್ಕದ, ನಿರುಪಯೋಗೀ ವಸ್ತುಗಳನ್ನು ಅವಲಂಬಿಸಿ ತಮ್ಮ ಕೋಪ ತಾಪಗಳನ್ನು ಹೊರಗೆಡವುತ್ತಾ ಮನಃಶ್ಶಾಂತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ.

ನಮ್ಮ ಕಣ್ಣಿಗೆ ಕಾಣಿಸುವ ಪ್ರಕೃತಿಮಾತೆಯನ್ನೂ, ಆಕೆ ನಮಗೆ ಕರುಣಿಸಿರುವ ಮೆದುಳನ್ನೂ, ಅದನ್ನು ಉಪಯೋಗಿಸಿಕೊಂಡು ನಾವು ಗಳಿಸಿರುವ ಅನ್ನಭಾಗ್ಯವನ್ನು ಮಾತ್ರ ದೇವರೆಂದು ಪರಿಗಣಿಸಬೇಕು. ಸತ್ತ ನಂತರ ಯಾರು ಯಾರನ್ನೂ ಕಾಡಲಾಗುವುದಿಲ್ಲ.

ಏನನ್ನಾದರೂ ಸಾಧಿಸಿದರೆ ಅದು ಬದುಕಿರುವಾಗ ಮಾತ್ರ. ಇಲ್ಲವಾದಲ್ಲಿ "ಕೈಲಾಗದವರು ಮೈಪರಚಿಕೊಂಡರು" ಎನ್ನುವಂತಾಗುತ್ತದೆ. ಈಸಬೇಕು ಇದ್ದು ಜೈಸಬೇಕು ಅಂದರೆ ನೀವು ನಿಮ್ಮ ವೃತ್ತಿಯಲ್ಲಿ ಎಲ್ಲದರಲ್ಲೂ ಹೊಂದಾಣಿಕೆ ಮಾಡಿಕೊಳ್ಳಬೇಕೆಂದೇನೂ ಇಲ್ಲ. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

Anupama Shenoy, keep pistol for self defence

ನಮ್ಮ ದೇಶದಲ್ಲಿ ನಿಯಮಾನುಸಾರ ಜೀವನ ಮಾಡುವವರು ಇಂದು ವಿರಳ. ನಿಯಮ ಮಾಡಿದವರಿಗೇ ಅದೇನೆಂಬುದು ಸರಿಯಾಗಿ ತಿಳಿದಿರುವುದಿಲ್ಲ. "Wisdom is something, but tact is everything" ಎನ್ನುತ್ತಾರೆ. ನಮಗೆ ಬೇಕೋ ಬೇಡವೋ ಆದರೂ ಕೆಲವು ಸಲ "ನಮಗೆ ಅನುಕೂಲವಾಗಬೇಕು, ಬೇರೆಯವರಿಗೆ ಅನಾನುಕೂಲವಾಗಬಾರದು" ಎನ್ನುವಂತೆ ಎಷ್ಟೋ ಕೆಲಸ ಕಾರ್ಯಗಳನ್ನು ನಾವು ಬದುಕುಳಿಯಲು ಮಾಡಬೇಕಾಗಿ ಬರುತ್ತದೆ.

ಹಣ ಮಾಡಿದವರು, ಹಣ ಮಾಡುವವರು, ಪ್ರತಿದಿನದ ಹೊಟ್ಟೆಪಾಡಿಗಾಗಿ ಹಣಗಳಿಸಲು ಕಷ್ಟಪಡುತ್ತಿರುವವರು ಎಲ್ಲರೂ ಒಂದು ದಿನ ಸಾಯುತ್ತಾರೆ. ಆದರೆ ಸ್ವಾರ್ಥಿ, ದುರುಳ ಮಾನವರು ಸಾವು ಬಂದು ಅಪ್ಪಳಿಸುವವರೆಗೂ ಭ್ರಮಾಧೀನರಾಗಿದ್ದುಕೊಂಡು ಮಾಡಬಾರದ್ದನ್ನು ಮಾಡುತ್ತಲೇ ಇರುತ್ತಾರೆ. [ಕೂಡ್ಲಿಗಿಗೆ ಬಂದ ಅನುಪಮಾ ಶೆಣೈ, ಮುಂದೇನು?]

As our life is short on this Earth, we must strive hard to make it sweet. ಅಷ್ಟೇ ಮೇಡಂ ಅನುಪಮಾ ಶೆಣೈ ಅವರೇ. ಹೇಗಾದರಾಗಲೀ, ತಮ್ಮ ಹತ್ತಿರ ಆತ್ಮರಕ್ಷಣೆಗಾಗಿ (ರಾಜೀನಾಮೆ ನಂತರವೂ) ಒಂದು ಪಿಸ್ತೂಲನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರವೆನ್ನುವುದು ನನ್ನ ಅಭಿಮತ. ['ರೆಬೆಲ್' ಕಾಪ್ ಅನುಪಮಾ ವ್ಯಕ್ತಿಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Letters to the editor : A reader of Oneindia Kannada has suggested Anupama Shenoy, who is fighting against liquor mafia in Kudligi, Ballery, to keep a pistol in her pocket for self defence. He has also says, as our life is short on this Earth, we must strive hard to make it sweet.
Please Wait while comments are loading...