ಬಿಎಸ್ಎನ್ಎಲ್ ಲೈನ್ ಮನ್ ಗಳು ಭಿಕ್ಷಾಂದೇಹಿ ನಿಲ್ಲಿಸುವುದು ಯಾವಾಗ?

ಸಂಸ್ಥೆಯ ಈ ಡೊಳ್ಳುಹೊಟ್ಟೆಯ ಲೈನ್ ಮನ್ ಗಳಿಗೆ ಅತ್ತ ಸ್ವಾಮಿನಿಷ್ಠೆಯೂ ಇಲ್ಲ; ಇತ್ತ ಗ್ರಾಹಕರತ್ತಲೂ ನಿಷ್ಠೆ ಇಲ್ಲವಾಗಿದೆ. ಯಾವುದೋ ತಾತನ ಕಾಲದಲ್ಲಿ ಒಂದು ಲ್ಯಾಂಡ್ ಲೈನ್ ಹಾಕಿಸಿಕೊಳ್ಳುವುದೇ ಜೀವನದ ಸೌಭಾಗ್ಯ ಎಂದು ಗ್ರಾಹಕ ಬಯಸಿದ್ದ ದಿನಗಳಲ್ಲಿ ಇದೇ ಲೈನ್ ಮನ್ ಗಳು ಸರಕಾರಿ ಕೆಲಸವನ್ನು ಮಾಡಿ ಮುಗಿಸಿದ ಬಳಿಕ ಗ್ರಾಹಕನೆದುರು ಹಲ್ಲು ಗಿಂಜುತ್ತಾ, ಅಂಗೈ ಚಾಚುತ್ತಿದ್ದರು.
ಗ್ರಾಹಕರೋ ಖುಷಿಯಿಂದ 'ಇರಲಿ ಇವ ನಮ್ಮವ' ಎಂದು ಒಂದಷ್ಟು ಭಕ್ಷೀಸು ಕೊಡುತ್ತಿದ್ದರು. ಆದರೆ ಈಗಿನ ಕಾಲಮಾನದಲ್ಲೂ ಇವರ ಭಿಕ್ಷಾಂದೇಹಿ ಆಚರಣೆ ನಿಂತಿಲ್ಲ ಅಂದರೆ ಎಂಥ ಮಾಡುವುದು? ಮಾನ ಮರ್ಯಾದೆ ವಗೈರೆಗಳನ್ನು ಬಿಟ್ಟು ಲೈನ್ ಕನೆಕ್ಷನ್ ಕೊಟ್ಟ ಮೇಲೆ ಹಲ್ಲು ಗಿಂಜುವುದೇಕೆ?
ಇವರ ಕೈಗೆ ಒಂದಷ್ಟು ದುಡ್ ತುರುಕಿದರೆ ಸೇಮ್ ಡೇ ಕನೆಕ್ಷನ್ ಇಲ್ಲಾಂದ್ರೆ 4-5 ದಿನವಾದರೂ ಇಲ್ಲ. ದೊಡ್ಡು ಕೊಟ್ಟಾಗ ಯಾವುದೇ ರಗಳೆ ಇಲ್ಲದೆ ಸೇಮ್ ಡೆ ಕನೆಕ್ಷನ್ ಕೊಡುವ ಲೈನ್ ಮನ್ ಗಳು ದುಡ್ಡು ಕೊಡಲಿಲ್ಲವೆಂದು ಟಾರ್ಗೆಟ್ ಮಾಡಿಕೊಂಡು ವಿಳಂಬ ಧೋರಣೆ ಅನುಸರಿಸುವುದು ಎಷ್ಟರ ಮಟ್ಟಿಗೆ ಸರಿ. ಇದು ಮೇಲಾಧಿಕಾರಿಗಳಿಗೆ ಗೊತ್ತಿಲ್ಲ ಅಂತಲ್ಲ. ಇದರ ಬಗ್ಗೆ ಅವರದು ಮೌನ ವ್ರತಾಚರಣೆ ಅಷ್ಟೆ. ಶೇಮ್ ಆನ್ ಯು ಪೀಪಲ್.












Click it and Unblock the Notifications