ಜನಾರ್ದನನ ಧನ ಕಂಡು ಬೆಚ್ಚಿದ ಅನಂತ ಪದ್ಮನಾಭ

Janardahan Reddy asset compared to Padmanabha Temple
ಬ್ರಿಟೀಷರ ಆಡಳಿತಕ್ಕೆ ಮುಂಚೆ ನಮ್ಮ ಭಾರತ ಎಷ್ಟು ಸಂಪತ್ಭರಿತವಾಗಿತ್ತು ಎಂಬುದಕ್ಕೆ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಿಕ್ಕಿದ ಚಿನ್ನದ ರಾಶಿಯೇ ಸಾಕ್ಷಿ.

ಒಂದೇ ದೇವಸ್ಥಾನದಲ್ಲಿ ಇಷ್ಟೊಂದು ಸಂಪತ್ತು ಹೊಂದಿರುವಾಗ ಉಳಿದ ದೇವಸ್ಥಾನದ ಎಷ್ಟು ಸಂಪತ್ತನ್ನು ಈ ಬ್ರಿಟಿಷರು ಕೊಳ್ಳೆ ಹೊಡೆದಿದ್ದಾರೆ ಎಂಬುದನ್ನು ಅಂದಾಜಿಸಬಹುದು.

ಬ್ರಿಟೀಷರ ಕಣ್ಣು ತಪ್ಪಿಸುವುದಕ್ಕೋಸ್ಕರ ಈ ದೇವಸ್ಥಾನದ ರಾಜ ವಂಶಸ್ಥ ಈ ಬಂಗಾರವನ್ನು ನೆಲ ಮಾಳಿಗೆಯಲ್ಲಿ ಅಡಗಿಸಿಟ್ಟಿರುವುದರಿಂದ ಇದು ನಮಗೆ ಉಳಿಯಿತು. ಇಲ್ಲದಿದರೆ ಇದನ್ನು ಕೂಡಾ ಈ ಬ್ರಿಟಿಷರು ಅಪಹರಿಸುತ್ತಿದ್ದರು.

ಸಿಕ್ಕಿದ್ದು ಇಷ್ಟು, ಬಚ್ಚಿಟ್ಟಿದ್ದು ಇನ್ನೆಷ್ಟು?: ನಮ್ಮ ಬಳ್ಳಾರಿ ಜನಾರ್ಧನನ ಒಂದೇ ಮನೆಯಲ್ಲಿ 610 ಬಳೆ, 1200 ಉಂಗುರ ಹಾಗೂ ಅನೇಕ ವಜ್ರ ವೈಡೂರ್ಯಗಳು ಬಂಗಾರದ ಸಿಂಹಾಸನ, ಬಟ್ಟಲು, ತಟ್ಟೆ, ಲೋಟ, 3 ಕೋಟಿ ರೂಪಾಯಿ, 11 ಐಷಾರಾಮಿ ಕಾರು, 1 ದೊಡ್ಡ ಹೆಲಿಕಾಪ್ಟರ್ ..ಇತ್ಯಾದಿ ಇದೆಲ್ಲವನ್ನು ಸಿಕ್ಕಿದ್ದನ್ನು ಕಂಡು ಖಂಡಿತವಾಗಿಯೂ ಮಲಗಿರುವ ಅನಂತ ಪದ್ಮನಾಭ ಒಮ್ಮೆ ಎದ್ದು ಕುಳಿತುಕೊಳ್ಳದಿರಲಾರ.

ಯಾಕೆಂದರೆ ಆ ಕಾಲಕ್ಕೆ ಆ ಸಂಪತ್ತಿನ ಮೌಲ್ಯಕ್ಕೆ ಹೋಲಿಸಿದರೆ (1 ಪವನಿಗೆ ಅಂದಾಜು 3500ರೂ.) ಈ ಜನಾರ್ಧನನ ಎದುರು ಆ ಅನಂತ ಏನೂ ಅಲ್ಲ! ಜನಾರ್ದನನ ಅಸ್ತಿಕಂಡು ಪದ್ಮನಾಭನಿಗೆ ಹೊಟ್ಟೆ ಉರಿದರೂ ಆಶ್ಚರ್ಯವಿಲ್ಲ!

ಅನಂತನ ಸಂಪತ್ತಿನ ಇನ್ನೊಂದು ಕೊಠಡಿ ಬಾಕಿ ಇರುವಂತೆಯೇ ಈ ಜನಾರ್ಧನನ ಚೀನಾ, ಸಿಂಗಪುರ, ಮಲೇಶಿಯಾದಲ್ಲಿರುವ ಸಂಪತ್ತು, ಮಾಜಿ ಅಮ್ಮನ ಬಳಿಯಲ್ಲಿದ್ದ (ಸುಷ್ಮಾ ಸ್ವರಾಜ್) ಸಂಪತ್ತು ಈ ಎಲ್ಲಾ ಕೊಠಡಿಗಳನ್ನು ತೆರೆದರೆ ಖಂಡಿತವಾಗಿಯೂ ಆ ಅನಂತನಿಗಿಂತ ಈ ಜನಾರ್ದನನೇ ಸಂಪತ್ತಿನಲ್ಲಿ ಮೇಲಾಗಬಹುದು.

ನಮ್ಮ ನ್ಯಾಯಾಂಗ ಇನ್ನೂ ಸರಿಯಾಗಿ ಎಚ್ಚೆತ್ತುಕೊಂಡರೆ ನಮ್ಮ ದೇಶದಲ್ಲಿ ಇಂತಹ ಸಾವಿರಾರು ಜನಾರ್ಧನರ ಸಂಪತ್ತಿನ ಕೊಠಡಿಯನ್ನು ತೆರೆಯಬಹುದು. ಜನಾರ್ಧನ, ಶ್ರೀನಿವಾಸ, ಕರುಣಾಕರ, ಶ್ರೀರಾಮುಲು ಎಂಬ ಒಳ್ಳೊಳ್ಳೆಯ ದೇವರ ಹೆಸರನ್ನಿಟ್ಟುಕೊಂಡು ಇವರು ಮಾಡುವ ಅನರ್ಥ ಕೆಲಸಗಳಿಗೆ ಇನ್ನಾದರೂ ನಮ್ಮೀ ನ್ಯಾಯಾಂಗ ಈ ಅವತಾರ ಪುರುಷರನ್ನು ಶ್ರೀಕೃಷ್ಣನು ಹುಟ್ಟಿದ ಸ್ಥಳಕ್ಕೆ ಕಳುಹಿಸಲಿ.

ಪ್ರಜಾಪ್ರಭುತ್ವದ ಆಸೆಯೇ ಕಮರಿ ಹೋಗಿದ್ದ ಪ್ರಜೆಗಳಿಗೆ ನ್ಯಾಯಾಂಗ ಇದನ್ನು ಎತ್ತಿ ತೋರಿಸಲಿ. ಪ್ರಜಾಪ್ರತಿನಿಧಿಗಳಿಗೆ ಶಿಕ್ಷೆ ಇಮ್ಮಡಿಯಾಗಲಿ.

ಆಗ ಮಾತ್ರ ಚುನಾವಣಾ ಟಿಕೇಟಿಗೆ ಸ್ಪರ್ದಿಗಳು ಕಡಿಮೆಯಾಗಿ ನಿಜವಾದ ಜನಸೇವಕ ಮಾತ್ರ ಸ್ಪರ್ದಿಸಿ ಪ್ರಜಾಪ್ರಭುತ್ವ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ.

ಆದ್ದರಿಂದ ಪ್ರಕರಣದಲ್ಲಿ ಸರಿಯಾದ ಶಿಕ್ಷೆ ಪ್ರಾಪ್ತಿಯಾಗಿ ನ್ಯಾಯಾಂಗ ಮುಂದಿನ ಜನಾಂಗಕ್ಕೆ ಮಾದರಿ ಸಂದೇಶ ನೀಡಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+