ಅಕ್ರಮ ಎಲ್‌ಪಿಜಿ ಕನೆಕ್ಷನ್ ಮೂಲ ಹೊಣೆಗಾರರು ಯಾರು?

LPG cylinders
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜನರಲ್ಲಿಗೊಂದಲವೆಬ್ಬಿಸಿದೆ. ಈ ಅಕ್ರಮ ಎಲ್‌ಪಿಜಿ ಕನೆಕ್ಷನ್ ಮತ್ತು ರೇಷನ್ ಕಾರ್ಡ್‌ಗಳ ವಿತರಣೆಗೆ ಮೂಲ ಹೊಣೆಗಾರರುಯಾರು ಎಂಬುದನ್ನು ಹುಡುಕದೆ, ಜನರ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ.

ಜನರಿಂದ ಹಣ ಪಡೆದು,ಸರಿಯಾದ ದಾಖಲೆಗಳಿಲ್ಲದಿದ್ದರೂ ಎಲ್‌ಪಿಜಿ ಸಂಪರ್ಕ ನೀಡಿರುವ ಭ್ರಷ್ಟ ಎಲ್‌ಪಿಜಿ ವಿತರಣಾ ಏಜೆನ್ಸಿಗಳು ಇದರ ಹೊಣೆ ಹೊರಬೇಕು.
ಇನ್ನು, ಸರಿಯಾದ ದಾಖಲೆಗಳನ್ನು ನೀಡಿ ಎಲ್‌ಪಿಜಿ ಸಂಪರ್ಕ ಹೊಂದಿದವರ ಮೇಲೂ ಇಲಾಖೆ ಪ್ರಹಾರ ಮಾಡಿದೆ.

ಬೆಂಗಳೂರಿನಲ್ಲಿ ಶೇ. 50ಕ್ಕೂ ಹೆಚ್ಚಿನ ಜನಬಾಡಿಗೆ ಮನೆಯಲ್ಲಿ ವಾಸಿಸುವವರೇ. ಬಡ, ಮಧ್ಯಮ ವರ್ಗದ ಎಷ್ಟೋ ಕುಟುಂಬಗಳು ವಠಾರದ ಮನೆಗಳಲ್ಲಿ
ವಾಸವಾಗಿವೆ. ಅಂತಹ ವಠಾರಗಳಲ್ಲಿರುವ 4-5 ಮನೆಗಳಿಗೆ ಸೇರಿ ಒಂದೇ ವಿದ್ಯುತ್ ಮೀಟರ್ ಅಳವಡಿಸಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಆ ಎಲ್ಲ 4-5
ಕುಟುಂಬಗಳು ಒಂದೇ ಆರ್.ಆರ್. ಸಂಖ್ಯೆಯನ್ನು ನಮೂದಿಸುವುದು ಸಹಜ ತಾನೆ?

ಹೀಗಿರುವಾಗ ಅವರೆಲ್ಲರ ಎಲ್‌ಪಿಜಿ ಸಂಪರ್ಕ ಅಕ್ರಮ ಹೇಗಾಗುತ್ತದೆ? ಇನ್ನು ಕೆಲವು ಸಂದರ್ಭಗಳಲ್ಲಿ ಒಂದೇ ಮನೆಗಳಲ್ಲಿ ತಂದೆ ಹಾಗೂ ಮದುವೆಯಾದ ಮಕ್ಕಳು ಬೇರೆ ಬೇರೆಯಾಗಿ ವಾಸ ಮಾಡುತ್ತಿರುವ ಉದಾಹರಣೆಗಳೂ ಇವೆ. ಅವರೆಲ್ಲರಿಗೆ ಸೇರಿ ಒಂದೇ ಮೀಟರ್ ಇದ್ದರೆ, ಅವರ ಎಲ್‌ಪಿಜಿ ಸಂಪ ರ್ಕವೂ ಅಕ್ರಮವೇ?

ಭ್ರಷ್ಟ ಎಲ್‌ಪಿಜಿ ಏಜೆನ್ಸಿಗಳ ಮೇಲೆ ಕ್ರಮ ಜರುಗಿಸುವುದನ್ನು ಬಿಟ್ಟು, ಅವರ ಒತ್ತಡಕ್ಕೆ ಒಳಗಾದ ಸರಕಾರ ಸಾಮಾನ್ಯ ಜನರ ಮೇಲೆ ಗದಾಪ್ರಹಾರ ಮಾಡಿರುವುದು ಖಂಡನೀಯ. ಈ ರೀತಿ ಅಕ್ರಮವೆಂದು ಘೋಷಣೆಯಾದವರಲ್ಲಿ, ಎರಡು-ಮೂರು ದಶಕಗಳಿಗಿಂತಲೂ ಮುಂಚಿನಿಂದಅನಿಲ ಬಳಸುವವರಿದ್ದಾರೆ, ಇತ್ತೀಚೆಗೆ ಸಂಪರ್ಕ ಪಡೆದವರೂ ಇದ್ದಾರೆ.

ಇಂಧನ ಸಚಿವರು ಈ ರೀತಿ ಸಂಪರ್ಕಗಳ ವಿವರಗಳನ್ನು ಪರಿಶೀಲಿಸದೆ ಆದೇಶ ಹೊರಡಿಸಿ, ಮಾಧ್ಯಮದೆದುರು, 'ರಾಜ್ಯದಲ್ಲಿ ಲಕ್ಷಾಂತರ ಅಕ್ರಮ ಅಡುಗೆ ಅನಿಲ ಸಂಪರ್ಕ ವಿದೆ" ಎಂದು ಹೇಳುವುದು ಸಾಧನೆಯೇ? ಈ ಗೊಂದಲದಿಂದ ನಿಜವಾಗಿ ತೊಂದರೆಗೀಡಾಗುವವರು ಬಡ, ಮಧ್ಯಮ ವರ್ಗದ ಜನ.

ಆದ್ದರಿಂದ ಈ ಬಗ್ಗೆ ನಾಗರಿಕ ಸಂಘ, ಸಂಸ್ಥೆಗಳು, ನಾಗರಿಕ ರಕ್ಷಣಾ ವೇದಿಕೆಗಳು ಸಾಮಾ ನ್ಯರ ಜತೆಗೂಡಿ ಪ್ರತಿಭಟಿಸಬೇಕು. ಇದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಂಬಂಧಪಟ್ಟ ಇಂಧನ ಸಚಿವರು ಉತ್ತರಿಸಬೇಕು. ಜನಸಾಮಾನ್ಯರ ಗೊಂದಲ ನಿವಾರಿಸಿ ನ್ಯಾಯ ದೊರಕಿಸಿಕೊಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+