ಇವರಿಗೆ ಗುರುತು ಚೀಟಿ ಬೇಡವೇ ಆಯುಕ್ತರೇ ?
ಮತದಾರರ
ಪಟ್ಟಿಯಲ್ಲಿ ಹೆಸರು ನೋಂದಾಯಿಸುವ, ಅಳಿಸುವ, ಅರ್ಜಿ ನಮೂನೆಗಳ ಬಗ್ಗೆ ಪತ್ರಿಕೆಗಳಲ್ಲಿ ಮಾಹಿತಿ ಪ್ರಕಟವಾಗಿದೆ. ಆದರೆ ಹದಿನೆಂಟು ವರ್ಷ ಮೇಲ್ಪಟ್ಟ ಯುವಕ-ಯುವತಿಯರು ಉದ್ಯೋಗಾರ್ಥ ಪರ ಊರಿನಲ್ಲಿ ಇರುತ್ತಾ ವರ್ಷಕ್ಕೆ ಎರಡೋ ಮೂರು ಬಾರಿ ರಜೆಯಲ್ಲಿ ಊರಿಗೆ ಬಂದು ಹೋಗುವವರಿರುತ್ತಾರೆ. ಇವರ ಹೆಸರು ಮತದಾರರ ಪಟ್ಟಿ ಸೇರುವುದು ಹೇಗೆ ? ಇವರಿಗೆ ಗುರುತಿನ ಚೀಟಿ ದೊರೆಯುವುದು ಹೇಗೆ ? id="toptextpromo">ಚುನಾವಣಾ
ಸಂಬಂಧಿಸಿದ ಅಧಿಕಾರಿಗಳು ಮನೆಗೆ ಭೇಟಿ ಕೊಟ್ಟಾಗ ಈ ವಿಷಯ ಪ್ರಸ್ತಾಪಿಸಿದರೆ ಸರಿಯಾದ ಉತ್ತರ ದೊರೆಯುವುದಿಲ್ಲ. ಅವರು ಕೆಲಸ ಮಾಡುವ ಊರಲ್ಲಿ ಮಾಡಿಸಲಿ... ಎಂದು ಹೇಳುತ್ತಾರೆ. ಆದರೆ ಪರವೂರು ರಾಜ್ಯಗಳಲ್ಲಿ ಇದಕ್ಕೆ ಪ್ರಯತ್ನಿಸಲು ಹಲವಾರು ಸಮಸ್ಯೆಗಳಿರುತ್ತವೆ. id='are-slot-1' class='oiad oi-axt oiadv'> id='top-searched-articles'>ಹಾಗಾದರೆ
ಅಂತಹ ಸಾವಿರಾರು ಮಂದಿಗೆ ಚುನಾವಣಾ ಗುರುತಿನ ಚೀಟಿ ಅಗತ್ಯ ಇಲ್ಲವೇ ? ಅವರಿಗೆ ಮತದಾನದ ಹಕ್ಕಿಲ್ಲ ? ಅವರು ಭಾರತದ ಪ್ರಜೆಗಳಲ್ಲವೇ ? ಇಂದು ಎಲ್ಲಾ ವ್ಯವಹಾರಗಳಿಗೂ ಗುರುತಿನ ಚೀಟಿ ಬೇಕಾಗಿರುವಾಗ ಈ ಸಮಸ್ಯೆ ಪರಿಹಾರ ಹೇಗೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪ್ರಕಟಿಸಲಿ. ಗುರುತು ಚೀಟಿ ದೊರೆತರೆ ಚುನಾವಣೆ ಸಮಯ ರಜೆ ಪಡೆದುಕೊಂದು ಬಂದು ಮತ ಚಲಾಯಿಸುವ ಕರ್ತವ್ಯಬದ್ಧತೆ ಅವರಿಗೂ ಇದೆ. ಇದಕ್ಕೆ ನಿಲೇಕಣಿ ನೇತೃತ್ವದ ಯುಐಡಿ ಪರಿಹಾರವಾಗಬಲ್ಲದೇ?











Click it and Unblock the Notifications