ಎಸೆಸ್ಸೆಲಿ ಮರು ಪರೀಕ್ಷೆ, ಮಕ್ಕಳಿಗೆ ಮತ್ತೆ ಹೊರೆ?

ಮೈಸೂರು ಜಿಲ್ಲೆಯ ಸುಮಾರು 14 ಕೇಂದ್ರಗಳಲ್ಲಿ ಎಸ್ಎಸ್ ಎಲ್ ಸಿ ಹಿಂದಿ ಭಾಷೆ ಪರೀಕ್ಷೆ ಬರೆದಿದ್ದ ಈಗ ಮತ್ತೆ ಪರೀಕ್ಷೆ ಬರೆಯಬೇಕಾಗಿದೆ. ಶಿವಮೊಗ್ಗ ನಗರದ ಬಸವೇಶ್ವರ ಸರ್ಕಾರಿ ಶಾಲೆಯಲ್ಲಿ ಕಿಟಕಿ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಬೆಂಕಿ ಕಿಡಿ ಸಿಡಿದ ಪರಿಣಾಮ 100 ಕ್ಕೂ ಹೆಚ್ಚು ಹಿಂದಿ ಉತ್ತರಪತ್ರಿಕೆಗಳ ಬಂಡಲ್‌ಗಳು ಬೆಂಕಿಗೆ ಆಹುತಿಯಾಗಿತ್ತು. ಪೊಲೀಸರ ಕಾವಲಿನಲ್ಲಿ ಸುರಕ್ಷಿತವಾಗಿದ್ದ ಕೇಂದ್ರದಲ್ಲಿ ಈ ಅಚಾತುರ್ಯ ನಡೆದಿದ್ದು, ಪ್ರಶ್ನೆಗೆ ಅರ್ಹವಾಗಿದೆ.
ಇದು ಭಾಷಾ ವಿಷಯವಾಗಿರುವುದರಿಂದ ಪರವಾಗಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ. ರಜೆ ಕಳೆಯಲು ದೂರದ ಊರುಗಳಿಗೆ ತೆರಳಿರುವ ಇನ್ನೂ ಅನೇಕ ವಿದ್ಯಾರ್ಥಿಗಳಿಗೂ ಹಾಗೂ ಹೀಗೂ ಸುದ್ದಿ ಮುಟ್ಟಿ,ಮತ್ತೆ ಮನೆ ಕಡೆಗೆ ನಡೆದಿದ್ದಾರೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಬೇಜಾಬ್ದಾರಿತನಕ್ಕೆ ವಿದ್ಯಾರ್ಥಿಗಳು ಬೆಲೆ ತೆರಬೇಕಾಗಿದೆ.
ಸರ್ಕಾರ ಅಥವಾ ಪರೀಕ್ಷಾ ಮಂಡಳಿ ಮರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನಾದರೂ ನೀಡಬೇಕು. ಮೌಲ್ಯಮಾಪನದಲ್ಲಿ ಕೊಂಚ ಸಡಿಲತೆ ನೀಡಬೇಕು. ಮೊದಲು ಪರೀಕ್ಷೆ ಬರೆದಂತೆ ಮತ್ತೆ ಮತ್ತೆ ಬರೆಯಲು ಎಲ್ಲಾ ವಿದ್ಯಾರ್ಥಿಗಳು ಬುದ್ಧಿವಂತರು ಎನ್ನಲು ಬರುವುದಿಲ್ಲ. ಪರೀಕ್ಷೆ ಸಿದ್ಧತೆ ಸಮಯ, ರಜೆ ವ್ಯರ್ಥವಾದ ಸಮಯವನ್ನು ಯಾರು ಕಟ್ಟಿಕೊಡುತ್ತಾರೆ ಗೊತ್ತಿಲ್ಲ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜಾಗರೂಕತೆಯಿಂದ ವರ್ತಿಸುವುದು ಒಳಿತು.












Click it and Unblock the Notifications