ಕೇರಳದಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳು ಅತಂತ್ರ

ಇದರಿಂದ ಇಲ್ಲಿನ ಕನ್ನಡ, ತುಳು ಮೊದಲಾದ ಭಾಷಿಗರು ಅನಿವಾರ್ಯವಾಗಿ ಮಲಯಾಳ ಹಾಗೂ ಇಂಗ್ಲೀಷ್ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದರಿಂದ ಕನ್ನಡದ ಉಳಿವಿನ ಬಗ್ಗೆ ಆತಂಕ ಪಡುವಂತಾಗಿದೆ. ಕಾಸರಗೋಡಿನಲ್ಲಿ ಪದವಿ ಹಂತದಲ್ಲಿ ಕನ್ನಡವನ್ನು ಕಲಿಸುವ ಎರಡು ಕಾಲೇಜುಗಳಿವೆ. ಇಲ್ಲಿ ಕನ್ನಡ ಕಲಿತ ಪದವೀಧರರು ಕಾಸರಗೋಡಿನಲ್ಲಿರುವ ಏಕೈಕ ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಕನ್ನಡ ಬಿಇಡಿ. ಪೂರೈಸುತ್ತಾರೆ. ಆದರೆ ಕಾಸರಗೋಡಿನಲ್ಲಿ ಕನ್ನಡ ಶಿಕ್ಷಕ ಹುದ್ದೆಗಳು ಕಡಿಮೆಯಾಗುತ್ತಿರುವುದರಿಂದ ಅನಿವಾರ್ಯವಾಗಿ ಉದ್ಯೋಗಕ್ಕಾಗಿ ಇವರು ಕರ್ನಾಟಕವನ್ನು ಆಶ್ರಯಿಸಬೇಕಾಗಿದೆ.
ಆದರೆ ಕರ್ನಾಟಕದಲ್ಲಿ ಕೇರಳದ ಕನ್ನಡ ಬಿಇಡಿ ಪದವಿಗೆ ತಾಂತ್ರಿಕ ಕಾರಣಗಳಿಂದ ಮಾನ್ಯತೆ ನೀಡದ ಕಾರಣ ಇವರು ಕರ್ನಾಟಕದ ಶಾಲೆಗಳಲ್ಲೂ ಉದ್ಯೋಗ ಸಂಪಾದಿಸಲಾಗದೆ ಅತಂತ್ರರಾಗಿದ್ದಾರೆ. ಕೇರಳದಲ್ಲಿ ಕರ್ನಾಟಕದ ಬಿಇಡಿಗೆ ಮಾನ್ಯತೆ ಇದೆ ಎಂಬುದು ಗಮನಾರ್ಹ. ಕೇರಳದಲ್ಲಿ ಕಲಿತ ಕನ್ನಡ ಬಿಎ ಅಥವಾ ಎಂಎ ಮತ್ತು ಬಿಇಡಿ. ಪದವೀಧರರನ್ನು ಕರ್ನಾಟಕದ ಶಾಲೆಗಳಿಗೂ ಪರಿಗಣಿಸಬೇಕು.
ಕರ್ನಾಟಕದಲ್ಲಿ ಕೇರಳ ಬಿಇಡಿ ಪದವಿಗೆ, ಕನಿಷ್ಟ ಪಕ್ಷ ಕನ್ನಡ ಬಿಇಡಿ. ಪದವಿಗಾದರೂ ಮಾನ್ಯತೆ ನೀಡಿ ಕಾಸರಗೋಡಿನ ಕನ್ನಡ ಪದವೀಧರ ಶಿಕ್ಷಕ ವಿದ್ಯಾರ್ಥಿಗಳನ್ನು ಕಾಪಾಡಬೇಕು.












Click it and Unblock the Notifications