ಮೋದಿ-ಗುಜರಾತ್ ನಮಗೆ ಮಾದರಿಯಲ್ಲ

"ಕರ್ನಾಟಕದ ಜನರದ್ದು ತರ್ಲೆ ಬುದ್ಧಿ" ಸುದ್ದಿಗೆ ಪ್ರತಿಕ್ರಿಯಿಸುವುದಾದರೆ. ತರಳೆ (ಲೆ) ಎಂದರೆ ಅಪ್ರಯೋಜಕ ಎಂಬ ಅರ್ಥ ಇದ್ದರೂ ಭೈರಪ್ಪನವರು ತಂಟೆ, ವಿವಾದ ಎಂಬರ್ಥದಲ್ಲಿ ಅದನ್ನು ಬಳಸಿರಬೇಕು. "ಗುಜರಾತ್ ಮಾದರಿ ರಾಜ್ಯವಲ್ಲ, ಆ ಮಾದರಿ ನಮಗೆ ಬೇಕಿಲ್ಲ" ಎಂದು ಸ್ವಘೋಷಿತ ಪ್ರಗತಿಪರರು ಚೀರುವ ಸಾಧ್ಯತೆ ಇದ್ದರೂ ನನ್ನಂಥವರೂ ಹೇಳುವ ಅಂಶಗಳು ಕೆಲವಿವೆ:
ಭೈರಪ್ಪನವರು ಗುಜರಾತಿನಲ್ಲಿ ಇದ್ದರು, ಆ ನಂತರವೂ ಪ್ರವಾಸ ಮಾಡಿದ್ದಾರೆ ನಿಜ. ಆದರೆ ಅದೊಂದು "ಫರ್ಫೆಕ್ಟ್"ಅನ್ನುವುದಕ್ಕೆ ಹತ್ತಿರವಾದ ರಾಜ್ಯವೇನೂ ಅಲ್ಲ. ಬಿಸಿನೆಸ್ ಬುದ್ಧಿಯ ಬಗೆಗೆ ಹೊಗಳಿಕೆ ಸರಿಯಾಗಬಹುದು. (ವಿದೇಶಗಳಲ್ಲೂ ಗುಜರಾತ್ ಮೂಲದವರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ) ರಸ್ತೆಗಳು ಕರ್ನಾಟಕದಲ್ಲಿರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿರಬಹುದು. ಆದರೆ ನೀರಿನ ಹಂಚಿಕೆ ನ್ಯಾಯಪರವಾಗಿದೆ ಎಂದು ಹೇಳುವಂತಿಲ್ಲ.
ಸೌರಾಷ್ಟ್ರ, ಕಛ್ ಪ್ರದೇಶಗಳ ಸಮಸ್ಯೆಗಳು ಪರಿಹಾರವಾಗಿಲ್ಲ. ನಗರಗಳಿಗೆ, ಉದ್ಯಮಗಳಿಗೆ ನೀರಿನ ಸಿಂಹಪಾಲು ಸಿಗುತ್ತದೆ. ಬೇಸಾಯಕ್ಕೆ ದೂರದ ಹಳ್ಳಿಗಳಿಗೆ ನೀರಿನ ಲಭ್ಯತೆ ಈಗಲೂ ಕಡಿಮೆಯೆ!
ನರೇಂದ್ರ ಮೋದಿಯವರು ಸತತವಾಗಿ ಗೆಲ್ಲುತ್ತ ಬಂದಿರುವುದರಿಂದ ಅವರದೇ ಪಕ್ಷದೊಳಗಿನ ಅಸಂತುಷ್ಟರು ಚುನಾವಣೆಯ ಕಾಲದಲ್ಲಿ ಮಾತ್ರ ದನಿಯೇರಿಸುತ್ತಾರೆ. ಅವರಿಗೆ ಜಾತಿಯ ಬೆಂಬಲ ಇದೆ ಎನ್ನಲಾಗದು ಮಕ್ಕಳು ಇಲ್ಲ (ಸ್ವಜನ ಪಕ್ಷಪಾತದ ಮೂಲ ಅದೇ!) ಕರ್ನಾಟಕದಲ್ಲಿ ಭಿನ್ನ ಪರಿಸ್ಥಿತಿ. ವಿವಾದ ಎಬ್ಬಿಸಲು ಎರಡು ಪಕ್ಷಗಳಿವೆ. ಶಾಸಕರ ಸಂಖ್ಯೆಯ ಅಂತರ ಕಡಿಮೆ.
ಸಾಮಾಜಿಕವಾಗಿ ಕೆಲವು ಸಮುದಾಯಗಳ ಪ್ರಾಬಲ್ಯವನ್ನು ಗುಜರಾತಿನಲ್ಲಿಯೂ ಕಾಣಬಹುದು. ಒಟ್ಟಾರೆ ಭೈರಪ್ಪನವರ ಹೇಳಿಕೆ ತರಲೆ (ಜಗಳ) ಹುಟ್ಟಿಸಬೇಕಿಲ್ಲ.












Click it and Unblock the Notifications