ಜಾತಿ ಆಧಾರಿತ ಜನಗಣತಿ: ಬಂಟರು ಏನ್ನಂತಾರೆ?

ಏನೇ ಆಗಲಿ ಜಾತಿ-ಆಧಾರಿತ ಜನಗಣತಿಗೆ ಹೆಚ್ಚಿನ ಬೆಂಬಲ ಇರುವಂತೆ ಕಾಣುತ್ತಿದೆ. ಈ ಸಂದಿಗ್ಧ ವಿಷಯದ ಬಗ್ಗೆ ಇತರ ಜನಾಂಗದ ಮುಖಂಡರು ತಮ್ಮ - ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ಮಂಡಿಸಿದ್ದರೂ ಬಂಟರ ಜನಾಂಗದ ಅಭಿಪ್ರಾಯಗಳೇನು ಎಂಬುದು ಸಮುದಾಯದ ವೇದಿಕೆಯಲ್ಲೆಲ್ಲೂ ಚರ್ಚೆಗೆ ಬಂದಿಲ್ಲ.
ಈಗ ಸರಿಯಾದ ಸಮಯ ಪರ-ವಿರೋಧ ವಿಷಯಗಳನ್ನು ಆಳವಾಗಿ ಚರ್ಚೆಗೆ ಒಳಪಡಿಸಲು. ಬಂಟರ ಜನಾಂಗದ ಸರಿಯಾದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳು ಈ ಜಾತಿಯಾಧಾರಿತ ಜನಗಣತಿಯಲ್ಲಿ ಬೆಳಕಿಗೆ ಬರಬಹುದು.
ಮೇಲಾಗಿ ಕ್ಷೀಣಿಸುತ್ತಿರುವ ಬಂಟ ಜನಾಂಗದ ಜನಸಂಖ್ಯೆ, ಶೇ.28ಗೂ ಮಿಕ್ಕಿ ಇದ್ದ ಬಂಟರ ಜನಸಂಖ್ಯೆ ಇಂದು ಶೇ.18ಗೆ ಇಳಿಯಲು ಕಾರಣಗಳೇನು ಎಂದು ಈಗಿನ ಸೆನ್ಸಸ್‌ನಲ್ಲಿ ಗೊತ್ತಾಗಬಹುದು. ತುಳುನಾಡಿನಲ್ಲಿ ಬಂಟರ ಜನಸಂಖ್ಯೆ ಇಳಿಕೆಗೆ ಮೇಲ್ನೋಟಕ್ಕೆ ಕಾಣುವ ಕಾರಣಗಳು. 1)ವಲಸೆ, 2) ಕುಟುಂಬ ನಿಯೋಜನೆ , 3) ಅಂತರ್‌ಜಾತಿ ವಿವಾಹ.
ವಲಸೆ : ಮೊದಲನೇ ವಿಶ್ವಮಹಾಯುದ್ಧದ ಸಮಯದಲ್ಲಿ ಅಂದರೆ 1911ರ ನಂತರತುಳುವರ ವರಸೆ ಮುಂಬಯಿಯತ್ತ ಶುರುವಾಯಿತು. 1950ರಿಂದ 1975 ರ ಮಧ್ಯೆ ಈ ಮುಂಬೈ ವಲಸೆ ಗರಿಷ್ಟ ಮಟ್ಟಕ್ಕೆ ತಲುಪಿ, ನಂತರ ಇಳಿಮುಖವಾಗಿ, ಕೊಲ್ಲಿ ರಾಷ್ಟ್ರಗಳ ಕಡೆ ಹಾಗೂ ಕರ್ನಾಟಕದ ಒಳನಾಡು ಮತ್ತು ಬೆಂಗಳೂರು ಕಡೆ ವಲಸೆ ಹೆಚ್ಚಿತು.
1990 ನಂತರ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಕಡೆಗೂ ವಲಸೆ ಶುರುವಾಯಿತು. ಇದರಿಂದಾಗಿ ತುಳುನಾಡಿನಲ್ಲಿ ಬಂಟರ ಜನಸಂಖ್ಯೆ ಕಡಿಮೆಯಾಗಿ ಗುತ್ತಿನ ಮನೆಗಳು ಭಣಗುಟ್ಟಿದವು. ಗದ್ದೆಗಳು ಬೀಳುಬಿದ್ದವು, ಕೆರೆ-ಕಟ್ಟೆಗಳು ಒಣಗಿದವು.
1975 ರ ನಂತರದ ಬಂಟರ ಹೊರವಲಸೆಗೆ ಇನ್ನೊಂದು ಮುಖ್ಯ ಕಾರಣ ಬಂಟರ ಜಾತಿಯ ನೆಲೆಯನ್ನೆ ಅಲ್ಲಾಡಿಸಿದ ಭೂಮಸೂದೆ. ಭೂಮಸೂದೆಯಿಂದಾಗಿ ತುಳುನಾಡಿನಲ್ಲಿ ನೆಲ ಕಚ್ಚಿದ ಬಂಟರ ಸಮಾಜ ಫೀನಿಕ್ಸ್‌ನಂತೆ ಮೇಲೆದ್ದಿದ್ದು ಮಾತ್ರ ಹೊರನಾಡಿನಲ್ಲಿ.
ಕುಟುಂಬ ಯೋಜನೆ : 1960ರ ನಂತರ ಬಂಟರ ಹೆಣ್ಣುಗಳಲ್ಲೂ ವಿದ್ಯಾರ್ಜನೆ ತೀವ್ರ ಹೆಚ್ಚಾಗಿ, ಬಂಟ ಹೆಣ್ಣುಗಳೂ ನೌಕರಿ-ಸ್ವ ಉದ್ಯೋಗಕ್ಕೆ ಮಹತ್ವ ಕೊಟ್ಟಿದ್ದರಿಂದ ತಮ್ಮ ಕುಟುಂಬವನ್ನು ಒಂದು ಅಥವಾ ಎರಡು ಮಕ್ಕಳಿಗೆ ಸೀಮಿತಗೊಳಿಸಿದರು.
ಹಲವು ಕಾರಣಗಳಿಂದ ಉದ್ಯೋಗದಲ್ಲಿರುವ ಹೆಣ್ಮಕ್ಕಳ ಮದುವೆಯೂ ತಡವಾಗಿ ಆಗುತ್ತಿತ್ತು. ಈ ಕಾರಣಗಳಿಂದಾಗಿ ಬಂಟರ ಜನಸಂಖ್ಯೆಯಲ್ಲಿ ಸ್ತಂಬನವುಂಟಾಯಿತು.
ಅಂತರ್ಜಾತಿ ವಿವಾಹ : 1980ಕ್ಕೆ ಮೊದಲು ಬಂಟರ ಹೆಣ್ಣುಗಳಲ್ಲಿ ಅಂತರ್ ಜಾತಿ ವಿವಾಹ ಅಪರೂಪವಾಗಿತ್ತು. ಎಲ್ಲೊ ಒಂದೆರಡು ಅಂತರ್ಜಾತಿ ವಿವಾಹವಾಗುತ್ತಿದ್ದವು. ಅದಕ್ಕೆ ಹೆತ್ತವರ ವಿರೋಧವೂ ಇದ್ದಿತು. ಈಗ ತಂದೆ - ತಾಯಿಗಳೇ ಎದುರು ನಿಂತು ಅಂತರ್ಜಾತಿ ವಿವಾಹಕ್ಕೆ ಧಾರೆಯೆರೆದು ಕೂಡುತ್ತಿದ್ದಾರೆ.
ಇನ್ನೊಂದು ಐದು ವರ್ಷಗಳಲ್ಲಿ ಇನ್ನೂ ಆಸೆಬುರುಕ ಹಿರಿಯರ ಮುಷ್ಟಿಯಲ್ಲಿರುವ 'ಬದಿಪ್ರಿಯ' ಬಂಟ ಹುಡುಗನಿಗೆ ಸ್ವಜಾತಿ ಹೆಣ್ಣು ಸಿಗುವುದೇ ದುಸ್ತರವಾಗಬಹುದು. ಇಂತಹದ್ದೇ ಸ್ಥಿತಿ ತುಳುನಾಡಿನ ಇನ್ನೂ ಕೆಲವು ಜಾತಿಗಳಲ್ಲಿ ಇದೆ. ಹಾಗಾಗಿ ಜಾತಿ ಆಧಾರಿತ ಜನಗಣತಿಯು ಇಂತಹಾ ಎಲ್ಲಾ ಜಾತಿಯೊಳಗಣ ವೈರುಧ್ಯಮಯ ಸ್ಥಿತಿ-ಗತಿಗಳಿಗೆ ಕನ್ನಡಿ ಹಿಡಿಯಬಹುದು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications