ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣಮೂರ್ತಿಯಿಂದ ಇಂಥ ಮಾತೆ?

By Staff
|
Google Oneindia Kannada News


ನಮಸ್ಕಾರ,

ಒಪ್ಪಿಕೊಳ್ಳೋಣ ನಾರಾಯಣಮೂರ್ತಿಯವರ ವಿಚಾರಧಾರೆಯನ್ನು. ಅವರು ಹೇಳಿರೋ ಎಲ್ಲ ಸಮಸ್ಯೆಗಳ ಬಗ್ಗೆ ಯೋಚನೆ ಅವಶ್ಯ. ಅದರ ಅರ್ಥ ನಾಡಿನ ಸಂಸ್ಕೃತಿ ಬಗ್ಗೆ ಯೋಚನೆ ಮಾಡಬಾರದು ಅಂತಲ್ಲ. ಅದರಲ್ಲೂ ಜಗತ್ತನ್ನು ನೋಡಿರೋ ನಾರಾಯಣಮೂರ್ತಿಯವರು ಈ ಮಾತನ್ನು ಆಡಬಾರದು. ಲಂಡನ್‌ನಂತಹ ಮಹಾನಗರಿಯಲ್ಲೂ ಕೂಡ ಅವರ ಸಂಸ್ಕೃತಿಯನ್ನು ಬಿಟ್ಟುಕೊಡಲ್ಲ. ಎಲ್ಲ ಪುರಾತನ ಶಿಲ್ಪಗಳು ಇಂದಿಗೂ ಹಾಗೇ ಇವೆ.

ಅವರ ಮೈಸೂರು ಇನ್‌ಫೋಸಿಸ್‌ ಕ್ಯಾಂಪಸ್‌ನಲ್ಲಿ ಎಲ್ಲ ದೇಶದ ಪ್ರಜೆಗಳೂ ಟ್ರೇನಿಂಗ್‌ ತಗೋತಾರೆ. ಅಲ್ಲಿನ ಭೋಜನಶಾಲೆಯಲ್ಲಿ ಎಲ್ಲ ತರಹದ ಊಟ ದೊರೆಯುತ್ತದೆ, ದಕ್ಷಿಣ ಭಾರತದ್ದು ಬಿಟ್ಟು!!! ಕುವೆಂಪು ವಿಶ್ವಮಾನವತಾವಾದ ಹೇಳಿದ್ದು ನಮ್ಮ ಸಂಸ್ಕೃತಿ ಬಿಡಿ ಅಂತ ಅಲ್ವಲ್ಲಾ?? ಬೇರೆಯವರು ಬರಲಿ ಜೊತೆಗೆ ನಮ್ಮ ಸಂಸ್ಕೃತಿ ಇರಲಿ.

ನಾವು ಬೇರೆ ನಾಡಿಗೆ ಹೋಗುವಾಗ ಅಲ್ಲಿನ ಭಾಷೆ ಕಲಿಯುತ್ತೇವೆ. ಕ್ರಾಸ್‌ ಕಲ್ಚರಲ್‌ ಟ್ರೇನಿಂಗ್‌ ಕೊಡಲಾಗುತ್ತದೆ. ಆದರೆ ಎಷ್ಟು ಜನ ಬೆಂಗಳೂರವರಿಗೆ ಬೆಂಗಳೂರಿನ ಬಗ್ಗೆ ಗೊತ್ತು ಅಂತ ಕೇಳಿ??

ಬೆಂಗಳೂರು ಬರಿ ಹೆಸರಿನ ಬದಲಾವಣೆಯಲ್ಲ. ಪ್ರತಿಯಾಬ್ಬನಿಗೂ ಅವನು ವಾಸ ಮಾಡೋ ನಾಡಿನ ಸಂಸ್ಕೃತಿ-ಭಾಷೆಯ ಜ್ಞಾನ ಇರಬೇಕು. ನಾರಾಯಣಮೂರ್ತಿಯವರಿಗೆ ಅದರಿಂದ ಡಾಲರ್‌ ಬರಲ್ಲ. ಅದಕ್ಕೇ ಅವರಿಗೆ ಅದು ನಗಣ್ಯ. ಸ್ಯಾಮ್‌ ಅಂಕಲ್‌ ಹಿಂದೆ ಓಡ್ತಾ ದಯವಿಟ್ಟು ನಮ್ಮ ಸೋಮಯ್ಯನನ್ನು ಮರೀಬೇಡಿ ನಾರಾಯಣ ಸಾರ್‌.

ಇನ್‌ಫೋಸಿಸ್‌ನ ಕಲ್ಟರ್‌ ಹಾಗೂ ಚಾರಿಟಿ ಬಗ್ಗೆ ಗೌರವ ಇದ್ದೇ ಇದೆ. ಅದು ನಮಗೆಲ್ಲ ಅನುಕರಣೀಯ. ನಾನು ಹೃದಯದಿಂದ ಸಮಾಜವಾದಿ. ಆದರೆ, ಕಾನ್ಷಿಯಸ್ಸಾಗಿ ಬಂಡವಾಳಶಾಹಿತ್ವವನ್ನು ಒಪ್ಪಿಕೊಂಡವನು ಅಂತ ಹೇಳೋ ನಾರಾಯಣಮೂರ್ತಿಯವರು ಈ ತರಹದ ಸ್ಟೇಟ್‌ಮೆಂಟ್‌ ಯಾಕೆ ಕೊಡುತ್ತಾರೋ ಗೊತ್ತಿಲ್ಲ.

- ದೀಪಕ್‌, ಬೆಂಗಳೂರು

*

ಹಲೋ,

ಆನಂದ್‌ ಜಿ ಅವರ ನಮ್ಮ ಕರ್ನಾಟಕದ ಸುವರ್ಣ ಪುಟಗಳು ಲೇಖನದಲ್ಲಿರುವ ಒಂದು ತಪ್ಪು ಮಾಹಿತಿ ಸರಿಪಡಿಸಲು ಬರೆಯುತ್ತಿದ್ದೇನೆ.

ಪ್ರಜಾಹಿತಕ್ಕಾಗಿ ಅಮೋಘವರ್ಷ ನೃಪತುಂಗ ತನ್ನ ಹೆಬ್ಬೆರಳನ್ನು ಅರ್ಪಿಸಿದ್ದು ಕೊಲ್ಲೂರಿನ ಮೂಕಾಂಬಿಕೆಗಲ್ಲ, ಕೊಲ್ಲಾಪುರದ ಮಹಾಲಕ್ಷ್ಮಿಗೆ. ಇದು ಸಂಜಾನ್‌ ತಾಮ್ರ ಶಾಸನದಲ್ಲಿ ದಾಖಲಾಗಿರುವ ಸತ್ಯ ಸಂಗತಿ.

- ರಾಮಪ್ರಸಾದ್‌ ಕೆ ವಿ, ಕ್ಯಾಲಿಫೋರ್ನಿಯಾ

*

Dear Editor,

As a grandson of poet Sali Ramachandrarao, it was heart touching to read Nataraj, Marylands reference to his unforgettable poem Kannadada pullenage. The other tributes in the article are also very evocative to us Kannadigas. My hearty congratulations.

We have the original text of Sali Ajjas poem, which has some variations from your quotation. Srivatsa Desai of Doncaster UK, who has been contributing this site, will be posting a piece on the subject. Meanwhile, our deepest appreciation to Nataraj.

- Mohandas Desai, City?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X