• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಪಿ. ಬಾಲಸುಬ್ರಮಣ್ಯಂ ಅಸಲಿ ಕತೆ ನಮ್ಗೆ ಗೊತ್ತು ಬಿಡಿ!

By Staff
|

ಹಾಯ್‌,

ನಿಮ್ಮ ಅನಿಸಿಕೆ ಓದಿ ‘ಹೌದಲ್ಲ!’ ಅನ್ನಿಸಿತು.ಆ ದಿನದ ತೀರ್ಪು ಸರಿಯಾಗಿಲ್ಲ ಅಂದುಕೊಂಡಿರುವವರಲ್ಲಿ ನಾನೂ ಒಬ್ಬ. ಯಾಕೋ ಈ ಸ್ಪರ್ಧೆ ಪೂರ್ವಾಗ್ರಹ ಪೀಡಿತ ಅನ್ನಿಸಿತು. ಅ ದಿನ ಎಸ್‌ಪಿಯವರು ಅ ಬಾಲೆಯ ಉಚ್ಛಾರ ತಿದ್ದುತ್ತಾರೆಂದು ನಾನೂ ಅಂದುಕೊಂಡಿದ್ದೆ. ಆದರೆ ಅದು ಸುಳ್ಳಾಯಿತು.

- ಅಶೋಕ ಮಂಬಾಡಿ

*

ನಮಸ್ಕಾರ,

ಯಶ್‌ ಅವರು ಹೇಳಿರುವಂತೆ ಖಂಡಿತ 100ಕ್ಕೆ 100 ಸತ್ಯ. ನಾನು ಕೂಡ ಅವತ್ತು ಆ ಕಾರ್ಯಕ್ರಮ ನೋಡಿದೆ. ಹಾರುವ ಅನ್ನುವ ಬದಲು ಆ ಆಂಧ್ರ ಹುಡುಗಿ ಹಾಡುವ ಅಂತ ಹೇಳಿದಳು. ಸಿಕ್ಕಾಪಟ್ಟೆ ತಪ್ಪುಗಳು ಇದ್ದರೂ ಎಸ್ಪಿಬಿ ಒಂದೇ ಒಂದು ತಪ್ಪು ಕಂಡುಹಿಡಿಯಲಿಲ್ಲ. ಮತ್ತು ನಮ್ಮ ಕನ್ನಡದವರೇ ಆದ ತೀರ್ಪುಗಾರರು ಸಹ ಅದನ್ನು ಕಂಡುಹಿಡಿಯಲಿಲ್ಲ. ಅದೇ ತೆಲುಗು ಅಥವ ತಮಿಳು ಹಾಡು ಆಗಿದ್ದರೆ ಎಸ್ಪಿಬಿಯವರಿಗೆ ಗೊತ್ತಾಗುತ್ತಿತ್ತು. ಕನ್ನಡ ಅಂದರೆ ಎಸ್ಪಿಬಿಯವರಿಗೆ ತುಂಬ ಇಷ್ಟ ನೋಡಿ ಅದಕ್ಕೇ ಅವರು ತಪ್ಪು ಕಂಡುಹಿಡಿಯಲಿಲ್ಲ!

- ಮುಕುಂದ್‌ ತೇಜಸ್ವಿ

*

ನಿಜ ಹೇಳಲು ಅಂಜಿಕೆ ಏಕೆ?

ಅದರಲ್ಲು ಕಾರ್ಯಕ್ರಮಕ್ಕೆ ಬರುವ ಹಲವು ತೀರ್ಪುಗಾರರು ಸಂಗೀತ ಹೇಳಿಕೋಡುವ ಮಂದಿ. ಅವರೆ ತಿದ್ದಿ ಹೇಳದಿದ್ದರೆ ಆಂಧ್ರದ ಹುಡುಗಿಗೆ ಕನ್ನಡದ ಸೊಗಡು ತಿಳಿಯೋದಾದರೂ ಹೇಗೆ?

ಎಸ್ಪಿಬಿ ದೊಡ್ಡ ಪ್ರತಿಭೆ ಅದರಲ್ಲಿ ಅನುಮಾನವಿಲ್ಲ. ಆದರು ಕಾರ್ಯಕ್ರಮಕ್ಕೆ ಬರುವ ಜಡ್ಜಗಳು ಮಂಕರಂತೆ ಏಕೆ? ಕಾರ್ಯಕ್ರಮದ ಎಡಿಟರ್‌ ಆದರೂ ಎಸ್ಪಿಬಿ ಅನ್ನು ಎಜ್ಯುಕೇಟ್‌ ಮಾಡಬೇಕಿತ್ತಲ್ಲವೆ? ಎಸ್ಪಿಬಿ ‘ಗುಂಡು’ ಅಂದ್ರೆ ಸೀರಿಯಸ್ಲಿ ಅಲ್ಕೋಹಾಲ್‌ ಅಂತ ತಿಳಿದಿದ್ದಾರೆ ಅನ್ನಿಸುತ್ತೆ!

- ಗುರು

*

ನಮಸ್ಕಾರ ಯಶ್‌ರವರಿಗೆ,

ಈ ಕಾರ್ಯಕ್ರಮದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದರೂ ಈ ಫೆವರಿಟಿಸಂ ಬಗ್ಗೆ ಸ್ವಲ್ಪ ಜಾಸ್ತಿನೆ ಗೊತ್ತು. ಎಸ್ಪಿಯವರು ಮಾಡಿದ್ದೂ ಅದನ್ನೇ ಇರಬಹುದಲ್ಲವ? ಅವರ ಭಾಷೆ ಮಾತನಾಡುವ ಹುಡುಗಿ ಕನ್ನಡದಲ್ಲಿ ಹಾಡಿದ್ದಾಳೆ ಎನ್ನುವುದೆ ಅವಳಿಗೆ ಹೆಚ್ಚು ಅಂಕ ಬೀಳಲು ಕಾರಣವಾಗಿರಬಹುದು.

ಸ್ಥಳೀಯ ಹುಡುಗಿ ಸ್ಪಷ್ಟವಾಗಿ ಹಾಡಿದರೇನಂತೆ ಬೇರೆ ಭಾಷೆಯವಳು ಪ್ರಯತ್ನ ಪಟ್ಟಿದ್ದ್ದೆ ಹೆಚ್ಚು ಅಲ್ಲವ ? ಕನ್ನಡದ ತೀರ್ಪುಗಾರರಿಗೆ ಎಸ್ಪಿಯವರ ವರ್ಚಸ್ಸು ಇಲ್ಲವಲ್ಲ ! ಈ ರೀತಿಯ ತಮಗೆ ಬೇಕಾದವರನ್ನು ಮೇಲೇರಿಸುವ ವಿದ್ಯಮಾನಗಳು ಹೆಚ್ಚಾಗಿ ಉದ್ಯಮದಲ್ಲಿ ಕಾಣಬಹುದು. ಮೊದಲು ಒಬ್ಬರು ಉನ್ನತ ಸ್ಥಾನಕ್ಕೆ ಬಂದು ಒಂದು ಪ್ರತಿಷ್ಠಿತ ಉದ್ಯಮಕ್ಕೆ ಸೇರಿದರು ಎಂದುಕೊಳ್ಳೋಣ. ಅಮೆಲೆ ಅವರು ಅವರ ಭಾಷೆ ಮಾತಾಡುವವರನ್ನು ಸೇರಿಸಿಕೊಳ್ಳುತ್ತಾರೆ. ಅಮೇಲೆ ನಿಧಾನವಾಗಿ ಸ್ಥಳೀಯರಿಗೆ ಆದ್ಯತೆ ಕಡಿಮೆ ಅಗುತ್ತ ಹೊಗುತ್ತದೆ. ಈಗ ನಮ್ಮ ಕರ್ನಾಟಕದ ಐಟಿ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಆಗುತ್ತಿರುವುದೂ ಇದೆ. ಜೈ ಕರ್ನಾಟಕ ಮಾತೆ.

- ರಾಜ್‌ ಪಿ.

*

Sir,

We should all raise our voices against this mis-judgement on that program and who ever was the right winner, he/she should get the prize !

This should be brought to the notice of SPB or program director and who so ever is conducting/airing this program. They should know that we are not happy about his decision and it is just unfair to encourage such "Kannadada kole" on "Kannadada nele"....

- Konanur Veena

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X