keyboard_backspace

ಮಧ್ಯಪ್ರದೇಶ ಇಂಜಿನಿಯರಿಂಗ್‌ ಕೋರ್ಸ್‌ನಲ್ಲಿ ರಾಮಸೇತು ಪಠ್ಯ!

Google Oneindia Kannada News

ಭೋಪಾಲ್‌, ಸೆಪ್ಟೆಂಬರ್‌ 15: ಮಧ್ಯಪ್ರದೇಶದ ಪದವಿಪೂರ್ವ ವಿದ್ಯಾರ್ಥಿಗಳ ಪಠ್ಯಕ್ರಮದ ಭಾಗ ತುಳಸಿದಾರರ ರಾಮಚರಿತಾಮಾನಸ ಆಗಿದ್ದು, ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ರಾಮಸೇತುವಿನ ಬಗ್ಗೆ ಕಲಿಯ ಬೇಕಾಗುತ್ತದೆ. ಬಲ ಪಂಥೀಯರು ಈ ರಾಮಸೇತು ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಮೂಲವಾಗಿ ಕಲಿಯಬೇಕಾದ ವಿಷಯ ಎಂದು ಪರಿಗಣಿಸಿರುವ ಹಿನ್ನೆಲೆ ಪಠ್ಯದಲ್ಲಿ ರಾಮಾಯಣದ ರಾಮಸೇತು ವಿಷಯವಿದೆ ಎನ್ನಲಾಗಿದೆ. ಇನ್ನು ಈ ನಡುವೆ ಮೆಡಿಕಲ್‌ ವಿದ್ಯಾರ್ಥಿಗಳು ಮೆಡಿಸಿನ್‌ಗಳ ಬಗ್ಗೆ ಹಿಂದಿಯಲ್ಲಿ ಕಲಿಯುವ ಅವಕಾಶವನ್ನು ಕೂಡಾ ಮಾಡಿಕೊಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್‌ ಸಾರಂಗ್‌, "ಹಿಂದಿಯಲ್ಲೂ ಕೂಡಾ ವೈದ್ಯಕೀಯ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ನಾವು ಕಮಿಟಿ ಒಂದನ್ನು ರಚನೆ ಮಾಡಲು ಸಿದ್ದತೆಯನ್ನು ನಡೆಸಿದ್ದೇವೆ. ಶೀಘ್ರದಲ್ಲೇ ನಾವು ಹಿಂದಿ ಭಾಷೆಯಲ್ಲೂ ವೈದ್ಯಕೀಯ ಶಿಕ್ಷಣವನ್ನು ಆರಂಭ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.

ಸಿಎಂ ಯೋಗಿ, ಬಾಬಾ ರಾಮ್‌ದೇವ್‌ ಪುಸ್ತಕಗಳು ಯುಪಿ ವಿವಿಗಳ ತತ್ವಶಾಸ್ತ್ರ ವಿದ್ಯಾರ್ಥಿಗಳ ಪಠ್ಯ ಸಿಎಂ ಯೋಗಿ, ಬಾಬಾ ರಾಮ್‌ದೇವ್‌ ಪುಸ್ತಕಗಳು ಯುಪಿ ವಿವಿಗಳ ತತ್ವಶಾಸ್ತ್ರ ವಿದ್ಯಾರ್ಥಿಗಳ ಪಠ್ಯ

ಉನ್ನತ ಶಿಕ್ಷಣದ ಪಠ್ಯಕ್ರಮ ಸಮಿತಿಯ ಶಿಫಾರಸ್ಸಿನ ಮೇರೆಗೆ ಈಗಾಗಲೇ 2021-22 ರ ಬಿಎ ಮೊದಲ ವರ್ಷದ ವಿದ್ಯಾರ್ಥಿಗಳಿಗೆ "ರಾಮಚರಿತ್‌ ಮಾನಸ್‌ ಕೆ ವೈಚಾರಿಕ್‌ ದರ್ಶನ್‌" (ರಾಮಚರಿತ ಮಾನಸ ಕೃತಿಕ ವೈಚಾರಿಕ ದರ್ಶನ) ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಈ ವಿಷಯವು ಒಂದು ಪಠ್ಯದ ಒಂದು ಭಾಗವಾಗವಾಗಲಿದೆ. 100 ಅಂಕಗಳ ಪ್ರಶ್ನೆ ಪತ್ರಿಕೆಯನ್ನು ಈ ವಿಷಯದ ಪರೀಕ್ಷೆಯ ಸಂದರ್ಭದಲ್ಲಿ ತಯಾರಿ ಮಾಡಲಾಗುತ್ತದೆ. ಹಾಗೆಯೇ ಭಾರತೀಯ ಸಂಸ್ಕೃತಿಯ ಮೂಲ ಮೂಲಗಳಲ್ಲಿ ಆಧ್ಯಾತ್ಮಿಕತೆ ಮತ್ತು ಧರ್ಮ, ನಾಲ್ಕು ವೇದಗಳು, ಉಪನಿಷತ್ತುಗಳು ಹಾಗೂ ಪುರಾಣಗಳು, ರಾಮಾಯಣ ಹಾಗೂ ಮಹಾಭಾರತದ ನಡುವಿನ ವ್ಯತ್ಯಾಸಗಳನ್ನು, ದೈವಿಕ ಅಸ್ತಿತ್ವದ ಅವತಾರಗಳನ್ನು ಕೂಡಾ ಈ ಪಠ್ಯ ಕ್ರಮದ ಭಾಗವಾಗಲಿದೆ.

 'ಯಾವುದೇ ಪಿಎಚ್‌ಡಿ, ಡಿಗ್ರಿ ಮೌಲ್ಯಯುತವಲ್ಲ': ತಾಲಿಬಾನ್‌ ನೂತನ ಶಿಕ್ಷಣ ಸಚಿವ 'ಯಾವುದೇ ಪಿಎಚ್‌ಡಿ, ಡಿಗ್ರಿ ಮೌಲ್ಯಯುತವಲ್ಲ': ತಾಲಿಬಾನ್‌ ನೂತನ ಶಿಕ್ಷಣ ಸಚಿವ

 ಆರ್‌ಎಸ್‌ಎಸ್‌, ಜನತಾ ಸಂಘ ನಾಯಕರ ಜೀವನ ಚರಿತ್ರೆ!

ಆರ್‌ಎಸ್‌ಎಸ್‌, ಜನತಾ ಸಂಘ ನಾಯಕರ ಜೀವನ ಚರಿತ್ರೆ!

"ಇನ್ನು ಬಿಎ ಯಲ್ಲಿ ಆಂಗ್ಲ ಭಾಷೆಯನ್ನು ಆಯ್ಕೆ ಮಾಡಿಕೊಂಡಿರುವವರಿಗೆ, ಸಿ ರಾಜಗೋಪಾಲ್‌ಚಾರಿ ಬರೆದ ಮಹಾಭಾರತವು ಮೊದಲ ವರ್ಷದಲ್ಲಿ ಪಠ್ಯಕ್ರಮವಾಗಿರಲಿದೆ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವದ ಬೆಳವಣಿಗೆಯನ್ನು ಮಾಡುವ ಮೂಲಕ ನಾಯಕತ್ವ ಸಾಮರ್ಥ್ಯ ಮತ್ತು ಮಾನವೀಯ ಮನೋಭಾವವನ್ನು ಹುಟ್ಟಿಸುವ ನಿಟ್ಟಿನಲ್ಲಿ ಈ ಪಠ್ಯಕ್ರಮವು ಸಹಾಯವಾಗಲಿದೆ," ಎಂದು ಸರ್ಕಾರ ಹೇಳಿಕೊಂಡಿದೆ. ಇನ್ನು ಇಷ್ಟು ಮಾತ್ರವಲ್ಲದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ನ ಡಾ. ಕೆ ಬಿ ಹೆಗ್ಡೆವಾರ್‌, ಭಾರತೀಯ ಜನ್‌ ಸಂಘದ ಮುಖ್ಯಸ್ಥ ದೀನ್‌ ದಯಾಳ್‌ ಉಪಾಧ್ಯಾಯ ಹಾಗೂ ಡಾ. ಬಿ ಆರ್‌ ಅಂಬೇಡ್ಕರ್‌ ಸೇರಿದಂತೆ ಹಲವು ನಾಯಕರ ಜೀವನಚರಿತ್ರೆಯನ್ನು ಕೂಡಾ ವೈದ್ಯಕೀಯ ಮೊದಲ ವರ್ಷದ ಕೋರ್ಸ್‌ನಲ್ಲಿ ಅಳವಡಿಸಲಾಗುತ್ತಿದೆ. ಇನ್ನು ಈ ವಿಷಯಗಳನ್ನು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ವೈದ್ಯಕೀಯ ನೈತಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಸರ್ಕಾರದ ಸಚಿವರುಗಳು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ವಿಜ್ಞಾನಿಗಳ ಸಲಹೆ ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಬಿ.ಸಿ ನಾಗೇಶ್ವಿಜ್ಞಾನಿಗಳ ಸಲಹೆ ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಬಿ.ಸಿ ನಾಗೇಶ್

 ಶಿಕ್ಷಣದಲ್ಲಿ ಕೇಸರೀಕರಣ ಮಾಡುವ ತಂತ್ರವೇ?

ಶಿಕ್ಷಣದಲ್ಲಿ ಕೇಸರೀಕರಣ ಮಾಡುವ ತಂತ್ರವೇ?

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್, "ನಮ್ಮ ಭವ್ಯವಾದ ಭೂತಕಾಲವನ್ನು ಮುಂಚೂಣಿಗೆ ತರುವ ನಿಟ್ಟಿನಲ್ಲಿ ನಾವು ಈ ಬದಲಾವಣೆಯನ್ನು ಮಾಡಿಕೊಂಡಿದ್ದೇವೆ. ತಜ್ಞರ ಶಿಫಾರಸ್ಸಿನ ಮೇರೆಗೆ ಈ ಹೊಸ ಪಠ್ಯಕ್ರಮವನ್ನು ಜಾರಿ ಮಾಡಲಾಗುತ್ತಿದೆ," ಎಂದು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್‌ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಇದು "ಶಿಕ್ಷಣದಲ್ಲಿ ಕೇಸರೀಕರಣ ಮಾಡುವ ತಂತ್ರ" ಎಂದು ಆರೋಪ ಮಾಡಿದ್ದಾರೆ. ಆದರೆ ಶಿಕ್ಷಣ ಸಚಿವರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. "ರಾಮಸೇತು ಮಿಲಿಯನ್‌ ವರ್ಷಗಳ ಹಿಂದೆ ಜನರು ನಿರ್ಮಾಣ ಮಾಡಿರುವ ಸೇತುವೆ ಎಂದು ನಾಸಾದಿಂದ ಪ್ರಮಾಣೀಕೃತವಾಗಿದೆ. ಆದ್ದರಿಂದ ಇದನ್ನು ಇಂಜಿನಿಯರಿಂಗ್‌ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ," ಎಂದು ಸಚಿವರುಗಳು ಹೇಳಿಕೊಂಡಿದ್ದಾರೆ.

 ಎಲ್ಲಾ ಧರ್ಮದ ಪಠ್ಯವನ್ನು ಕೂಡಾ ವಿದ್ಯಾರ್ಥಿಗಳಿಗೆ ಕಲಿಸಿ

ಎಲ್ಲಾ ಧರ್ಮದ ಪಠ್ಯವನ್ನು ಕೂಡಾ ವಿದ್ಯಾರ್ಥಿಗಳಿಗೆ ಕಲಿಸಿ

ಇನ್ನು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ‌ ಮುಖಂಡ ಆರಿಫ್‌ ಮಸೂದ್‌, "ಮಧ್ಯ ಪ್ರದೇಶದ ಬಿಜೆಪಿ ಸರ್ಕಾರವು ಪಠ್ಯ ಕ್ರಮದಲ್ಲಿ ರಾಮಚರಿತಮಾನಸ್‌ ಜೊತೆಗೆ ಗುರು ಗ್ರಂಥ ಸಾಹಿಬ್‌, ಕುರಾನ್‌, ಬೈಬಲ್‌ ಅನ್ನು ಕೂಡಾ ಸೇರಿಸಿದ್ದರೆ, ಉತ್ತಮವಾಗಿರುತ್ತಿತ್ತು. ಈ ಮೂಲಕ ಮಕ್ಕಳು ಭಾರತದಲ್ಲಿರುವ ಎಲ್ಲಾ ಧರ್ಮದ ಬಗ್ಗೆ ತಿಳಿಯುತ್ತಾರೆ ಹಾಗೂ ಈ ಮೂಲಕ ಭಾರತದ ಸಂವಿಧಾನವನ್ನು ಎತ್ತಿ ಹಿಡಿದಂತೆ ಆಗುತ್ತದೆ," ಎಂದು ಅಭಿಪ್ರಾಯಿಸಿದ್ದಾರೆ.

 ಹೇಗಿದೆ ಅಟಲ್‌ ಬಿಹಾರ್‌ ವಾಜಪೇಪಯಿ ಹಿಂದಿ ವಿಶ್ವವಿದ್ಯಾಲಯದ ಪರಿಸ್ಥಿತಿ

ಹೇಗಿದೆ ಅಟಲ್‌ ಬಿಹಾರ್‌ ವಾಜಪೇಪಯಿ ಹಿಂದಿ ವಿಶ್ವವಿದ್ಯಾಲಯದ ಪರಿಸ್ಥಿತಿ

ಇದಕ್ಕೂ ಹಿಂದೆ ಉನ್ನತ ಶಿಕ್ಷಣದಲ್ಲಿ ಹಿಂದಿ ಪಠ್ಯಕ್ರಮವನ್ನು ಅಳವಡಿಸುವ ಕಾರ್ಯವನ್ನು ಮಧ್ರ ಪ್ರದೇಶ ಸರ್ಕಾರ ಮಾಡಿತ್ತು. 2011 ರಲ್ಲಿ ಅಟಲ್‌ ಬಿಹಾರ್‌ ವಾಜಪೇಪಯಿ ಹಿಂದಿ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಆರಂಭವಾಗಿದ್ದು, ಇದರಲ್ಲಿ ಇಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ನೀಡಲು ಮುಂದಾಯಿತು. ಆದರೆ 10 ವರ್ಷವಾದರೂ ಈ ಕಾರ್ಯ ಯಶಸ್ವಿಯಾಗಿಲ್ಲ ಅಥವಾ ಮುನ್ನಡೆ ಸಾಧಿಸಿಲ್ಲ. 2018 ರಲ್ಲಿ ಇಂಜಿನಿಯರಿಂಗ್‌ ವಿಭಾಗವು ನಿಂತಿತು. ಶಿಕ್ಷಕರು ಇಲ್ಲದ ಕಾರಣ, ಹಿಂದಿಯಲ್ಲಿ ಭಾಷಾಂತರವಾದ ಪಠ್ಯಕ್ರಮವಿಲ್ಲದ ಕಾರಣ, ಪುಸ್ತಕಗಳು ಇಲ್ಲದ ಕಾರಣ, ಕೊನೆಗೆ ವಿದ್ಯಾರ್ಥಿಗಳೇ ಇಲ್ಲದ ಕಾರಣದಿಂದಾಗಿ ಈ ವಿಭಾಗವನ್ನು ಮುಚ್ಚಲಾಗಿತ್ತು. ಈ ವಿಶ್ವವಿದ್ಯಾನಿಲಯದಲ್ಲಿ ಎಂಟು ಪಿಯೋನ್‌ ಕೆಲಸಗಾರರು, ಇಬ್ಬರು ಚಾಲಕರು ಇದ್ದರು. ಹಾಗೆಯೇ ಸುಮಾರು 74 ವಿಭಾಗಗಳನ್ನು 29 ಶಿಕ್ಷಕರು ನಿರ್ವಹಣೆ ಮಾಡುತ್ತಿದ್ದರು. ಎಲ್ಲರೂ ಕೂಡಾ ಅತಿಥಿ ಶಿಕ್ಷಕರಾಗಿದ್ದರು. ಹತ್ತು ವರ್ಷದಲ್ಲಿ ಯಾವುದೇ ಶಿಕ್ಷಕರನ್ನು ನೇಮಕಾತಿ ಮಾಡಿಲ್ಲ.

(ಒನ್‌ ಇಂಡಿಯಾ ಸುದ್ದಿ)

English summary
"Ramcharitmanas" of Tulsidas will be part of the curriculum for undergraduate students in Madhya Pradesh and students of engineering will have to learn about Ramsetu.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X