ಸುಮ್‌ಸುಮ್ನೆ ಸಿಟ್ಟಾಗ್ತಿದ್ದೀರಾ; ಕೋಪಕ್ಕೆ ಕಡಿವಾಣ ಹಾಕೋದು ಹೇಗೆ...
ಇದು ನಿನ್ನೆ ತಾನೇ ನಡೆದ ಪ್ರಸಂಗ. ನನ್ನೊಡನೆ ನಗುನಗುತ್ತಲೇ ಮಾತಾಡುತ್ತಿದ್ದ 30 ವರ್ಷದ ಗೀತಾ ವಿದ್ಯಾವಂತೆ. ಆರು ವರ್ಷದ ಮಗುವಿನ ತಾಯಿ. ಮನೆಯಿಂದಲೇ ಕುಳಿತು ಕೆಲಸ ಮಾಡುವಂತಹ ವೃತ್ತಿ ಶಿಕ್ಷಣ, ಕೌಶಲ್ಯ ಅವಳದ್ದು. ಅದೇನೋ ಸಣ್ಣದೊಂದು ವಿಷಯದ ಬಗ್ಗೆ ನನ್ನ ಅಭಿಪ್ರಾಯ ಆಕೆಗೆ ಹಿಡಿಸಲಿಲ್ಲ. ಅದೂ ಅವಳಿಗೆ ನೇರವಾಗಿ ಸಂಬಂಧಿಸಿದ್ದಂತೂ ಅಲ್ಲ. ಅದೇನು ಬಂತೋ ಅವಳ ಮನಸಿಗಾಗ ಮುಖ ಕೆಂಪೇರಿಸಿಕೊಂಡು ಬಾಯಿಗೆ ಬಂದಿದ್ದೆಲ್ಲಾ ಕಣ್ಣೀರು ಸುರಿಸುತ್ತಲೇ ಹೇಳಿದಳು.
ಸರಿ, ಅವಳು ಏನಾದರೂ ಹೇಳಲಿ ಎಂದುಕೊಂಡು ಅವಳ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದೆ. ಏಕೆಂದರೆ ಸಂಕಟದಲ್ಲಿದ್ದಾಗ, ಸಹನೆ ಕಳೆದುಕೊಂಡಿದ್ದಾಗ ಹೌಹಾರುವುದು ಸಾಮಾನ್ಯ. ಕೊಂಚ ಸಮಯದ ನಂತರ ದೇಹದ ಹಿಡಿತ ಸಿಕ್ಕಂತೆ ಕಂಡು ಬಂತು. ತಾಳ್ಮೆಯಿಂದ ಮಾತಾಡುವುದಕ್ಕೂ ಸಾಧ್ಯವಾಯಿತು. ನನಗೆ ಕ್ಷಮೆ ಕೇಳಿದಳು. ಇತ್ತೀಚಿನ ದಿನಗಳಲ್ಲಿ ಇಂತಹ ವರ್ತನೆ ಸಾಮಾನ್ಯವಾಗಿದ್ದು ಇತರರಿಗಷ್ಟೇ ಅಲ್ಲದೇ ತನಗೂ ಹಿಂಸೆ ಆಗುತ್ತಿದೆ ಎನ್ನುವುದನ್ನು ಸವಿವರವಾಗಿ ಹೇಳಿ, ಇದರಿಂದ ಹೊರಬರುವುದರ ಬಗ್ಗೆ ಸಲಹೆ ಕೇಳಿದಳು.
ಇದು ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುವ ಕೋಪದ ವರ್ತನೆ ಎಂದು ಗುರುತಿಸುವುದು ಕಷ್ಟವಲ್ಲ. ಆದರೆ ಕೋಪ ಬಂದಾಗ ಹೀಗೇಕೆ ಆಗುವುದು ಎನ್ನುವುದೇ ಪ್ರಶ್ನೆ. ಪ್ರಶ್ನೆಯೇನೋ ಸರಳವೆನಿಸಿದರೂ ಉತ್ತರ ಮಾತ್ರ ಸರಳವಾಗಿರದು. ಏಕೆಂದರೆ ಕೋಪ ಎಲ್ಲರಲ್ಲೂ ಇರುವುದಾದರೂ ಅದು ವ್ಯಕ್ತಗೊಳ್ಳುವ ರೀತಿ, ಸಮಯ ಮತ್ತು ಉದ್ದೇಶಗಳು ಸಮವಾಗಿರದು. ಇದಕ್ಕೆ ಕಾರಣಗಳು ಸಾವಿರಾರು. ಆದರೂ ಕೋಪವನ್ನು ತಡೆದು ಹಿಡಿದುಕೊಳ್ಳಲು ಸಾಧ್ಯ ಎನ್ನುತ್ತದೆ ಮನೋವಿಜ್ಞಾನದ ಸಂಶೋಧನೆಗಳು. ಹೀಗಾಗಿ ಕೋಪ, ತಾಪಗಳನ್ನು ತಡೆಯುವ ವಿಧಿ, ವಿಧಾನಗಳೂ ಸಾಧ್ಯವಾಗಿವೆ. ಮುಂದೆ ಓದಿ...

ಸಾಮಾನ್ಯವಾಗಿ ಕೋಪ ಬರುವಂತೆ ಮಾಡುವ ಪರಿಸ್ಥಿತಿಗಳು...
ದೈಹಿಕ ಸ್ಥಿತಿಗಳಾದ ದಣಿವು, ಹಸಿವು, ನೋವು, ವ್ಯಾಧಿ, ಮದ್ದು ಮತ್ತು ಮಾದಕ ವಸ್ತುಗಳ ಅವಲಂಬನೆ ಕೋಪಕ್ಕೆ ಕಾರಣವಾಗಬಹುದು. ಅದೇ ರೀತಿ ಅಪಮಾನ, ನಿಂದನೆ, ಬೇಸರ, ಸೋಲು, ತಿರಸ್ಕಾರ, ಮುಜುಗರ, ಅವಸರ, ಅನ್ಯಾಯ, ಹಳೆಯ ನೋವಿನ ನೆನಪುಗಳು. ಆತ್ಮೀಯರಿಂದ ವಂಚನೆ, ಕುತಂತ್ರಗಳೂ ಕೋಪ ತಾಪವನ್ನು ಹೊರತರಬಲ್ಲವು.

ಕೋಪದ ನಿರ್ವಹಣೆ ಹೇಗೆ?
ಕೋಪದ ಕಾರಣಗಳು ಹಲವಾರು ಇರುವಂತೆಯೇ ಅವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ವಿಧಗಳೂ ಹಲವಾರು. ಗೀತಾಳ ಕೋಪದ ಒಂದು ರೀತಿ ನನ್ನೆದುರಿಗೇ ವ್ಯಕ್ತಗೊಂಡಿದ್ದರಿಂದ ಅದನ್ನು ತಕ್ಷಣದಲ್ಲಿ ಶಮನಿಸುವ ಮಾದರಿಯನ್ನು ಕಲಿಸುವುದಕ್ಕೆ ಸುಲಭವಾಯಿತು.
ಮೊದಲಿಗೆ ಗೀತಾಳ ಸಾಮಾಜಿಕ ಪರಿಸರದ ಬಗ್ಗೆ ಒಂದೆರಡು ಮಾಹಿತಿ: ಆಕೆಯ ಪತಿಯೂ ವೃತ್ತಿಪರ. ಮದುವೆಯಾಗಿ ಸುಮಾರು ಏಳೆಂಟು ವರ್ಷಗಳಾಗಿತ್ತು. ಅವರ ಸಂಸಾರವೆಂದರೆ ಅತ್ತೆ, ಮಾವ, ಗಂಡ ಮತ್ತು ಮಗು. ಅವರು ವಾಸಿಸುತ್ತಿದ್ದುದು ವಸತಿ ಸಮುಚ್ಚಯದಲ್ಲಿ. ಅದರಲ್ಲಿ ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿ ಇದ್ದದ್ದು. ಅವಳ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ಆಕೆ ಹೆಚ್ಚು ಮಾತಾಡದ ಒಳ ಮುಖಿ. ಒಡನಾಡಿತನವನ್ನು ಹೆಚ್ಚಾಗಿ ಬಯಸದ ಸ್ವಭಾವ. ಇತರ ಕಷ್ಟ ಸುಖವನ್ನು ಆಲಿಸುವ ಮನಸಿದ್ದರೂ ಅದರತ್ತ ಗಮನ ಹರಿಸುತ್ತಿದ್ದುದು ಕಡಿಮೆ. ಮಗುವಿನ ಲಾಲನೆ ಪಾಲನೆಯ ಬಗ್ಗೆ ದಿನವೂ ಬಿರುಸಿನ ಮಾತುಕತೆಗಳು ನಡೆಯುತ್ತಲೇ ಇರುತ್ತಿತ್ತು ಮನೆಯಲ್ಲಿ. ಅತ್ತೆ-ಮಾವ, ಗಂಡನಿಂದ ಮಗುವಿಗೆ ಅಗತ್ಯಕ್ಕಿಂತ ಹೆಚ್ಚು ಒಲವು ತೋರಿಸ್ತಿಯಾ ಎನ್ನುವ ಕೊಂಕುನುಡಿಗಳು. ಮಗು ಮಾಡಿದ ಸಣ್ಣಪುಟ್ಟ ತಪ್ಪುಗಳಿಗೂ ನಿಂದನೆಗಳ ಸುರಿಮಳೆ ಇವಳ ಮೇಲೆ ಆಗುತ್ತಿತ್ತು. ಅವಳು ನನ್ನ ಭೇಟಿ ಮಾಡಿದ ಹಿಂದಿನ ರಾತ್ರಿ ಈ ವಿಷಯವಾಗಿಯೇ ಗಂಡ ಧ್ವನಿ ಏರಿಸಿ ಮಾತಾಡಿದ್ದ. ಆ ಸಮಯದಲ್ಲಿ ಆಕೆ ಬಾಯಿ ತಪ್ಪಿ ಮಾತಾಡಿದ್ದು ಹೆಚ್ಚಾಗಿತ್ತು. ಇದರಿಂದ ಮನೆ ಮಂದಿಯೆಲ್ಲರೂ ಇದ್ದಕ್ಕಿದಂತೆ ಇವಳೊಂದಿಗೆ ಮಾತನ್ನು ನಿಲ್ಲಿಸಿದ್ದರು... ಮೌನ ವೃತ ಎನ್ನುವ ರೀತಿಯಲ್ಲಿ.

ತಕ್ಷಣ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಲೇಬೇಕು
ಇಂತಹ ಪರಿಸ್ಥಿತಿ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲಾ ಒಂದು ರೀತಿ ಕಾಣಿಸಿಕೊಳ್ಳಬಲ್ಲದು. ಅದು ಕೋಪದ ವರ್ತನೆಗೂ ಕಾರಣವಾಗಬಲ್ಲದು ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಹುಮುಖ್ಯ. ಗೀತಾ ತನ್ನ ಸ್ವಭಾವವನ್ನು ಕೊಂಚ ಬದಲಾಯಿಸಿಕೊಳ್ಳುವುದರ ಮೂಲಕ ಸಮಸ್ಯೆ ಎದುರಿಸುವುದು ಸುಲಭ ಎನ್ನುವುದನ್ನು ತೋರಿಸಿಕೊಟ್ಟಿದ್ದು ಹೀಗೆ:
- ಮನೆಯ ಮಂದಿಯ ಮಾತುಗಳೆಲ್ಲವನ್ನು "ಉದ್ರೇಕ"ದ ಮನಸಿನ ಮೂಲಕ ಸ್ವೀಕರಿಸುವುದನ್ನು ಬದಲಾಯಿಸಿಕೊಳ್ಳುವುದು ಬಹುಮುಖ್ಯ.
-ಮಾತಿಗೆ ಪ್ರತಿ ಮಾತು ಅಥವಾ ತಕ್ಷಣದಲ್ಲಿ ಒಂದು ಸಿಟ್ಟಿನ ಕ್ರಿಯೆ ಹೊರಬರದಂತೆ ಮನಸ್ಸನ್ನು ಬೇರೆ ಕಡೆ ಹರಿಸುವುದು ಮುಖ್ಯ.
-ಹಾಗೆಯೇ ಕುಟುಂಬದ ಸದಸ್ಯರೆಲ್ಲರೂ ಒಂದಾಗಿ ತನ್ನನ್ನು ವಿರೋಧಿಸುತ್ತಿದ್ದಾರೆ ಎನ್ನುವಂತಹ ಭಾವನೆ ( ಅದು ನಿಜವಾಗಿಯೇ ಇದ್ದರೂ) ಆದಷ್ಟೂ ದೂರ ತಳ್ಳುವುದರತ್ತ ಗಮನ ಹರಿಸುವುದು.
-ಮಗುವಿನ ಬೆಳವಣಿಗೆಯ ವಿಷಯದಲ್ಲಿ ತನ್ನ ನಿಲುವುಗಳೇ ಸದಾ ಸರಿ ಎನ್ನುವ ಹಟ ಉಪಯುಕ್ತವಲ್ಲ.

ನಗುಮುಖದಿಂದಿರಲು ಪ್ರಯತ್ನಿಸಿ...
ಅತಿ ಸ್ವಾಭಿಮಾನದಿಂದ ಸಂಕಟಗಳ ಸರಣಿ ಗಟ್ಟಿಯಾಗುವುದೆನ್ನುವುದನ್ನು ಮರೆಯುವಂತಿಲ್ಲ. -ಇತರರ ಮಾತಿನಿಂದ ನೋವು ಉಂಟಾಗುವುದು ಎನ್ನುವುದು ಸ್ವಭಾವವೂ ಆಗಿರಬಹುದು, ಅದರ ಬಗ್ಗೆ ಎಚ್ಚರ ಇರುವುದು ಒಳ್ಳೆಯದು. ಎಲ್ಲಕ್ಕಿಂತಲೂ ಮುಖ್ಯವಾಗಿ ಸಮಸ್ಯೆಗಳನ್ನು ಎದುರಿಸುವ ಬಲ ತನ್ನಲ್ಲಿದೆ ಎನ್ನುವ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ಸಹ ಕೋಪದ ಹಿಡಿತವನ್ನು ಸಡಿಲಗೊಳ್ಳುವುಂತೆ ಮಾಡುವುದು. ಇದರೊಂದಿಗೆ ವ್ಯಾಯಾಮ, ಮನರಂಜನೆಯನ್ನು ದಿನನಿತ್ಯ ಅಭ್ಯಾಸವಾಗಿ ಮಾಡಿಕೊಳ್ಳುವುದರಿಂದ ಮನಸಿಗೆ ಉಲ್ಲಾಸದ ಅರ್ಥ ತಿಳಿಯುತ್ತದೆ. ನಗುಮುಖ ಭಾವ ತಪ್ಪದೇ, ಕೃತಕವಾದರೂ ಸರಿಯೇ, ತೋರ್ಪಡಿಸುವುದರಿಂದ ಹಿತಕರ ಪ್ರತಿಕ್ರಿಯೆ ನಿರೀಕ್ಷಿಸಬಹುದು.
ಈ ವಿಧದಲ್ಲಿ "ಪರಿಸ್ಥಿತಿ" ಎದುರಿಸುವ ರೀತಿ ತಿಳಿದುಕೊಳ್ಳುವುದರ ಮೂಲಕ ಕೋಪದಿಂದ ಆಗುವ ಅನಾಹುತ ಮತ್ತು ನಷ್ಟವನ್ನು ತಡೆಗಟ್ಟಬಹುದು.
-
Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications