ಭಯದ ಬೇರು ಯಾವುದು? ಇವರಿಗೇಕೆ ಅಷ್ಟೊಂದು ಭಯ?
ಭಯ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿರುವಂತಹ ಮನದ ಸ್ಥಿತಿ. ಎಲ್ಲರಿಗೂ ಈ ಮನದ ಸ್ಥಿತಿ ಹೇಗೋ ಏನೋ ಕಾಣಿಸಿಕೊಂಡಿರುತ್ತದೆ. ಹಸುಗೂಸಿನಿಂದ ಹಿಡಿದು ಮರಣದ ಹಾಸಿಗೆಯಲ್ಲಿರುವ ವೃದ್ಧನಿಗೂ ಇದು ಕಾಡಿಸುವಂತಹ ಒಂದು ಮನೋಸ್ಥಿತಿ.
ಹೀಗಾಗಿ ಇದು ಎಲ್ಲರಿಗೂ ಅನುಭವದ ಮೂಲಕವೇ ತಿಳಿದಿರುವುದರಿಂದ ಭಯ ಎಂದು ಹೇಳುವ ವ್ಯಕ್ತಿಯ ಮನದಲ್ಲಿ ಆಗುತ್ತಿರುವ ಸಂಕಟವೋ, ಗೊಂದಲವೋ ಕೇಳಿಸಿಕೊಳ್ಳುವ ವ್ಯಕ್ತಿಗೆ ತಿಳಿದು ಬಿಡುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಭಯ. ಕೆಲವರಿಗಂತೂ ವಿಧವಿಧವಾದ ಭಯಗಳು: ಪರೀಕ್ಷೆಯ ಸಮಯದಲ್ಲಿ ಪಾಸು/ಫೇಲಿನ ಭಯ; ನೂತನ ವಧುವರರಿಗೆ ದಾಂಪತ್ಯದ ಭಯ. ಪೋಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಭಯ. ಹಾಗೆಯೇ ಪೋಲಿಸರ ಭಯ, ಕಳ್ಳರ ಭಯ, ದೇವರ ಭಯ. ದೆವ್ವಗಳ ಭಯ, ಎಲ್ಲವೂ ಭಯಮಯವಾಗಿರುವಂತಹವರೂ ನಮ್ಮೊಡನೆ ಇರುತ್ತಾರೆ. ಅದೆಷ್ಟು ಮನೋರೋಗಗಳ ಲಕ್ಷಣಗಳಲ್ಲಿ ಭಯವೂ ಸೇರಿರುತ್ತದೆ. ಇದೆಲ್ಲದರ ಜೊತೆ ಪ್ರಾಣಿಗಳಲ್ಲಿಯೂ ಭಯವೆನ್ನುವ ಸ್ಥಿತಿ ಸಾಮಾನ್ಯ. ಹಾಗೇ ಹೇಳುವುದಾದರೇ ಆನೆಗೂ ಭಯ, ಆಮೆಗೂ ಭಯ ಬಿಟ್ಟಿದ್ದಿಲ್ಲ. ಮುಂದೆ ಓದಿ...

ಭಯದ ಬಗ್ಗೆ ಮನೋವಿಜ್ಞಾನಿಗಳ ವಿಶ್ಲೇಷಣೆ
ಇಷ್ಟೆಲ್ಲಾ ಹೇಳಿದ ಭಯವನ್ನು ಭಯದಿಂದಲೇ ನೋಡುವುದೂ ಇರಬಹುದು. ನಾನು ಹೇಳುತ್ತಿರುವುದು ತಪ್ಪಾಗಿ ಬಿಟ್ಟರೆ ಎನ್ನುವ ಭಯವೂ ಇರಬಲ್ಲದು. ಹೀಗಾಗಿ ಭಯಕ್ಕೆ ಮೂಲ ಯಾವುದು, ಕೊನೆ ಯಾವುದು ಎನ್ನುವುದನ್ನು ತಿಳಿಯಲು ಮನೋವಿಜ್ಞಾನಿಗಳು ನಡೆಸಿದ ಪ್ರಯೋಗ, ಪ್ರಯತ್ನಗಳು ಒಳ್ಳೆಯ ಫಲಿತಾಂಶವನ್ನೇ ನೀಡಿದೆ. ಇದರಿಂದ ಭಯವನ್ನು ನಿವಾರಿಸುವುದು, ಸುಧಾರಿಸುವುದು ಅಥವಾ ನಿರ್ಭಯದಿಂದ ಇರುವುದು ಹೇಗೆನ್ನುವುದನ್ನು ತಿಳಿಸುವುದು ಮನೋವಿಜ್ಞಾನಿಗಳಿಗೆ ಗೊತ್ತಿದೆ.

ಹುಟ್ಟಿನೊಂದಿಗೇ ಹುಟ್ಟುತ್ತದೆ ಭಯ
ಭಯ ಹುಟ್ಟುವುದು ಹುಟ್ಟಿನೊಂದಿಗೆ ಎನ್ನುವ ಮಾತಂತೂ ನಿಜವೇ. ಭಯದ ಮೂಲಕ ಯಾವುದೋ ಒಂದು ವಿಷಯ, ಸನ್ನಿವೇಶದ ಬಗ್ಗೆ ಅಸ್ಪಷ್ಟತೆ ಇದೆ ಎನ್ನುವುದು ತಿಳಿದುಬರುತ್ತದೆ. ಮುಖ್ಯವಾಗಿ ಭಯ ಎನ್ನುವ ಮನದ ಸ್ಥಿತಿಗೆ ಭಯವಿರದ ಇನ್ನೊಂದು ಮನದ ಸ್ಥಿತಿಯೂ ಕಾರಣ. ಭಯದ ನಿವಾರಣೆಗೆ ಎಚ್ಚರಿಗೆ, ತಿಳಿವಳಿಕೆ ಬೇಕು. ಇದು ಪಕ್ಷಿಯೊಂದರ ರೆಕ್ಕೆಪುಕ್ಕ ಇದ್ದಹಾಗೆ. ಭಯ ಹಾರಿಹೋಗುವುದಕ್ಕೆ ಇದು ಬೇಕೇಬೇಕು.

ಭಯ ನಿವಾರಣೆಗೆ ಬೃಹನ್ಮತಿ ಮನೋತಂತ್ರಗಳ ಅಭ್ಯಾಸ
ಭಯವನ್ನು ನಿವಾರಿಸುವ ಸುಲಭ ವಿಧಾನವೆಂದರೆ ಬೃಹನ್ಮತಿ ಮನೋತಂತ್ರಗಳನ್ನು ಅಭ್ಯಾಸ ಮಾಡಿಕೊಳ್ಳುವುದು. ಇದನ್ನೀಗ ಉದಾಹರಣೆಯೊಂದಿಗೆ ವಿವರಿಸುವೆ: ಮದುವೆಯಾಗಿ ಹತ್ತಾರು ವರ್ಷ ಕಳೆದಿದ್ದೂ ದಾಂಪತ್ಯದ ಹಿತವಿದ್ದರೂ ಮಗುವಾಗಲಿಲ್ಲವೆನ್ನುವ ಚಿಂತೆ ದಂಪತಿಗಳಿಬ್ಬರ ಸುಖ ಜೀವನದಲ್ಲಿ ಇಲ್ಲಸಲ್ಲದ ಆಲೋಚನೆಗಳನ್ನು ಹುಟ್ಟಿಸಿತು. ಇನ್ನು ಆಲೋಚನೆಗಳೆಂದರೆ ಸುಮ್ಮನೆಯೇ? ಒಂದು ಒಳ್ಳೆಯ ಆಲೋಚನೆ ಹುಟ್ಟಿದರೆ ಸಾಕು ಅದನ್ನು ಕೆಡಿಸುವ ಹತ್ತಾರು ಆಲೋಚನೆಗಳು ತಾ ಮುಂದೆ ನಾ ಮುಂದೆ ನುಗ್ಗಿ ಬರುತ್ತವೆ. ಈ ದಂಪತಿಗಳಿಗೆ ಆಗಿದ್ದೂ ಇದೇ. ಮೊದಲು ಅವರು ಮಾಡಿದ್ದೇನೆಂದರೆ ವೈದ್ಯರ ಸಲಹೆ, ತಪಾಸಣೆ, ಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದು. ಇವರ ಇಷ್ಟದಂತೆ ಅವುಗಳೇನು ತಕ್ಷಣದಲ್ಲಿ ಫಲ ನೀಡಲಿಲ್ಲ. ಈಗ ಶುರುವಾಯಿತು, ಒಬ್ಬರನ್ನೊಬ್ಬರು ನಿಂದಿಸುವುದು, ಅದರ ಜೊತೆ ವಾತ್ಯಲ್ಯದ ಕೊರತೆಯೂ ಜೊತೆಗೆ ತಗುಲಿಕೊಂಡಿತು. ಇಂದರಿಂದ ಹುಟ್ಟಿಕೊಂಡಿದ್ದು ಅರಸಿಕತೆ ಮತ್ತು ಸಂದೇಹದ ಮನದ ಸ್ಥಿತಿ. ಇವೆಲ್ಲಾ ಒಟ್ಟಾಗಿ ಸೇರಿಕೊಂಡು ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವ ಭಯ ಹೆಚ್ಚಾಯಿತು.

ಭಯವಿದೆ ಎನ್ನುವುದು ಬಯಲಾಗಲಿಲ್ಲ
ಭಯವಿದೆ ಎನ್ನುವುದನ್ನಂತೂ ಇಬ್ಬರು ಬಯಲು ಮಾಡಕೊಳ್ಳಲಿಲ್ಲ. ಒಂದೇ ಮಂಚದಲ್ಲಿರಬೇಕಾದವರು ಒಬ್ಬರಿಂದೊಬ್ಬರು ದೂರ ಸರಿದರು. ಮುಂದೇನು ಎನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಆದರೆ ಅವರಿಬ್ಬರಲ್ಲಿದ್ದ ಭಯವೇ ಈ ಬೇರೆ ಬೇರೆ ಮನೋಸ್ಥಿತಿಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡಿದ್ದು ಎನ್ನುವುದು ಅವರಿಗೂ ಸೇರಿದಂತೆ ಹಿತೈಷಿಗಳಿಗೂ ತಿಳಿಯದಂತಾದದ್ದು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications