ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ನೋಕಿಯಾ ಜೊತೆ ಕೈಲಾಶ್ ಸತ್ಯಾರ್ಥಿ ಟ್ರಸ್ಟ್
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಆರಂಭಿಸಿದ ಕೈಲಾಶ್ ಸತ್ಯಾರ್ಥಿ ಮಕ್ಕಳ ಪ್ರತಿಷ್ಠಾನ (ಕೆಎಸ್‍ಸಿಎಫ್) ಮತ್ತು ನೋಕಿಯಾ ಫೋನ್‍ಗಳ ಉತ್ಪಾದನಾ ಗೃಹವಾದ ಎಚ್‍ಎಂಡಿ ಗ್ಲೋಬಲ್ ಭಾರತದಲ್ಲಿ ಸೌಲಭ್ಯ ವಂಚಿತ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡಲು ಜತೆ ಸೇರಿವೆ. ಈ ಉಪಕ್ರಮದ ಭಾಗವಾಗಿ 1.65 ಕೋಟಿ ರೂಪಾಯಿ ಮೌಲ್ಯದ 1740ಕ್ಕೂ ಹೆಚ್ಚು ಹೊಸ ನೋಕಿಯಾ ಸ್ಮಾರ್ಟ್‍ಫೋನ್‍ಗಳನ್ನು ಎಲ್ಲ ಗ್ರಾಮೀಣ ಪ್ರದೇಶಗಳ, ನಗರ ಕೊಳಗೇರಿಗಳ, ಶೋಷಣೆಗೆ ಒಳಗಾದ ಮಕ್ಕಳ ಹಾಗೂ ಜೈಪುರದ ಬಂಜಾರಾ ಸಮುದಾಯದ ಮೊದಲ ಪೀಳಿಗೆಯ ಸೌಲಭ್ಯ ವಂಚಿತ ಮಕ್ಕಳಿಗೆ ವಿತರಿಸಲಾಗುತ್ತದೆ.
ಜೈಪುರ ಬಳಿ ಶೋಷಿತ ಮಕ್ಕಳಿಗಾಗಿ ಕೆಎಸ್‍ಸಿಎಫ್ ಸಹ ಸಂಸ್ಥೆಯಾದ ಬಾಲ ಆಶ್ರಮ ಟ್ರಸ್ಟ್ ನಡೆಸುತ್ತಿರುವ ಧೀರ್ಘಾವಧಿ ವಿಶ್ರಾಂತಿಗೃಹ ಬಾಲ ಆಶ್ರಮದ ನಿವಾಸಿಗಳಿಗೆ ಕೂಡಾ ಫೋನ್ ವಿತರಿಸಲಾಗುತ್ತದೆ. ಬಾಲ ಆಶ್ರಮದ ಬಳಿ ಇರುವ ಬಂಜಾರಾ ಸಮುದಾಯದ ಮೊದಲ ಪೀಳಿಗೆಯ ಸೌಲಭ್ಯ ವಂಚಿತ ಮಕ್ಕಳಿಗೆ ಕೂಡಾ ಫೋನ್ ವಿತರಿಸಲಾಗುತ್ತದೆ. ಈ ಸಮುದಾಯದ ಮಕ್ಕಳು ಪ್ರಸ್ತುತ ಅನೌಪಚಾರಿಕ ಶಿಕ್ಷಣವನ್ನು ಟ್ರಸ್ಟ್ ನಡೆಸುತ್ತಿರುವ 11 ಬಂಜಾರಾ ಶೈಕ್ಷಣಿಕ ಕೇಂದ್ರಗಳಲ್ಲಿ ನೀಡುತ್ತಿದೆ.
ಈ ಯೋಜನೆಗಳಿಗೆ ನೀಡುವ ದೇಣಿಗೆಯು ದೆಹಲಿ, ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್ ಹೀಗೆ ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 6000ಕ್ಕೂ ಅಧಿಕ ಮಕ್ಕಳಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಶಾಲೆಗಳನ್ನು ಮುಚ್ಚಿದ ಕಾರಣದಿಂದ ಈ ಮಕ್ಕಳ ಶಿಕ್ಷಣಕ್ಕೆ ಧಕ್ಕೆ ಉಂಟಾಗಿತ್ತು.

ಈ ಬಗ್ಗೆ ಮಾತನಾಡಿದ ಕೆಎಸ್‍ಸಿಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಸಿನ್ಹಾ, "ಲಾಕ್‍ಡೌನ್ ಕಾರಣದಿಂದ ಶಾಲೆಗಳನ್ನು ಮುಚ್ಚಿರುವುದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಬಡವರಿಗೆ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ಶಿಕ್ಷಣದ ಲಭ್ಯತೆಗೆ ಸಂಬಂಧಿಸಿದ ಸಮಸ್ಯೆಗಳು ಅತ್ಯಧಿಕ. ಸ್ಮಾರ್ಟ್‍ಫೋನ್‍ಗಳು ಲಭ್ಯ ಇಲ್ಲದ ಕಾರಣ ಈ ಮಕ್ಕಳ ಶಿಕ್ಷಣಕ್ಕೆ ಸಂಪೂರ್ಣ ಧಕ್ಕೆ ಉಂಟಾಗಿದ್ದು, ಅವರು ಆನ್‍ಲೈನ್ ಶಿಕ್ಷಣ ಪಡೆಯುವುದು ಸಾಧ್ಯವಾಗಿಲ್ಲ. ಮಾಡಲು ಏನೂ ಕೆಲಸವಿಲ್ಲದ ಈ ಮಕ್ಕಳ ಪೈಕಿ ಹಲವು ಮಂದಿ ಅಡ್ಡದಾರಿ ಹಿಡಿದಿದ್ದಾರೆ ಹಾಗೂ ಬಹಳಷ್ಟು ಮಂದಿ ಬಾಲಕಾರ್ಮಿಕರಾಗಿದ್ದಾರೆ. ಕೆಲ ಮಕ್ಕಳು ಕಳ್ಳಸಾಗಾಣಿಕೆಗೂ ಒಳಗಾಗಿದ್ದಾರೆ. ಆದ್ದರಿಂದ ಶಾಲೆ ಪುನರಾರಂಭವಾದರೂ ಬಹಳಷ್ಟು ಬಡ ಮಕ್ಕಳು ಮತ್ತೆ ಶಾಲೆಗೆ ಹೋಗುವ ಸಾಧ್ಯತೆ ಇಲ್ಲ. ಇಂಥ ಮಕ್ಕಳು ಸ್ಮಾರ್ಟ್‍ಫೋನ್‍ಗಳನ್ನು ಹೊಂದಿದ್ದರೆ, ಆನ್‍ಲೈನ್ ಶಿಕ್ಷಣವನ್ನು ಪಡೆಯಲು ಸಾಧ್ಯವಾಘುತ್ತದೆ ಹಾಗೂ ತಮ್ಮ ಶಾಲೆಗಳ ಜತೆ ಮತ್ತೆ ಜೋಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಫೋನ್‍ಗಳು ಇಂಥ ಮಕ್ಕಳಿಗೆ ಸಬಲೀಕರಣದ ಮೂಲವಾಗುವ ಸಾಧ್ಯತೆ ಇದೆ. ಶಿಕ್ಷಣದ ಉದ್ದೇಶಕ್ಕೆ ಸ್ಮಾರ್ಟ್‍ಫೋನ್ ಬಳಸಲು ಮಕ್ಕಳು ಒಗ್ಗಿಕೊಂಡರೆ ಅವರು ಶಾಲೆ ಆರಂಭದ ಬಳಿಕ ಕೂಡಾ ಇನ್ನಷ್ಟು ಹೆಚ್ಚಿನ ಕಲಿಕೆಗೆ ಇದನ್ನು ಬಳಸಿಕೊಳ್ಳುವುದನ್ನು ಮುಂದುವರಿಸುವ ಸಾಧ್ಯತೆ ಇದೆ" ಎಂದು ವಿವರಿಸಿದರು.
ಬಾಲಮಿತ್ರ ಗ್ರಾಮ (ಬಿಎಂಜಿ) ಮತ್ತು ಬಾಲ ಮಿತ್ರ ಮಂಡಲ (ಬಿಎಂಎಂ) ಬಗ್ಗೆ
ಬಾಲಮಿತ್ರ ಗ್ರಾಮ ಎನ್ನುವುದು ಗ್ರಾಮೀಣ ಪ್ರದೇಶಗಳ ಮಕ್ಕಳ ಸುರಕ್ಷತೆ ಮತ್ತು ಕಲ್ಯಾಣದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಸಂಕೀರ್ಣ ಮತ್ತು ಅಂತರ್ ಸಂಬಂಧಿ ಸಮಸ್ಯೆಗಳಿಗೆ ತಳಮಟ್ಟದ ವರ್ಗಾಂತರದ ಪರಿಹಾರವಾಗಿದೆ. ಈ ಯೋಜನೆಯನ್ನು ಮಕ್ಕಳ ಕೇಂದ್ರಿತ ಸಮುದಾಯ ಅಭಿವೃದ್ಧಿಯ ಮೂಲಕ ಮಕ್ಕಳ ಹಿತಾಸಕ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಇದು ಬಾಲ ಪಂಚಾಯತ್ (ಮಕ್ಕಳ ಮಂಡಳಿ) ಮೂಲಕ ಮಕ್ಕಳನ್ನು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಜಾಸತ್ತಾತ್ಮಕ ಕ್ರಮಗಳಿಗೆ ಮಕ್ಕಳನ್ನು ಸಶಕ್ತಗೊಳಿಸುತ್ತದೆ. ಇದರ ಜತೆಗೆ ಪೋಷಕರು ಮತ್ತು ಇತರ ಹಕ್ಕುದಾರರು, ಮಕ್ಕಳ ಹಕ್ಕುಗಳ ವಿಚಾರದಲ್ಲಿ ಎದ್ದುನಿಲ್ಲಲು ನೆರವಾಗುತ್ತಿದೆ. ಈ ಮೂಲಕ ಸಂರಕ್ಷಣಾತ್ಮಕ ಸಮುದಾಯವನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ. ಇದು ಶಾಲೆಗಳಲ್ಲಿ ಎಲ್ಲ ಮಕ್ಕಳ ನೋಂದಣಿಯನ್ನು ಖಾತರಿಪಡಿಸಯತ್ತದೆ ಹಾಗೂ ಅವರು ಸಮಾನ ಶಿಕ್ಷಣವನ್ನು ಪೆಯಲು ನೆರವಾಗುತ್ತದೆ. ಈ ಮೂಲಕ ಬಿಎಂಜಿ, ಮಕ್ಕಳ ಸುತ್ತ ಅವರನ್ನು ಎಲ್ಲ ದುರ್ಬಳಕೆ ಮತ್ತು ಶೋಷಣೆಯಿಂದ ತಡೆಯಲು ಸುರಕ್ಷಾ ಜಾಲವನ್ನು ಸೃಷ್ಟಿಸುತ್ತದೆ.
ಬಾಲಮಂಡಲ ಯೋಜನೆಯು ಬಿಎಂಜಿಯ ತತ್ವಗಳನ್ನು ನಗರ ಕೊಳಗೇರಿ ಸಮುದಾಯದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವಾಗಿದೆ.
ಬಾಲ ಆಶ್ರಮ ಟ್ರಸ್ಟ್ ಬಗ್ಗೆ
ಬಾಲ ಆಶ್ರಮವು ಬಾಲಕಾರ್ಮಿಕ, ಮಕ್ಕಳ ಕಳ್ಳಸಾಗಾಣಿಕೆ ಹಾಗೂ ಇತರ ಬಗೆಯ ಶೋಷಣೆಗಳ ಜಾಲದಿಂದ ರಕ್ಷಿಸಲ್ಪಟ್ಟ ಮಕ್ಕಳಿಗೆ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸುತ್ತದೆ. ಈ ಪೈಕಿ ಬಹುತೇಕ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ನೋಂದಣಿಯಾಗಿದ್ದು, ಇದೀಗ ಔಪಚಾರಿಕ ಶಿಕ್ಷಣ ಪಡೆಯುತ್ತಿದ್ದಾರೆ. ಬಾಲ ಆಶ್ರಮ ಟ್ರಸ್ಟ್ 11 ಬಂಜಾರಾ ಶಿಕ್ಷಣ ಕೇಂದ್ರಗಳನ್ನು ರಾಜಸ್ಥಾನದ ಅಲ್ವಾರ್ ಮತ್ತು ಜೈಪುರ ಜಿಲ್ಲೆಗಳಲ್ಲಿ ನಡೆಸಯತ್ತಿದ್ದು, 400ಕ್ಕೂ ಹೆಚ್ಚು ಮಕ್ಕಳು ಅನೌಪಚಾರಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಹಾಗೂ ಪೋಷಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ಮಕ್ಕಳು ಅಲೆಮಾರಿ ಬಂಜಾರಾ ಸಮುದಾಯಕ್ಕೆ ಸೇರಿದವರಾಗಿದ್ದು, ಮೊದಲ ಪೀಳಿಗೆಯ ಕಲಿಕಾರ್ಥಿಗಳಾಗಿದ್ದಾರೆ. ಬಂಜಾರ ಶಿಕ್ಷಣ ಕೇಂದ್ರಗಳು ಬಂಜಾರಾ ಸಮುದಾಯದ ಮಕ್ಕಳನ್ನು ಮುಖ್ಯವಾಹಿನಿ ಶಿಕ್ಷಣದ ಜತೆ ಸಂಪರ್ಕಿಸಲು ಸಜ್ಜುಗೊಳಿಸುತ್ತದೆ.
ಬಿಎಂಜಿ, ಬಿಬಿಎಂ ಮತ್ತು ಬಾಲ ಆಶ್ರಮ ಮಕ್ಕಳಿಗೆ ನೋಕಿಯಾ ಸ್ಮಾರ್ಟ್‍ಫೋನ್
ಬಿಎಂಜಿ, ಬಿಎಂಎಂ ಯೋಜನೆಗಳು ಜಾರಿಯಲ್ಲಿರುವ ಎಲ್ಲ ಗ್ರಾಮಗಳ ಮತ್ತು ನಗರ ಕೊಳಗೇರಿ ಸಮುದಾಯಗಳ ಬಾಲಪಂಚಾಯ್ತಿ ಸದಸ್ಯರಿಗೆ ಸೂಕ್ತವಾದ ಶಿಕ್ಷಣ ಆ್ಯಪ್‍ಗಳನ್ನು ಅಳವಡಿಸಿದ ನೋಕಿಯಾ ಸ್ಮಾರ್ಟ್‍ಫೋನ್‍ಗಳನ್ನು ಕೆಎಸ್‍ಸಿಎಫ್ ವಿತರಿಸುತ್ತದೆ. ಮಕ್ಕಳಿಗೆ ಪೋಷಕರ ಒಪ್ಪಿಗೆಯನ್ನು ಪಡೆದೇ ಫೋನ್‍ಗಳನ್ನು ವಿತರಿಸಲಾಗುತ್ತಿದ್ದು, ಈ ಫೋನ್‍ಗಳ ಮೂಲಕ ತಮ್ಮ ಸಮುದಾಯದ ಎಲ್ಲ ಮಕ್ಕಳು ಶಿಕ್ಷಣ ಸೌಲಭ್ಯವನ್ನು ಪಡೆಯಲಿದ್ದಾರೆ ಎನ್ನುವುದನ್ನು ಬಾಲಪಂಚಾಯ್ತಿ ಸದಸ್ಯರು ಖಾತರಿಪಡಿಸುತ್ತಾರೆ. ಕೆಎಸ್‍ಸಿಎಫ್, ಎಲ್ಲ ಮಕ್ಕಳಿಗೆ ಸ್ಮಾರ್ಟ್‍ಫೋನ್ ಬಳಕೆಯ ಹಾಗೂ ನಿರ್ವಹಣೆಯ ಬಗ್ಗೆ ತರಬೇತಿಯನ್ನು ನೀಡುತ್ತದೆ ಹಾಗೂ ಜವಾಬ್ದಾರಿಯುತವಾಗಿ ಹಾಗೂ ಸುರಕ್ಷಿತವಾಗಿ ಆನ್‍ಲೈನ್ ಅಂಶಗಳನ್ನು ಪಡೆಯಲು ನೆರವಾಗುತ್ತದೆ.
ಇದರ ಜತೆಗೆ ಕೆಎಸ್‍ಸಿಎಫ್, ಬಾಲಕ ಆಶ್ರಮ ಪುನರ್ವಸತಿ ಕೇಂದ್ರಗಳ ಮಕ್ಕಳಿಗೂ ನೋಕಿಯಾ ಸ್ಮಾರ್ಟ್‍ಫೋನ್‍ಗಳನ್ನು ನೀಡಲಿದ್ದು, ಬಂಜಾರಾ ಶಿಕ್ಷಣ ಕೇಂದ್ರಗಳಲ್ಲಿ ಓದಿದ ಮಕ್ಕಳಿಗೆ ಹಾಗೂ ಈಗಾಗಲೇ ಔಪಚಾರಿಕ ಶಿಕ್ಷಣದತ್ತು ಹೊರಳಿರುವ ಮಕ್ಕಳಿಗೆ ಈ ಸೌಲಭ್ಯ ಇರುತ್ತದೆ.












Click it and Unblock the Notifications