ಕುಶಲಕರ್ಮಿಗಳ ಸದ್ಬಳಕೆ ಭಾರತ ಮತ್ತು ಜಪಾನ್ ನಡುವೆ ಒಪ್ಪಂದ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, "ನಿರ್ದಿಷ್ಟ ಕುಶಲ ಕಾರ್ಮಿಕ"ರಿಗೆ ಸಂಬಂಧಿದಂತೆ ಸೂಕ್ತ ಕಾರ್ಯಾಚರಣೆ ವ್ಯವಸ್ಥೆಗಾಗಿ ಮೂಲಭೂತ ಚೌಕಟ್ಟು ಕುರಿತಂತೆ ಭಾರತ ಸರ್ಕಾರ ಮತ್ತು ಜಪಾನ್ ಸರ್ಕಾರದ ನಡುವೆ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಅಂದರೆ ಭಾರತದಲ್ಲಿ ವಿವಿಧ ಕ್ಷೇತ್ರಗಳ ನುರಿತ ಕಾರ್ಮಿಕರು ಜಪಾನ್ ದೇಶದಲ್ಲಿ ಹಾಗೂ ಅಲ್ಲಿನ ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.

ಪ್ರಸಕ್ತ ಸಹಕಾರ ಒಪ್ಪಂದವು ಅಗತ್ಯ ಕೌಶಲ್ಯ ಮತ್ತು ಜಪಾನ್ ಭಾಷಾ ಪರೀಕ್ಷೆಗೆ ಅರ್ಹತೆ ಪಡೆದ ನುರಿತ ಭಾರತೀಯ ಕಾರ್ಮಿಕರನ್ನು ಜಪಾನ್‌ನ ಹದಿನಾಲ್ಕು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕರ್ತವ್ಯ ನಿಯೋಜನೆ ಮತ್ತು ಅಂಗೀಕಾರಕ್ಕೆ ಭಾರತ ಮತ್ತು ಜಪಾನ್ ನಡುವಿನ ಸಹಭಾಗಿತ್ವ ಮತ್ತು ಸಹಕಾರಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ. ಈ ಭಾರತೀಯ ಕಾರ್ಮಿಕರಿಗೆ ಜಪಾನ್ ಸರ್ಕಾರವು "ನಿರ್ದಿಷ್ಟ ಪಡಿಸಿದ ನುರಿತ ಕೆಲಸಗಾರ"ರಿಗೆ ನಿವಾಸಿಯ ಹೊಸ ಸ್ಥಾನಮಾನವನ್ನು ನೀಡುತ್ತದೆ.

India and Japan on Partnership in Specified Skilled Worker

ಅನುಷ್ಠಾನದ ಕಾರ್ಯತಂತ್ರ:

ಈ ಸಹಕಾರ ಒಪ್ಪಂದದ ಅಡಿಯಲ್ಲಿ, ಈ ಎಂ.ಓ.ಸಿ.ಯ ಅನುಷ್ಠಾನ ಮತ್ತು ಅನುಸರಣೆಗಾಗಿ ಜಂಟಿ ಕಾರ್ಯ ಗುಂಪನ್ನು ಸ್ಥಾಪಿಸಲಾಗುತ್ತದೆ.

ಪ್ರಮುಖ ಪರಿಣಾಮ:

ಈ ಸಹಕಾರ ಒಪ್ಪಂದ (ಎಂ.ಓ.ಸಿ.) ಜನರೊಂದಿಗಿನ ಸಂಪರ್ಕವನ್ನು ಹೆಚ್ಚಿಸುತ್ತದೆ, ಭಾರತದಿಂದ ಜಪಾನ್‌ ಗೆ ಕಾರ್ಮಿಕರು ಮತ್ತು ನುರಿತ ವೃತ್ತಿಪರರ ಸಂಚಲನತೆ ಹೆಚ್ಚಿಸುತ್ತದೆ.

ಪ್ರಯೋಜನಗಳು:

ಜಪಾನ್ ನಲ್ಲಿ ಕೆಲಸ ಮಾಡಲು ನುರಿತ ಭಾರತೀಯ ಕೆಲಸಗಾರರಿಗೆ ಹದಿನಾಲ್ಕು ಕ್ಷೇತ್ರಗಳಲ್ಲಿ ಅಂದರೆ, ಶುಶ್ರೂಷೆ; ಕಟ್ಟಡ ಸ್ವಚ್ಛತೆ; ಸರಕು ಸಂಸ್ಕರಣ ಕೈಗಾರಿಕೆ; ಕೈಗಾರಿಕಾ ಯಂತ್ರೋಪಕರಣ ಉತ್ಪಾದನೆ ಕೈಗಾರಿಕೆ; ವಿದ್ಯುತ್ ಮತ್ತು ವಿದ್ಯುನ್ಮಾನ ಮಾಹಿತಿ ಸಂಬಂಧಿತ ಉದ್ದಿಮೆ; ನಿರ್ಮಾಣ; ಹಡಗು ನಿರ್ಮಾಣ ಮತ್ತು ಹಡಗು ಸಂಬಂಧಿತ ಕೈಗಾರಿಕೆ; ಮೀನುಗಾರಿಕೆ; ಆಹಾರ ಮತ್ತು ಪಾನೀಯ ಉತ್ಪಾದನೆ ಕೈಗಾರಿಕೆ ಮತ್ತು ಆಹಾರ ಸೇವಾ ಉದ್ದಿಮೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿರುತ್ತವೆ. (ಪ್ರಧಾನಿ ಸಚಿವಾಲಯ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+