15 ನೇ ಜೈಪುರ ಸಾಹಿತ್ಯೋತ್ಸವ: ರೂಪರ್ ಎವೆರೆಟ್, ಜಾರ್ಜಿಯೊ ಪ್ಯಾರಿಸಿ ಸಂವಾದ ವೀಕ್ಷಿಸಿ
ಜೈಪುರ, ಮಾರ್ಚ್ 5: ಜೈಪುರ ಸಾಹಿತ್ಯ ಉತ್ಸವದ 15 ನೇ ಆವೃತ್ತಿಯು 10-ದಿನದ ಈವೆಂಟ್‌ನ ಎರಡನೇ ದಿನದಂದು ಚಿಂತನಶೀಲ ಸಂಭಾಷಣೆಯಲ್ಲಿ ಆಸಕ್ತಿದಾಯಕ ವ್ಯಕ್ತಿಗಳು ಸಂವಾದವನ್ನು ನಡೆಸಲಿದ್ದಾರೆ. ಶನಿವಾರ, ಮಾರ್ಚ್ 5 ರಂದು ತನ್ನ ಹೊಚ್ಚಹೊಸ ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ಆರಂಭವಾಗಿದೆ.
ದಿನದ 2 ರ ಪ್ರಮುಖ ಆಕರ್ಷಣೆಗಳು: ಬೂಕರ್ ಪ್ರಶಸ್ತಿ ವಿಜೇತ ಪುಸ್ತಕ ದಿ ಪ್ರಾಮಿಸ್‌ನ ಬರಹಗಾರ, ದಕ್ಷಿಣ ಆಫ್ರಿಕಾದ ಕಾದಂಬರಿಕಾರ ಮತ್ತು ನಾಟಕಕಾರ ಡೇಮನ್ ಗಾಲ್ಗುಟ್ ಅವರು ಮಾಯಾ ಜಸಾನೋಫ್ ಅವರೊಂದಿಗೆ ಸಂಭಾಷಣೆ ನಡೆಸಲಿದ್ದಾರೆ. ಈ ಸಂಭಾಷಣೆಯಲ್ಲಿ ಬರವಣಿಗೆಯ ಶೈಲಿ, ಪ್ರಕ್ರಿಯೆ, ಸ್ಫೂರ್ತಿಗಳು ಮತ್ತು ಅವರ ಇತ್ತೀಚಿನ ಕೃತಿಯ ಸಾರವನ್ನು ಚರ್ಚಿಸಲಿದ್ದಾರೆ.

ಅನದರ್ ಕಂಟ್ರಿ, ಮೈ ಬೆಸ್ಟ್ ಫ್ರೆಂಡ್ಸ್ ವೆಡ್ಡಿಂಗ್ ಮತ್ತು ಆನ್ ಐಡಿಯಲ್ ಹಸ್ಬೆಂಡ್‌ನಂತಹ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾದ ಇಂಗ್ಲಿಷ್ ನಟ ರೂಪರ್ಟ್ ಎವೆರೆಟ್, ಶಾಂಘ್ವಿ ಅವರೊಂದಿಗೆ ಮಾತನಾಡಲಿದ್ದಾರೆ. ಖ್ಯಾತಿ, ಸ್ನೇಹ, ನಾಟಕ, ಗಾಸಿಪ್ ಮತ್ತು ಪ್ರೀತಿಯ ಸ್ವರೂಪದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಭಾರತೀಯ ನಟಿ, ಲೇಖಕಿ ಸೋನಾಲಿ ಬೇಂದ್ರೆ ಬೆಹ್ಲ್, ಮೇಘನಾ ಪಂತ್ ಅವರೊಂದಿಗೆ ಜೀವನದ ಏರುಪೇರುಗಳ ಮೂಲಕ ಪುಸ್ತಕಗಳ ಶಕ್ತಿಯ ಕುರಿತು ಚರ್ಚೆಯಲ್ಲಿ ತೊಡಗಲಿದ್ದಾರೆ. ಡಚ್ ತನಿಖಾ ಪತ್ರಕರ್ತ, ಬೆಟ್ಟೆ ಡ್ಯಾಮ್, ಇತಿಹಾಸಕಾರ, ಲೇಖಕ ಮತ್ತು ಫೆಸ್ಟಿವಲ್ ಸಹ-ನಿರ್ದೇಶಕ, ವಿಲಿಯಂ ಡಾಲ್ರಿಂಪಲ್ ಅವರೊಂದಿಗೆ ಸಂವಾದವನ್ನು ನಡೆಸುತ್ತಾರೆ. ಪ್ರವರ್ತಕ ಪತ್ರಕರ್ತರು ಮತ್ತು ಅಫ್ಘಾನಿಸ್ತಾನದ ಸುತ್ತಲಿನ ವಿದ್ಯಮಾನಗಳ ತುರ್ತು ಸ್ಥಿತಿಯ ಕುರಿತು ಚರ್ಚೆ ನಡೆಯಲಿದೆ. 2021 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದಿರುವ ಇಟಾಲಿಯನ್ ಭೌತಶಾಸ್ತ್ರಜ್ಞ ಜಾರ್ಜಿಯೊ ಪ್ಯಾರಿಸಿ ಅವರು ಪ್ರಿಯಂವದಾ ನಟರಾಜನ್ ಅವರೊಂದಿಗೆ ತಮ್ಮ ಸಂಶೋಧನೆ ಮತ್ತು ಪುಸ್ತಕದ ಬಗ್ಗೆ ಮಾತನಾಡಲಿದ್ದಾರೆ.

ದಿನ 1
ಸಾಹಿತ್ಸೋತ್ಸವದ ನಿರ್ಮಾಪಕ, ಸಂಜೋಯ್ ಕೆ ರಾಯ್ ಮತ್ತು ಸಾಹೀತ್ಸೋತ್ಸವದ ಸಹ ನಿರ್ದೇಶಕರಾದ ನಮಿತಾ ಗೋಖಲೆ ಮತ್ತು ವಿಲಿಯಂ ಡಾಲ್ರಿಂಪಲ್ ಅವರ ಉದ್ಘಾಟನಾ ಭಾಷಣದೊಂದಿಗೆ ವಾರ್ಷಿಕ ಕಾರ್ಯಕ್ರಮವು ಪ್ರಾರಂಭವಾಯಿತು. ರಾಯ್ ತಮ್ಮ ಭಾಷಣದಲ್ಲಿ, ಜನರು "ನಮ್ಮ ಇತಿಹಾಸ" ವನ್ನು ನೋಡುವ ಮೂಲಕ "ನಮ್ಮ ಗ್ರಹ" ದ ಭವಿಷ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು. "ನಾವು ನಮ್ಮ ಇತಿಹಾಸವನ್ನು ನೋಡಬೇಕು ಮತ್ತು ನಮ್ಮ ಗ್ರಹ ಮತ್ತು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸಲು ಸಾಧ್ಯವಾಗುತ್ತದೆ," ಎಂದು ಹೇಳಿದರು. ನಾವು ಆನ್‌ಲೈನ್ ಮತ್ತು ನಮ್ಮ ಡಿಜಿಟಲ್ ಸರಣಿ ಜೆಎಲ್‌ಎಫ್ ಬ್ರೇವ್ ನ್ಯೂ ವರ್ಲ್ಡ್ ಮೂಲಕ ಚರ್ಚೆ ನಡೆಸಲು ಸಾಧ್ಯವಾಯಿತು. 2021 ರ ಜೈಪುರ ಸಾಹಿತ್ಯ ಉತ್ಸವವು ಸಂಪೂರ್ಣವಾಗಿ ಡಿಜಿಟಲ್ ಆಗಿತ್ತು. ಪ್ರಪಂಚದಾದ್ಯಂತ 27.5 ಮಿಲಿಯನ್ ಜನರನ್ನು ತಲುಪಿತ್ತು. ಇಂದು ನೀವು ಜೈಪುರದಲ್ಲಿ ಭೌತಿಕವಾಗಿ ಇರಬೇಕಾಗಿಲ್ಲ, ನೀವು ಆನ್‌ಲೈನ್ ಮೂಲಕವು ಈ ಆಚರಣೆಯ ಭಾಗವಾಗಬಹುದು. ಮನೆಯಿಂದಲೇ ಹಾಜರಾಗಬಹುದು," ಎಂದು ರಾಯ್ ತಮ್ಮ ಸ್ವಾಗತ ಭಾಷಣದಲ್ಲಿ ಹೇಳಿದರು.
ಜೈಪುರ ಸಾಹಿತ್ಯೋತ್ಸವದ ಉತ್ಸವದ ಸಹ ನಿರ್ದೇಶಕಿ ನಮಿತಾ ಗೋಖಲೆ ಮಾತನಾಡಿ, "ನಮ್ಮ ಭೂಮಿಯ ಸುತ್ತಲೂ ಯುದ್ಧದ ವಾತಾವರಣವಾಗಿದೆ. ನಾವು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವಾಗಲೂ ಹಲವಾರು ಸಮಸ್ಯೆಯನ್ನು ಎದುರಿಸಬೇಕಾಗಿದೆ. ಈ ಎಲ್ಲದರ ಮೂಲಕ ಸಾಹಿತ್ಯದ ಸ್ಫೂರ್ತಿ , ಸಂಗೀತ ಮತ್ತು ಕವನಗಳನ್ನು ನಾವು ಉಳಿಸಿಕೊಳ್ಳುವುದನ್ನು ಮುಂದುವರೆಸಿದೆ. ಸಾಹಿತ್ಯೋತ್ಸವು ಹೃದಯ, ಮನಸ್ಸು ಮತ್ತು ಬುದ್ಧಿಶಕ್ತಿಯ ಆಚರಣೆಯಾಗಿದೆ. ಇದು ನಮ್ಮ ಸುತ್ತಲಿನ ಪ್ರಪಂಚದ ಕಾಳಜಿಗಳನ್ನು ಪ್ರತಿಬಿಂಬಿಸುತ್ತದೆ," ಎಂದು ಹೇಳಿದರು.
"ಜೈಪುರ ಸಾಹಿತ್ಯೋತ್ಸವವು ನಮ್ಮಲ್ಲಿ ಅನೇಕರಿಗೆ ಸಾಂತ್ವನವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲೂ ವಿಶೇಷವಾಗಿ ತಮ್ಮ ನೆಚ್ಚಿನ ಲೇಖಕರೊಂದಿಗಿನ ಲೈವ್ ಈವೆಂಟ್‌ಗಳ ಸಂತೋಷವನ್ನು ಕಳೆದುಕೊಂಡಿರುವ ಪುಸ್ತಕ-ಪ್ರೇಮಿಗಳಿಗೆ ಸಂತಸದ ವಿಚಾರ. ಪಂಚದ ಯಾವುದೇ ಸಾಹಿತ್ಯ ಉತ್ಸವದಲ್ಲಿ ಈ ರೀತಿಯ ಬರಹಗಾರರು ಇಲ್ಲ. ವರ್ಷದಿಂದ ವರ್ಷಕ್ಕೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಜೈಪುರದ ಕ್ಲಾರ್ಕ್ಸ್ ಹೋಟೆಲ್‌ನಲ್ಲಿ ನಾವು ನಿಮಗೆ ಈ ಸಾಹೀತ್ಯೋತ್ಸವವನ್ನು ನಡೆಸುವ ಭರವಸೆಯನ್ನು ನೀಡುತ್ತೇವೆ," ಎಂದು ಸಾಹಿತ್ಸೋತ್ಸವ ಸಹ ನಿರ್ದೇಶಕ ವಿಲಿಯಂ ಡಾಲ್ರಿಂಪಲ್ ತಿಳಿಸಿದ್ದಾರೆ.
ಉದ್ಘಾಟನಾ ಭಾಷಣವನ್ನು ಮುಕ್ತಾಯಗೊಳಿಸಿದ ಟೀಮ್‌ವರ್ಕ್ ಆರ್ಟ್ಸ್‌ನ ಅಧ್ಯಕ್ಷೆ ಪ್ರೀತಾ ಸಿಂಗ್, "ನಿಮ್ಮ ಮನೆಯ ಆರಾಮದಲ್ಲಿ ಕುಳಿತಿರುವ ಪ್ರತಿಯೊಬ್ಬರಿಗೂ ಅಲ್ಲಿ ಕುಳಿತು ಲೇಖಕರ ಸಂವಾದವನ್ನು ಆನಂದಿಸಲು ಎರಡನೇ 10 ದಿನಗಳ ವರ್ಚುವಲ್ ಉತ್ಸವವನ್ನು ಆಯೋಜಿಸಿದ್ದಕ್ಕಾಗಿ ನಾವು ಸಂಪೂರ್ಣವಾಗಿ ಸಂತೋಷಪಡುತ್ತೇವೆ. ಭಾರತದ ಉದ್ದಗಲಕ್ಕೂ ಈ ಸಂಭ್ರಮ ನಡೆಯಲಿದೆ," ಎಂದಿದ್ದಾರೆ.












Click it and Unblock the Notifications