ನಾವಿಕ ಸಮ್ಮೇಳನದಲ್ಲಿ ನಿರುಪಮಾ, ರಾಜೇಂದ್ರ ನರ್ತನ
ಬೋಸ್ಟನ್‌ನ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಮತ್ತು ಕನೆಕ್ಟಿಕಟ್‌ನ ಹೊಯ್ಸಳ ಕನ್ನಡ ಕೂಟದ ಸಹಯೋಗದಲ್ಲಿ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ಬೋಸ್ಟನ್‌ನಲ್ಲಿ ನಡೆಯಲಿರುವ 2ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಬಾರಿಗಿಂದ ಇನ್ನೂ ಉತ್ತಮವಾಗಿ ಮಾಡಬೇಕೆಂಬ ಹುಮ್ಮಸ್ಸಿನಿಂದ ಸಮರೋಪಾದಿಯಲ್ಲಿ ಸಿದ್ಧತೆಗಳು ನಡೆದಿವೆ.
ಇದರ ಜೊತೆಗೆ ಸಮ್ಮೇಳನಕ್ಕೆ ಬರಲಿರುವ ಗಣ್ಯರ ಪಟ್ಟಿಯೂ ಸಿದ್ಧವಾಗುತ್ತಿದೆ. ಹಲವಾರು ಸಾಹಿತಿಗಳು ಸಮ್ಮೇಳನಕ್ಕೆ ಮೆರುಗು ತರಲಿದ್ದರೆ, ನಟರು, ಕಲಾವಿದರು ಅಮೆರಿಕನ್ನಡಿಗರನ್ನು ರಂಜಿಸಲು ಕರ್ನಾಟಕದಿಂದ ಪಯಣ ಬೆಳಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ ಗಿರೀಶ್ ಕಾರ್ನಾಡ್ ಅವರು ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಲಿರುವುದು ಖಚಿತವಾಗಿದೆ.
ಕರ್ನಾಟಕದಿಂದ ಅಮೆರಿಕದ ಬೋಸ್ಟನ್ನಿಗೆ ಹಾರಲಿರುವ ಕಲಾವಿದರ ಪಟ್ಟಿ ದೊಡ್ಡದಾಗಿಯೇ ಇದೆ. ಇವರಲ್ಲಿ ನಟರಿದ್ದಾರೆ, ಸಂಗೀತಗಾರರಿದ್ದಾರೆ, ನೃತ್ಯಪಟುಗಳಿದ್ದಾರೆ, ಹಾಸ್ಯ ಕಲಾವಿದರಿದ್ದಾರೆ, ಅತಿಥಿ ಕಲಾವಿದರೂ ಹಲವರಿದ್ದಾರೆ. ಇವರಲ್ಲಿ ಅಮೆರಿಕನ್ನಡಿಗರು ಅತ್ಯುತ್ಸಾಹದಿಂದ ಕಾಯುತ್ತಿರುವ ಕಲಾವಿದರೆಂದರೆ ಬೆಂಗಳೂರಿನಲ್ಲಿ ಅಭಿನವ ಡಾನ್ಸ್ ಕಂಪನಿ ನಡೆಸುತ್ತಿರುವ ನಿರುಪಮಾ ಮತ್ತು ರಾಜೇಂದ್ರ ನೃತ್ಯಕಲಾವಿದರ ಜೋಡಿ.

ಇವರು ಅಭಿನವ ಡಾನ್ಸ್ ಕಂಪನಿಯನ್ನು ಸ್ಥಾಪಿಸಿದ್ದು 1994ರಲ್ಲಿ. ಕಂಪನಿಯ ಕಲಾ ನಿರ್ದೇಶಕರಾಗಿರುವ ಇವರು ನೃತ್ಯಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ, ಸಾವಿರಾರು ನೃತ್ಯ ಸಂಯೋಜನೆಯನ್ನೂ ಮಾಡಿ ವಿಶ್ವದಾದ್ಯಂತ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿ ಭೇಷ್ ಅನ್ನಿಸಿಕೊಂಡಿದ್ದಾರೆ. 5 ಉಪಖಂಡಗಳಲ್ಲಿ ಪ್ರದರ್ಶನ ನೀಡಿರುವ ಇವರಿಬ್ಬರ ನೃತ್ಯ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ನೃತ್ಯ ಪ್ರವೀಣ ರಾಜೇಂದ್ರ ಮತ್ತು ನೃತ್ಯ ಮಯೂರಿ ನಿರುಪಮಾ ಎಂಬ ಬಿರುದನ್ನು, ಆರ್ಯಭಟ ಅತ್ಯುತ್ತಮ ನೃತ್ಯಪಟು ಎಂಬ ಪ್ರಶಸ್ತಿ, ರಾಜ್ಯ ಸರಕಾರದಿಂದ ಕರ್ನಾಟಕ ಕಲಾಶ್ರೀ 2011 ಪ್ರಶಸ್ತಿ, ವಿದೇಶಗಳಲ್ಲಿಯೂ ಹಲವಾರು ಪ್ರಶಸ್ತಿ, ಬಿರುದು ಬಾವಲಿಗಳನ್ನು ಈ ನೃತ್ಯಜೋಡಿ ಪಡೆದುಕೊಂಡಿದೆ. ಇಂಥ ಪ್ರತಿಭಾವಂತರ ನೃತ್ಯ ನೋಡಲು ಅಮೆರಿಕನ್ನರು ಕಾತುರದಿಂದ ಕಾಯುತ್ತಿರುವುದು ಸುಳ್ಳಲ್ಲ.
ಈ ಕನ್ನಡ ಹಬ್ಬಕ್ಕೆ ನೋಂದಣಿ ಕೂಡ ಭರದಿಂದ ಸಾಗಿದೆ. ಸಮ್ಮೇಳನದಲ್ಲಿ ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ ಅವರಂಥ ಘಟಾನುಘಟಿಗಳು ಭಾಗವಹಿಸುತ್ತಿರುವುದರಿಂದ ನೋಂದಾವಣಿಗೂ ಭಾರೀ ಬೇಡಿಕೆ ಬಂದಿದೆ ಎನ್ನುತ್ತಾರೆ ಆಯೋಜಕರು. ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಕೂಡಲೆ ನೋಂದಣಿ ಮಾಡಿಕೊಂಡವರಿಗೆ ರಿಯಾಯಿತಿ ಕೂಡ ದೊರೆಯುತ್ತದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications