ಕವನ: ಅಕ್ಕ ಸಮ್ಮೇಳನದ ಹಿನ್ನೋಟ

ಕಂಡಿತು ಈ
ಸಲದ ಅಕ್ಕ!
ಅಮೆರಿಕಾದಲ್ಲಿ
ಕನ್ನಡಕ್ಕೆ ಮತ್ತಷ್ಟು
ರೆಕ್ಕೆ-ಪುಕ್ಕ !!
ಮೆರವಣಿಗೆಯಲ್ಲಿ
ಕಂಡಿದ್ದು ಕನಾ೯ಟಕದ
ಉಡುಗೆ-ತೊಡುಗೆ !
ಪ್ರೇಕ್ಷಕರ ರಂಜಿಸಿದ
ಕಾರ್ಯಕ್ರಮ
ಕರುನಾಡ ಕೊಡುಗೆ !!
ಕಂಡಿದ್ದು ಕನಾ೯ಟಕದ
ಉಡುಗೆ-ತೊಡುಗೆ !
ಪ್ರೇಕ್ಷಕರ ರಂಜಿಸಿದ
ಕಾರ್ಯಕ್ರಮ
ಕರುನಾಡ ಕೊಡುಗೆ !!
ಜಗ್ಗೇಶ್ ಆಡಿದ
ಮಾತಿಗೆ ಪ್ರೇಕ್ಷಕರು
ನಕ್ಕರು ಕಿಲಕಿಲಾ !
ಕೆಟ್ಟ ಜೋಕ್ ಮಾಡಿ
ಶಾಕ್ ಕೊಟ್ಟಿದ್ದು
ಸಾಧು ಕೋಕಿಲಾ !!
ದಸರಾ ಮೆರವಣಿಗೆಗೆ
ಬಂದಿದ್ದ ಅಮೆರಿಕಾದ
ಗಜರಾಜ !
ನಕ್ಕು ನಲಿಸಿದ
ನಾಟಕ ಅಮೆರಿಕಾದಲ್ಲಿ
ಯಮರಾಜ!!
ಸರ್ಕಾರ ಕಳಿಸುತ್ತೆ
ಕಲಾವಿದರನ್ನು
ಖಚು೯ಮಾಡಿ ಕಾಸು!
ಕೊನೆಗೂ ಸ್ಟೇಜ್
ಹತ್ತಲಿಲ್ಲಾ ನಮ್ಮ
ವನಿತಾವಾಸು !!
ಕನ್ನಡ ಬಾರದ
ಐಂದ್ರಿತಾ ನೋಡಿ
ಕನ್ನಡಿಗರಿಗೆ ಆಶ್ಚಯ೯ !
ಸಿಕ್ಕ ಚಾನ್ಸ್ ನಲ್ಲಿ
ಡಾನ್ಸ್ ಮಾಡಿದ್ದು
ರೇಣುಕಾಚಾಯ೯ !!
ಭಾಗ್ಯದ ಬಳೆಗಾರ
ಹಾಡಿಗೆ ಕುಣಿದ
ಚಿನ್ನಾರಿ ಮುತ್ತಾ!
ಸುಸ್ತಾದ ಶಾಸಕರ
ದಂಡು ಸುತ್ತುತಿತ್ತು
ಅತ್ತ-ಇತ್ತಾ!!
ಗುರುಕಿರಣ ಆಗಮನಕ್ಕೆ
ಪ್ರೇಕ್ಷಕ ಕಾದದ್ದು ಒಟ್ಟು
ಗಂಟೆಗಳು ಮೂರು !
ಮೂರು ನಿಮಿಷದ
ಗುರು ಹಾಡಿಗೆ ಕನ್ನಡಿಗ
ಬೋರೊ ಬೋರು !!
ಪುನೀತ್ ಸುಮಧುರವಾಗಿ
ಹಾಡಿದ ಹಾಡು
ನಿನ್ನಿಂದಲೇ... ನಿನ್ನಿಂದಲೇ..!
ಅಕ್ಕಾದ ಈ ಯಶಸ್ಸು
ಸ್ವಯ೦ಸೇವಕರೇ
ನಿಮ್ಮಿಂದಲೇ... ನಿಮ್ಮಿಂದಲೇ..!!











Click it and Unblock the Notifications