'ಅಕ್ಕ' ಬ್ರಾಂಡ್ ಅಂಬಾಸಡರ್ ಆಗಿ ಪುನೀತ್

Puneeth Rajkumar, brand ambassador for AKKA conference
ಬೆಂಗಳೂರು, ಅ. 14 : ಬರಲಿರುವ 6ನೇ "ಅಕ್ಕ" ವಿಶ್ವ ಸಮ್ಮೇಳನದ ಲಾಂಛನ ಅಂಕಿತ ರಾಯಭಾರಿ (ಬ್ರಾಂಡ್ ಅಂಬಾಸಡರ್) ಆಗಿ 'ಪವರ್ ಸ್ಟಾರ್' ನಟ ಪುನೀತ್ ರಾಜ್‌ಕುಮಾರ್ ಅವರು ಅಲಂಕೃತರಾಗಿದ್ದಾರೆ. ಅಕ್ಕ ಬಳಗ ನೀಡಿದ ಈ ವಿಶೇಷ ಆಹ್ವಾನವನ್ನು ಪುನೀತ್ ಸಂತೋಷದಿಂದ ಒಪ್ಪಿ ಸಹಮತ ವ್ಯಕ್ತಪಡಿಸಿದ್ದಾರೆ.

ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕಾದ ನ್ಯೂ ಜರ್ಸಿ ಪ್ರಾಂತ್ಯದಲ್ಲಿ ಜರುಗಲಿದೆ. ಸಮ್ಮೇಳನದ ಯೋಜನೆ ಮತ್ತು ವ್ಯವಸ್ಥೆಯನ್ನು ಸ್ಥಳೀಯ ಬೃಂದಾವನ ಕನ್ನಡ ಸಂಘ ವಹಿಸಿಕೊಂಡಿದೆ. ಅಮೆರಿಕಾದ ಪೂರ್ವ ಕರಾವಳಿಯಲ್ಲಿರುವ ಇತರ ಕನ್ನಡ ಸಂಘಗಳೂ ಈ ಮಹೋತ್ಸವವನ್ನು ಯಶಸ್ವಿಗೊಳಿಸಲು ಬೃಂದಾವನದ ಜತೆ ಕೈಜೋಡಿಸಿವೆ.

ಸಮ್ಮೇಳನಕ್ಕೆ ಹಲವಾರು ಗಣ್ಯರು ಈಗಾಗಲೇ ಶುಭ ಹಾರೈಸಿದ್ದಾರೆ. ಈ ಕೆಳಗಿನ ಲಿಂಕ್‌ಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮಂತ್ರಿಗಳಾದ ಅರವಿಂದ ಲಿಂಬಾವಳಿ, ಆರ್. ಅಶೋಕ್, ಎಸ್. ಎಮ್. ಕೃಷ್ಣ, ಚಿತ್ರನಟ ಗಣೇಶ್ ಹಾಗೂ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಯವರ ಸಂದೇಶಗಳನ್ನು ನೋಡಬಹುದು:

ಗಣ್ಯ ಶುಭಹಾರೈಕೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+