ಕನ್ನಡದಲ್ಲಿ ಬೇರೆ ಇನ್ಯಾರೂ ಪ್ರಬುದ್ಧ ಗಾಯಕರೇ ಇಲ್ವಾ?


ಕೆಲವೇ ವರ್ಷಗಳ ಹಿಂದೆ ಎಸ್ಪಿಬಿ ಅವರು ಕನ್ನಡದ ಕಾರ್ಯಕ್ರಮ ತಮಿಳಿನಲ್ಲಿ ನಡೆಸಿದ್ದು, ಕನ್ನಡ ಹಾಡುಗಳು ನೆನಪಿಲ್ಲ ಎಂದು ವಿವಾದ ಸೃಷ್ಟಿಸಿದ್ದು ನೆನಪಿರಬಹುದು. ಅದೇ ಎಸ್ಪಿ ಮೊನ್ನೆ ನಮ್ಮ ನುಡಿಹಬ್ಬದಲ್ಲಿ ಕನ್ನಡಾಭಿಮಾನಿಯಾದದ್ದು ನಿಜಕ್ಕೂ ಆಶ್ಚರ್ಯ!(ಮತ್ತು ಸ್ವಾಗತಾರ್ಹ). ಎಸ್ಪಿ ಮಹಾನ್‌ ಗಾಯಕರಷ್ಟೇ ಅಲ್ಲ... ಉತ್ತಮ ನಟರೂ ಕೂಡ.

ಎಸ್ಪಿ ಪದೇ ಪದೇ ತಮ್ಮ ಸಹಗಾಯಕ ಮಲ್ಲಿಕಾರ್ಜನನನ್ನು ಹೊಗಳಿ ಹೊಗಳಿ ಅವನನ್ನು ಕನ್ನಡದಲ್ಲಿ ಮುಂದೆ ತರಲು ಯತ್ನಿಸುತ್ತಿದ್ದುದು ಅಲ್ಲಿದ್ದ ಎಲ್ಲರಿಗೂ ನೆನಪಿರಬಹುದು. ಒಂದೆರಡು ಸಲ ಸರಿ, ಪದೇ ಪದೇ ಇವನನ್ನು ಪ್ರೋತ್ಸಾಹಿಸಿ, ಇವನನ್ನು ಆಶೀರ್ವದಿಸಿ, ಇವನನ್ನು ಬೆಳೆಸಿ ಎಂದು ಹೇಳುತ್ತಿದ್ದದ್ದು ಈ ಪತ್ರಕ್ಕೆ ಸ್ಫೂರ್ತಿ.

ಮಲ್ಲಿಕಾರ್ಜುನನ ಪ್ರತಿಭೆಯ ಬಗ್ಗೆ ಮಾತಾಡ್ತಿಲ್ಲ. ಆದರೆ, ನಮ್ಮ ಕನ್ನಡದ ನುಡಿ ಹಬ್ಬಕ್ಕೆ ಕನ್ನಡದ ಯಾವ ಗಾಯಕರೂ ಸಿಗಲಿಲ್ಲವೆ ? ಕನ್ನಡದಲ್ಲಿ ಎದೆ ತುಂಬಿ ಹಾಡುವವರು ಯಾರೂ ಇರಲಿಲ್ಲವೇ....

ಟಿವಿಎಸ್‌ ಸರಿಗಮ ಗೆದ್ದ ಅರ್ಚನ ಉಡುಪ ನೆನಪಿಗೆ ಬರಲಿಲ್ಲವೆ ? ಶುಕ್ರವಾರ ರಾತ್ರಿ ಕಾರ್ಯಕ್ರಮ ನಡೆಸಿದ ಮಧುಸೂದನ್‌, ಆರತಿ ಮೂರ್ತಿ ಇವರೆಲ್ಲಾ ನಮ್ಮ ಮನಸೆಳೆದಿದ್ದು ಸುಳ್ಳೇ? ಬಹುಶಃ ಆಗ ಸಮ್ಮೇಳನಕ್ಕೆ ಬಂದಿದ್ದ ಬದರಿ ಪ್ರಸಾದ್‌, ಪಲ್ಲವಿಗೆ ಕಣ್ಣು ಮಂಜಾಗಿ ಮನಸು ಮಬ್ಬಾಯ್ತೋ ಏನೋ ? ಬಿಡಿ ಅವರೇಕೆ, ನಮಗೆ ಹಿತ್ತಲ ಗಿಡ ಮದ್ದಲ್ಲ.

ಕಲೆಗೆ ಭಾಷೆ, ದೇಶ, ಕಾಲಗಳ ಹಂಗು ಇಲ್ಲ ನಿಜ. ಹಾಗೇ ಹಿಂಜರಿಕೆಯೂ ಬೇಡ. ನಮ್ಮ ಕನ್ನಡದ ಕಲಾವಿದರನ್ನೂ ಹೆಮ್ಮೆಯಿಂದ ಬೆಂಬಲಿಸೋಣ, ಬೆಳೆಸೋಣ... ಪ್ಲೀಸ್‌, ನಮ್ಮ ಕನ್ನಡದ ಹಬ್ಬದಲ್ಲಾದರೂ . ಸೌಹಾರ್ದತೆಯೂ ಇರಲಿ... ಸ್ವಾಭಿಮಾನವೂ ಇರಲಿ.

ಈ ಪತ್ರದ ಅಭಿಪ್ರಾಯಕ್ಕೆ ನಿಮ್ಮ ಸಮ್ಮತಿ ಇದೆಯಾ?

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ಪೂರ್ವ ಸಿದ್ಧತೆ Be a patronate! Use .in e-mail Post Your Views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+