ಪಶುಗಳ ಪಶುತ್ವ

ಮನುಷ್ಯತ್ವ ಮರೆತವರ ಮೇಲೆ ಮುನಿಸಿಕೊಂಡ ಸೃಷ್ಟಿಕರ್ತ
ಭೂಲೋಕದ ಅಧಿಕಾರವ ಪಶುಗಳಿಗೊಪ್ಪಿಸಿದ
ಮತ್ತು ಬೆತ್ಲೇಹೇಮಿನ ಹಟ್ಟಿಯ ದಿನಗಳಿಂದ
ತನಗಾಪ್ತರೆನಿಸಿದ್ದ ಗೋವುಗಳೇ ಶ್ರೇಷ್ಠರೆಂದ
ಆದರೂ ಅವು ತ್ಯಜಿಸದಾದವು ತಮ್ಮ ಪಶುತ್ವವ
ಪಶುಗಳು ಮನುಷ್ಯರೊಡನೆ ಸೇಡು ತೀರಿಸುವುದಾದಲ್ಲಿ
ನೈಲಾನ್ ಮೂಗುದಾರ ಬಿಗಿದು ಕಟ್ಟಿ ಹಾಕಬಹುದಿತ್ತು
ಕೆಲವರ ಮರಗಳಿಗೆ, ಕೆಲವರ ಗೂಟಕ್ಕೆ
ಕೆಲವರ ದೊಡ್ಡಿಯಲಿ, ಕೆಲವರನು ತೋಟದಲಿ
ಆದರೆ ಹಾಗೆ ಮಾಡದಾದವು ತಮ್ಮ ಪಶುತ್ವಕ್ಕಾಗಿ
ಮನುಷ್ಯ ಹೆಗಲಿಗೆ ನೇಗಿಲೇರಿಸಬಹುದಿತ್ತು
ಹೊಲವನು ಉಳಲು, ಮೋಜು-ಕಂಬಳಕ್ಕಾಗಿ
ಮುಗ್ದ ಕಂದಮ್ಮಗಳ ವಂಚಿಸಬಹುದಿತ್ತು
ತಂತಮ್ಮ ತಾಯಿಯಂದಿರ ಎದೆಹಾಲಿನಿಂದ
ಆದರೆ ಹಾಗೆ ಮಾಡದಾದವು ತಮ್ಮ ಪಶುತ್ವಕ್ಕಾಗಿ
ಕಾಸಿಗೆ ಬಾರದವರ ಕಸಾಯಿಖಾನೆಗೆ ಕಳಿಸಿ
ಚರ್ಮ ಸುಲಿದು ಬಟ್ಟೆ ಹೊಲಿಸಬಹುದಿತ್ತು
ನವಿರಾದ ಚೀಲ, ಪಾದರಕ್ಷೆ ಮಾಡಬಹುದಿತ್ತು
ಮಾಂಸ-ರಕ್ತದ ರುಚಿಯುಣ್ಣಬಹುದಿತ್ತು
ಆದರೆ ಹಾಗೆ ಮಾಡದಾದವು ತಮ್ಮ ಪಶುತ್ವಕ್ಕಾಗಿ
ಕುಟುಂಬ ಸದಸ್ಯರ ಬೇರ್ಪಡಿಸಬಹುದಿತ್ತು
ಚಳಿಯಲಿ ಬತ್ತಲೆ ನಡುಗಬಿಡಬಹುದಿತ್ತು
ಪಾದದಡಿ ಕಬ್ಬಿಣದ ಲಾಳವನು ಜಡಿದು
ರಸ್ತೆಯಲಿ ಗಾಡಿ ಎಳೆಸಬಹುದಿತ್ತು
ಆದರೆ ಹಾಗೆ ಮಾಡದಾದವು ತಮ್ಮ ಪಶುತ್ವಕ್ಕಾಗಿ
ಪಶುಗಳು ಮನುಷ್ಯರ ಗೋಳಿಸಲೇ ಇಲ್ಲ
ಇದನು ಕಂಡ ಸೃಷ್ಟಿಕರ್ತ ತುಸು ಆಶ್ಚರ್ಯಗೊಂಡ
ಪಶುತ್ವ ಕಾಪಾಡಿಕೊಂಡ ಪ್ರೀತಿಯ ಪ್ರಾಣಿಗಳ
ಬೆನ್ನು ತಟ್ಟಿ ನೇವರಿಸಿದ, ಪ್ರಸನ್ನನಾಗಿ
ಶಹಬ್ಬಾಸ್! ಪಶುಗಳೇ ನೀವೇ ಧನ್ಯರೆಂದ!
(ಕೊಂಕಣಿ ಮೂಲದ ಸ್ವ-ಅನುವಾದ, "ಲ್ಹಾರಾಂ ಲಜೆಲಿಂ" ಕವಿತಾ ಪಬ್ಲಿಕೇಶನ್ಸ್ ಮಂಗಳೂರು ಇವರಿಂದ ಪ್ರಕಾಶಿತ ರಾಬರ್ಟ್ ಫೆರ್ನಾಂಡಿಸ್ ಉದ್ಯಾವರ ಇವರ ಪ್ರಥಮ ಕವನ ಸಂಗ್ರಹದಿಂದ)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications