ಮಗಳ ಹಿತಕಾಯುವ ಏಡ್ಸ್ ಹಾಡು

ತೂರಾಡೋ ಗೆಣಯರು ಕಣ್‌ಅರಳ್ಸಿ ನಿನ್ ಚೆಂದಾನ ನೋಡ್ತಿದ್ದ್ರೆ
ನೀರ್‌ತರಿಸಿ ನಿನಗೆ ವೈಯಾರದಿ ಪೆಗ್‌ಕೊಡ್ಸಿ ಅವರಿಗೆ
ಬರ್ರನ್ ಬೈ ಹೇಳಿ ರಿಕ್ಷಾನ ಹತ್ತೋ ಅಷ್ಟು ಅರಿವುಳಿದಿರಲಿ ||
ಅಲ್ಲಿದ್ದ್ರೆ ಅವರ್‌ಜೊತೆ ಪಂಜಾಬಿ ರಾಗಕ್ಕೆ ಮೈನೆಲ್ಲ ಅಲ್ಲಾಡ್ಸಿ
ಅಲ್ಲಿ ಇಲ್ಲಿ ತಗಲಾಡಿದ್ ಕಾವಲ್ಲಿ ಅರ್‌ಸ್ಟಾರ್ ಬೋರ್‌ಡಿನ್
ಗಲ್ಲಿಮಾಳವ ಸೇರಿ ಮುಗ್ಗಿಲ್ ಹಾಸ್ಗೇಲ್ ಎಲ್ಲಾನ್ ಮರೆತ್ಬಿಟ್ಟು
ಚೆಲ್ಲಾಟ್‌ವಾಡಿ ಏಡ್ಸ್‌ಮಾರಿನ್ ಮೈಮೇಲ್ ಏರ್‍ಸ್‌ಕೊಂಡೀಯೇ ಜೋಕೆ ||
ಮುಂಜಾವಲೆದ್ದು ಕಾಫೀಗು ಕಾಯ್ದೆ ಅವನ್ ಮಾಯ್‌ವಾಗಿದ್ ನೋಡೀ
ಸಂಜೇಲ್ ನಡ್ದ ಮುದ್ದಿನ್ ನಾಟ್ಕದ್ ಕುರುಹನಲ್ಲೂ ಇಲ್ಲು ಕಂಡೂ
ನಂಜೇರಿದ್ ನಾಗರದ್ ಕೋಪ್ದಾಗೆ ಉರಿನ್ ಬಾರ್‌ನೆಲ್ಲ ಬೈದು
ಹಿಂಜರಿದಿದ್ ಹಿಂದಿನ್ ನೇಂಟಾನ್ ಸರ್ರನ್ ಕಟ್ಕೊಂಡೀಯೆ ಜೊಕೆ ||
ಹನಿ ಮೂನ್ ಯಾತ್ರೇಲಿ ಕೂಡಿದ್ ಇನಿಯನ್ ಸಂಗವೇ ಸಾಕೆನ್ಸಿ
ಕೊನೆವರ್ಗೆ ಸಂಸಾರದಲ್ಲಿ ಕುಷಿಯಾಗ್ ಬಾಳೋ ಬಯಕೆಲೇರೋ
ಮನದಲ್ ಉತ್ತಿದ್ ನೆನಪಿನ್ ಭೂತದ್ ಭೀತೀ ಬಿಡಿಸೋಕೆ
ಬೇನೆಯ ನೆವ್ದಲ್ಲಿ ವೈದ್ಯಾನ ನೊಡ್‌ದಾಗ್ ಕಾಣ್‌ಬೌದು ಮಾರಿ ||
ನಿನ್‌ಗು ಜೊತೆಗಿದ್ದವನ್‌ಗು ಮುಂಬರೋ ಕೂಸ್ಗೂ ಮಾರೀ ಸೊಂಕಾಯ್ತು
ಏನ್‌ಶಾಪಾನೂ ಬಿಡ್‌ಸೋರ್ ನೀರ್‍ಮೇಲೆ ನಡ್‌ಸೋರ್ ಇರ್‌ಬೌದು
ಮನೆಹಾಳ್ ಏಡ್ಸ್‌ಮಾರಿ ತಂಪನ್ ಮಾಡೋ ಮಂತ್ರ ಕಲ್ತೋರಿಲ್ವಂತೆ
ನಿನ್ ತಪ್ಪಿಲ್ಲದ್ ತಬ್ಬ್‌ಲೀನ ಸಾಕೋ ಕುನ್ನಿನೂ ಕಂಡೋರಿಲ್ವಂತೆ ||
ಜೊಳ್ಳನ್ ಬುದ್ಧಿಯ ಬಾರಿನ್ ಭಕ್ತರ್‌ಕೂಡೆ ಕಳ್ಳಾಟಾನ್‌ಆಡಿ
ಸುಳ್ಳೇಳ್ ಎದ್‌ಬಂದು ಓದ್‌ಬರ್‌ದೂ ಏಡ್ಸ್‌ಮಾರಿ ಅಡಗಿಸೊ
ಒಳ್ಳೇ ತಂತ್ರವ ಕಂಡ್ ಹಿಡಿದು ನೊಬೆಲ್ ಪದಕಗಳ್ ಗಳ್ಸೊ
ಹಳ್ಳಕ್ಕೆ ಬಿದ್ದೋರ್‌ನ ಮೇಲೆತ್ತೋ ನಾಡಿನ್ ನೆಲ್ಮೆಯ ಮಗಳಾಗು ||
{ದ್ವಿತಿಯಾಕ್ಷರ ಪ್ರಾಸ, ಕೃತಿ ವೃತ್ತ (ಪ್ರತಿ ಪಾದದಲ್ಲು 20 ಅಕ್ಷರಗಳು)}












Click it and Unblock the Notifications