ಕವನ : ಕತ್ತಲೆಯ ಕೋಣೆಯಲಿ ದೇವರಿಲ್ಲ
ಸುಕುಮಾರ್ ಎಸ್. ರಘುರಾಂ ; ಉತ್ತರಕ್ಯಾಲಿಫೋರ್ನಿಯ
ಗಂಟೆ ಜಾಗಟೆ ತಮಟೆ ವಾದ್ಯಗಳ ದನಿಯಿಲ್ಲ
ಬರಿ ಮೌನ, ಬರಿ ಧ್ಯಾನ
ಭಕುತರ ಮನಗಳಲಿ ಹಳೆಯದೇ ಬೇಡಿಕೆ
ಮತ್ತದೇ ಪ್ರಾರ್ಥನೆ
ಹೋಮಕುಂಡದ ಒಳಗೆ ಎಳ್ಳುದೀಪ
ತೀರ್ಥಕ್ಕೆ ತುಳಸಿ ಎಲೆ
ಆರತಿಗೆ ಕರ್ಪೂರ
ಮುಂಜಾನೆ ಮುತ್ತೈದೆ
ಸಂಜೆ ಹುಡುಗರ ದಂಡು
ದಿನವೆಲ್ಲ ಜನಜಾತ್ರೆ
ಕುರುಡು ಯಾತ್ರೆ
ಬಿಳಿ ಹೊದ್ದ ಅರ್ಚಕರ
ಮುಖದಲ್ಲಿ ಅದೇ ನಗುವು
ಕಾಲ್ಮುಟ್ಟಿ, ಕೈ ಹಿಡಿದು
ಮೌನದಲೆ ಮಾತಾಡಿ
ಮನೆಗೆ ಹೊರಳುವ ಮುನ್ನ
ಒಮ್ಮೆ ನೋಡುವ ಬಯಕೆ
ತಡೆಯಲಾಗದು ಮನಕೆ
ಗರ್ಭಗುಡಿ ಒಳಹೊಕ್ಕು
ಎಲ್ಲೆಲ್ಲಿ ಹುಡುಕಿದರು
ಕತ್ತಲೆಯ ಕೋಣೆಯಲಿ
ದೇವರಿಲ್ಲ












Click it and Unblock the Notifications