ಐದು ಮಿನಿ ಹನಿಗಳು : ನಗೋರಿಗೆ ಮಾತ್ರ!

Five Short Poems by Shruti Keertiಬೇಡಿಕೆ
ವಜ್ರದುಂಗುರ ಕೇಳಿದ್ದ ಅಳಿಯ
ಹೇಳಿದ ಮಾವನಿಗೆ -‘ಕಾಣುತ್ತಿಲ್ಲವೆ ಖಾಲಿ ಬೆರಳು?’
ಮಾವ ಹೇಳಿದರು ನನಗೀಗ ವಯಸ್ಸು ಅರುವತ್ತು
ಎಲ್ಲವು ಅರಳು ಮರಳು!

***

ನೌಕರಾನಿ

ಗೆಳತಿ ಹೇಳಿದಳು ಅಮೆರಿಕದಲ್ಲಿ ಇದ್ದೀಯ
ನೀನೇ ಮನೆಗೆ ರಾಣಿ
ನಾನೆಂದೆ ಮನೆಗೆಲಸ ಎಲ್ಲಾ ನನ್ನದೆ
ನಾನಿಲ್ಲಿ ನೌಕರಾನಿ

***

ಮೌನ-ಗಾನ

ಮದುವೆಯ ಮೊದಲು ಹುಡುಗನೆಂದ
ಹುಡುಗಿಗೆ; ‘ನಿನ್ನ ಮಾತೆ ಮಜುಳ ಗಾನ’
ಮದುವೆ ನಂತರ ಹುಡುಗನೆಂದ;
‘ನನಗಿಷ್ಟ ನಿನ್ನ ಮೌನ’

***

ನಾಪತ್ತೆ

ಹಬ್ಬಕ್ಕೆ ಆಗಬೇಕು ಒಬ್ಬಟ್ಟಿನ ಅಡಿಗೆ
ಎಂದರು ಅತ್ತೆ
ಅದನ್ನು ಕೇಳಿದ ಕೂಡಲೆ
ಸೊಸೆ ಅಡಿಗೆ ಮನೆಯಿಂದ ನಾಪತ್ತೆ!

***

ತೊಲಾಭಾರ

ಬೀಗರೆಂದರು ವರನಿಗೆ ಕೊಡಲೇಬೇಕು
ಬಂಗಾರದ ಸರ, ಉಂಗುರ
ವಧು ಹೇಳಿದಳು ಹಾಗಾದರೆ ಕೊಡಿಸಿ ನಮ್ಮಪ್ಪನಿಗೆ
ಹತ್ತು ತೊಲ ಬಂಗಾರ!

(ಒಂದು ಮಾತು : ಇವು ಚಿಕಾಗೊದಲ್ಲಿ ನಡೆದ ಎರಡು ದಿನಗಳ ವಸಂತ ಸಾಹಿತ್ಯೋತ್ಸವದಲ್ಲಿ ವಾಚಿಸಿದ ಪದ್ಯಗಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+