ಯಮನೂ, ಪಕ್ಕದ್ಮನೆಯವ್ರೂ, ನಾನು ಮತ್ತು ನನ್ನ ಹೆಂಡ್ತಿ


ಯಮನೂ, ಪಕ್ಕದ್ಮನೆಯವ್ರೂ, ನಾನು ಮತ್ತು ನನ್ನ ಹೆಂಡ್ತಿ
Anjaneya, Virginia
ನೀ ಕೊಡುತ್ತಿದ್ದರೆ ಮುತ್ತು,
ಹೋಗುವುದು ತಿಳಿಯದೆ ಹೊತ್ತು,
ಗೊತ್ತಾಗದು ಆ ಯಮನು -
ಹಿಸುಕುತ್ತಿದ್ದರು ಕತ್ತು
ಪಾಪ, ಅವನಿಗೇನು ಗೊತ್ತು
ಅದರೊಳಿರುವ ಮತ್ತು,
ಮತ್ತು ಗಮ್ಮತ್ತು.

ಗುಲಾಬಿ ಮೊಗ್ಗಿನಂತೆ ನಿನ್ನ ಅಧರ,
ಇರುವುದು ನಿನಗೂ ಎರಡು ಪದರ
ಎಂದೊಡನೆ ನಿನಗೆಷ್ಟೊ ಸದರ,
ಸಾಕೆನ್ನುವೆ ಜಾಗ ಒಂದು ಚದರ
ಮದುವೆ ನಂತರ ಲೈಫ್‌ ಅದರ-ಬದರ.

ನನಗೇನೊ ನಿನ್ನ ಮೇಲೆ ಪ್ರೀತಿ ಹೆಚ್ಚು,
ಆ ಯಮನಿಗಿರುವಂತೆ ಪ್ರಾಣಗಳ ಮೇಲೆ ಹುಚ್ಚು,
ಆ ಕೋಣನಂತು ನಮ್ಮ ಕಂಡು ಪೆಚ್ಚು.
ಪಕ್ಕದ್ಮನೆಯವ್ರನ್ನ ಕಂಡು ಬಂದುದಲ್ಲ ಈ ಕೆಚ್ಚು
ನೀನಂದೆಯಲ್ಲ ನಾನೆಂದರೆ ಅಚ್ಚು-ಮೆಚ್ಚು !

ನಂಗೊತ್ತು ಇರುವುದು ಸುಂದರ ಜೀವನ
ನಿನ್ನ ಮೇಲೆ ಬರೆಯುತ್ತಿದ್ದರೆ ಕವನ,
ಆದರೇನಂತೆ-ಇದು ಮೂರು ದಿನದ ಯೌವನ,
ನಟಿಸಿದರೇನಂತೆ ರಮ್ಯ-ನಮ್ಮೀ ಭಾವನ,
ಈ ಮನೋಕಾಮನ ನವ-ಸೃಷ್ಟಿಯಲಿ ಪಾವನ.


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+