ಮುಗಿಲ ಹಕ್ಕಿ
- ವಸಂತ ಕುಲಕರ್ಣಿ, ಸಿಂಗಪುರ
[email protected]
ಕಲ್ಪನೆಗಳ ನೊಗವ ಕಟ್ಟಿ
ವಿಹಾರ ಮಾಡ ಹೊರಟೆ ನಾ ಭಾವಲೋಕದೆಡೆಗೆ
ಪುಷ್ಪಜಗವ ಸುತ್ತಲೆಂದು
ಭೃಂಗರಾಜ್ಯ ನೋಡಲೆಂದು
ಭಾವನೆಗಳ ದೋಣಿಯಲ್ಲಿ ನಡೆದೆ ಕನಸಲೋಕದೆಡೆಗೆ
ಹಚ್ಚಹಸಿರ ಭವ್ಯ ಜಗವ
ಸದಾನಗುವ ದಿವ್ಯ ಜನರ
ಹುಡುಕಲೆಂದು ಸಾಗಿದೆ ನಾ ಕವನಲೋಕದೆಡೆಗೆ
ಸಂಜೆ ರವಿಯ ರಥವನೇರಿ
ಬೆಳ್ಳಿ ಹಕ್ಕಿ ದಿಕ್ಕನರಸಿ
ಬೆಳದಿಂಗಳ ತಂಪನರಸಿ ಚಲಿಸಿದೆ ಒಲವಲೋಕದೆಡೆಗೆ
ಚಲುವ ಚಂದ್ರನ ನಗೆಯ ನೋಡಿ
ಭುವಿಯ ಬದುಕಿನರ್ಥ ಮೀರಿ
ಒಂದಾಗಿಸೊ ದಿಗಂತ ಸೇರಿ ಸಾಗಿದೆ ಅನುಭಾವದೆಡೆಗೆ











Click it and Unblock the Notifications