‘ನೀನಿಂತು ಬಾ’
| ‘ನೀನಿಂತು ಬಾ’ | |
![]() |
ಬೀಸುವ ತಂಗಾಳಿ ತೆರದಲಿ ಬಾ ಕಾರ್ಮೋಡ ಕವಿದ ಈ ಮುಗಿಲಲ್ಲಿ ಬೆಳ್ಳಿ ಕೋಲ್ಮಿಂಚಿನಂದದಿ ಬಾ ವ್ಯಕ್ತವಾಗದ ಮೂಕ ಭಾವನೆಗೆ ಜೀವವ ನೀಡುವ ಹಾಡಾಗಿ ಬಾ ಅಣುಅಣುವಾಗಿ ಸಾಯುತಲಿರುವಗೆ ಬದುಕುವ ಹಂಬಲ ನೀನಾಗಿ ಬಾ ಅತ್ತತ್ತು ದಣಿದ ಕಂದಗೆ ಒಮ್ಮೆ ಹಿತವಾದ ಅಮ್ಮನ ಮಡಿಲಾಗಿ ಬಾ ಬಿಳಿ ಹಾಳೆಯಂತಿಹ ಮನದ ಅಂಗಳಕೆ ಬಣ್ಣದ ಚಿತ್ತಾರ ನೀನಾಗಿ ಬಾ ಚಂದಿರನಾಗದೆ ಇದ್ದರು ನೀನು ಮಿನುಗುವ ಒಂಟಿ ತಾರೆಯಾಗಿ ಬಾ -ಸಮನ್ವಿತ |













Click it and Unblock the Notifications