..........ಕೆಂಪು ನಾಡು


..........ಕೆಂಪು ನಾಡು
(ನಾನು ಸುಮಾರು 2 ವರ್ಷಗಳಿಂದ ಯುರೋಪಿನಲ್ಲಿದ್ದು ಇಲ್ಲಿಯ ಬದುಕು, ಜನರ ನಡೆ-ನುಡಿ ನನಗೆ ತುಂಬ ಹಿಡಿಸಿತು. ನಾನು ಕಂಡ ಯುರೋಪಿನ ಬಗ್ಗೆ ಒಂದು ಕವಿತೆ)
Dr.Timmanna Bennur
  • ಡಾ.ತಿಮ್ಮಣ್ಣ ಬೆನ್ನೂರು, ಪೋಸ್ಟಾಕ್‌, ಸ್ವೀಡನ್‌
    [email protected]
ತಂಪಾದ ನಾಡಾಗ ಸೊಂಪಾದ ಜೀವನವ
ಕೆಂಪನ್ನ ಜನರ ಒಡಗೂಡಿ, ಕಳೆಯುತಲೆ
ಸಂಪನ್ನರಾಗಿ ಹೋಗುವರೋ

ಎತ್ತರದ ಮಹಲೇನ ಚಿತ್ತರದ ಸೊಬಗೇನ
ಸುತ್ತ ನೋಡಿದರ ಶುಚಿಯೇನ, ಮಲ್ಲಿಗೆಯ
ಹೂವಿನಂಗ ಸುರಿವ ಹಿಮವೇನ

ಜಾತಿ ಪಂಥಗಳಿಲ್ಲ ವರ್ಣ ಭೇದಗಳಿಲ್ಲ
ಮೇಲು ಕೀಳೆಂಬುದು ಇಲ್ಲಿಲ್ಲ, ಬದುಕಿನ
ನೀತಿ ನಿಯಮಕ್ಕೆ ಚ್ಯುತಿಯಿಲ್ಲ

ಹೆಂಡ ಕುಡಿವವರಿಲ್ಲಿ ಭಂಡರಾಗುವದಿಲ್ಲ
ಹೆಂಡದ ಹೊಳಿಯು ಹರಿತೈತಿ, ಸುಖಕಾಗಿ
ಹೆಂಡರ ಜೊತೆಗೂಡಿ ಈಜಾಡಿ

ಕೊರತೆ ಏನೈತಂತ ಕುರಿತೊಮ್ಮೆ ಕೇಳದಿರಿ
ಕೊರತೆಂಬು ಶಬುದ ಅರಿತಿಲ್ಲ, ಈ ದೇಶ
ಅರಸಿ ಬಂದವರಿಗೆ ಆಧಾರ

ತಂತ್ರಜ್ಞಾನವ ಬೆಳೆಸಿ ಯಂತ್ರಗಳ ಶೋಧಿಸಿ
ವಿಜ್ಞಾನದ ಬೆಳಕು ವಿಶ್ವಕ್ಕೆ, ನೀಡಿದ
ಜ್ಞಾನಿಗಳು ಇಲ್ಲಿ ಉದಿಸ್ಯಾರ

(ಕವಿತೆಯ ಪ್ರತಿಯಾಂದು ಪದ್ಯದ ಒಂದು, ಎರಡು ಮತ್ತು ಮೂರನೇ ಸಾಲಿನಲ್ಲಿ ಕ್ರಮವಾಗಿ 20, 18 ಮತ್ತು 14 ಮಾತ್ರೆಗಳಿವೆ)


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+