ಚಿಟ್ಟೆಹಂ. ಕ. ರಾಮಪ್ರಿಯನ್ಕ್ಲಾರ್ಕ್ಸ್ವಿಲ್, ಮೇರಿಲೆಂಡ್hkramapriyan& commat yahoo.comಎಮ್ಮ ಮನೆ ಹಿತ್ತಲಲಿ ಬೆಳೆದಿದ್ದೆ ನೀ ಚಿಟ್ಟೆ ಮೊರದಂಥ ಹಿರಿರೆಕ್ಕೆ, ಕಡ್ಡಿಯಂತಹ ಹೊಟ್ಟೆಹೂವಿಂದ ಹೂಗಳಿಗೆ ಹಾರುತ್ತ ಮುತ್ತಿಟ್ಟೆಎಮ್ಮ ತೋಟಕೆ ಬಹಳ ಚೆಂದವನು ನೀ ಕೊಟ್ಟೆ.ಒಮ್ಮೆ ಮುಂಬಾಗಿಲಿಗೆ ನೀನಂಟಿ ಕುಳಿತಿದ್ದೆಹೆಮ್ಮೆಯಿಂದಲಿ ನಿನ್ನ ಬಣ್ಣಗಳ ತೋರಿದ್ದೆಎಲೆ ಚಿಟ್ಟೆ ! ಅಲುಗಾಟವೆಲ್ಲವನು ಬಿಟ್ಟಿದ್ದೆಕಲೆಗಾರ ಕೊರೆದಿದ್ದ ಚಿತ್ರದೊಲು ನೀನಿದ್ದೆ.ಬದುಕಿಹೆಯಾ ಸತ್ತಿಹೆಯಾ ಎಂಬ ಸಂಶಯ ಬರಲುಮೆಲ್ಲ ನಾ ನಿನ್ನ ಬಳಿ ಕಿರುಬೆರಳ ತರುತಿರಲು‘ಇದುವೆಂಥ ಕೊರಡೆನ್ನ ಕೊಲ್ಲ ಬರುವುದೊ’ ಎಂದುಅಲ್ಲಿಂದ ಹಾರುತಲಿ ಹೊರಹೊರಟೆ ನೀನಂದು.ಬಾಂಗಣದ ಬಿಲ್ಲಿನೊಲು ಬಲು ಬಣ್ಣವಿಹ ಚಿಟ್ಟೆ!Lawn mower ಅಡಿಗೆರಗಲೇಕೆ ನೀ ಮನವಿಟ್ಟೆ ?ಜನುಮ ಬದಲಿಸೆ ಬೇಗ ಜೀವವನು ನೀ ಬಿಟ್ಟೆ ನಿನಗೆ ಬೇಸರವಾಯ್ತೆ ಹಿರಿರೆಕ್ಕೆ ಕಿರಿಹೊಟ್ಟೆ ?Post your viewsಮುಖಪುಟ / ಎನ್‌ಆರ್‌ಐ