ಮೌನಿ


ಮೌನಿ
Nalini Maiya
ಯುಗಯುಗಗಳಿಂದಲೂ ಜಗದೆಲ್ಲ ದೇಶದಲಿ
ನುಡಿಯುತ್ತಿರುವೆ ನಾನು ಏಕೈಕ ಭಾಷೆ
ಮೌನ....ಮೌನ....ಮೌನ...

ಶ್ರೀ ರಾಮನೊಡನೆ ನಾ ಸೀತೆಯಾದೆ
ರಾವಣನ ಮಡದಿ ಮಂಡೋದರಿಯು ನಾನಾದೆ
ಕಣ್ಣಿದ್ದು ಕುರುಡಾದ ಗಾಂಧಾರಿ ನಾನು
ಕಲ್ಲಾದ ನಿರ್ದೋಷಿ ಅಹಲ್ಯೆ ನಾನು
ಪತಿಯ ಚಿತೆಯಾಳಗುರಿವ ಸಹಗಮನ ಸತಿ ನಾನು
ಅನಾರ್ಕಲಿಯ ಜೀವಂತ ಸಮಾಧಿ ನಾನು
ನವವಧುವೆ ಸಜೀವ ಚಿತೆಯಾದ ನಾನು
ಸುಡುಸುಡುವ ಆಮ್ಲದಲಿ ಮೊಗ ತೊಯ್ದ ನಾನು
ನೊಂದಿರುವೆ ಬೆಂದಿರುವೆ ಮೌನದಲಿ ನಾನು

ನಾನು ಹೆಣ್ಣು ; ನಾನು ಹೆಣ್ಣು

ಯುಗಯುಗಗಳಿಂದಲೂ ಜಗದೆಲ್ಲ ದೇಶದಲಿ
ನುಡಿಯುತ್ತಿರುವೆ ನಾನು ಏಕೈಕ ಭಾಷೆ
ಮೌನ....ಮೌನ....ಮೌನ...

ಸ್ಥಾನವನು ಮಾನವ ಸಮಾನತೆಯ ಬಯಸಿರುವ
ನನ್ನನ್ನು ಉದ್ಧಟಳು ಎಂದಿರಲು ಜನತೆ
ಮೌನದಲಿ ತಲೆ ಬಾಗಿ ನಿಂತಿದ್ದೆ ನಾನು
ಸಂತಾಪದಲ್ಲಿ... ಸಂತಾಪದಲ್ಲಿ... ಸಂತಾಪದಲ್ಲಿ

ಅಧಿಕಾರ ಬೇಕೆಂದು ಬಯಸಿರುವ ನನ್ನ
ಹೆಣ್ತನವ ಪ್ರಶ್ನಿಸುತ ಹಳಿದಿರಲು ಜನತೆ
ಮೌನದಲಿ ತಲೆ ಬಾಗಿ ನಿಂತಿದ್ದೆ ನಾನು
ಆಕ್ರೋಶದಲ್ಲಿ.... ಆಕ್ರೋಶದಲ್ಲಿ.... ಆಕ್ರೋಶದಲ್ಲಿ

ನಾನು ಹೆಣ್ಣು ; ನಾನು ಹೆಣ್ಣು
ಯುಗಯುಗಗಳಿಂದಲೂ ಜಗದೆಲ್ಲ ದೇಶದಲಿ
ನುಡಿಯುತ್ತಿರುವೆ ನಾನು ಏಕೈಕ ಭಾಷೆ
ಮೌನ.... ಮೌನ.. ಮೌನ.....


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+