ರೂಪಾ ದೀಪಕ್‌ನನ್ನು ಕೊಲೆ ಮಾಡಿದಳೇ...?


ಡ್ಯಾನ್‌, ಮುಚ್ಚಿಟ್ಟುಕೊಳ್ಳಲು ನನ್ನಲ್ಲಿ ಏನೂ ಇಲ್ಲ. ಇನ್ನು ರೂಪ ನನ್ನ ಹೆಸರು ಹೇಳಿರುವುದಕ್ಕೆ, ನಿಮ್ಮವರು ಅವಳನ್ನು ಹೆದರಿಸಿರುವುದೆ ಕಾರಣ ಎಂದುಕೊಳ್ಳುತ್ತೇನೆ ನಾನು. ಬಹುಶಃ ಅವಳು ಅವರ ಪ್ರಶ್ನೆಗಳನ್ನು ಅಪಾರ್ಥ ಮಾಡಿಕೊಂಡಿರಬಹುದು.

ಸರಿ, ಹಾಗಿದ್ದರೆ ದೀಪಕ್‌ ಸಾಯುವ ರಾತ್ರಿ ಪವನ್‌ ಅವನೊಡನೆ ಊಟ ಮಾಡಿದ್ದಕ್ಕೆ ಏನು ಹೇಳುತ್ತೀಯಾ?

ಅವರಿಬ್ಬರೂ ಬನಾರಸ್‌ IIT ಯಲ್ಲಿ ಓದಿದ್ದು ಎಂದು ನನಗೆ ಗೊತ್ತು. ಆ ತರಹದ ಪ್ರತಿಷ್ಠಿತ ಕಾಲೇಜುಗಳು ಭಾರತದಲ್ಲಿರುವುದು ನಾಲ್ಕೆ. ಹಾಗಾಗಿ ಅಲ್ಲಿ ಓದಿರುವವರದೆ ಒಂದು ಗುಂಪು ಇದೆ.

ಡ್ಯಾನ್‌ಗೆ ಬಹಳ ಕೋಪ ಬಂದಿತು. ಅನು, ಹಾಗಿದ್ದರೆ ತನಗೆ ದೀಪಕ್‌ ಮೊದಲಿನಿಂದಲೂ ಗೊತ್ತಿದ್ದ ಎಂದು ಪವನ್‌ ನಿನಗೆ ಹೇಳುತ್ತಿರಲಿಲ್ಲವೆ? ಅದರ ಜೊತೆಗೆ, ಪವನ್‌ ಈಗ ಅಮೇರಿಕದಲ್ಲಿ ಇದ್ದಾನೆ ಎಂದೇಕೆ ನಿನಗೆ ಇಲ್ಲಿಯ ತನಕ ಗೊತ್ತಿರಲಿಲ್ಲ?

ಭಾರತೀಯ ಸಂಬಂಧಗಳು ಬಹಳ ಸಂಕೀರ್ಣ. ನಿನಗೆ ಅವು ಎಂದಾದರು ಪೂರ್ಣವಾಗಿ ಅರ್ಥವಾಗುತ್ತವೆ ಎಂದು ನಾನು ಅಂದುಕೊಂಡಿಲ್ಲ.

ನನ್ನನ್ನು ಪರೀಕ್ಷೆ ಮಾಡು. ನಾನೊಬ್ಬ ಬುದ್ಧಿವಂತ ಮನುಷ್ಯ. ಅದು ಅರ್ಥ ಮಾಡಿಕೊಳ್ಳಲು ಆಗದಷ್ಟು ಸಂಕೀರ್ಣ ಎಂದು ನಾನಂದುಕೊಂಡಿಲ್ಲ. ನಾನು ನಿನಗೆ ಈ ವಿಷಯದಲ್ಲಿ ಸಹಾಯ ಮಾಡಬೇಕು ಎಂದಿದ್ದರೆ, ನೀನು ನನ್ನನ್ನು ನಂಬಬೇಕು.

ಪವನ್‌ಗೆ ನನ್ನ ಯೋಗಕ್ಷೇಮದ ಬಗ್ಗೆ ಕಾಳಜಿ ಇತ್ತು. ನನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಬೇರೆ ತಿಳಿದಿದ್ದ. ಹಾಗಾಗಿ ನನ್ನನ್ನು ಒಬ್ಬ ಬಿಳಿಯನ ಜೊತೆ, ಅಂದರೆ ನಿನ್ನ ಜೊತೆ, ಅದೂ ಬಾತ್‌ಟಬ್ಬಿನಲ್ಲಿ ಅವನು ನಿರೀಕ್ಷಿಸಿರಲಿಲ್ಲ. ಆವತ್ತು ರಾತ್ರಿ ಅವನು ಆ ರೀತಿ ನುಸುಳಿಕೊಂಡು ಹೋಗಿಬಿಟ್ಟ ಮೇಲೆ - ಅದನ್ನು ನೀನೆ ನೋಡಿದೆ - ಆಮೇಲೆ ಅವನಿಗೆ ನಿರಾಶೆಯಾಯಿತು. ನಂತರ ಅವನು ನನಗೆ ಫೋನೂ ಮಾಡಲಿಲ್ಲ, ಇಮೇಯ್ಲೂ ಮಾಡಲಿಲ್ಲ. ಹಾಗಾಗಿ, ಅವನು ತಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂದು ನನಗೆ ಹೇಳದೆ ಇರುವುದಕ್ಕೆ ನನಗೆ ಆಶ್ಚರ್ಯವೇನೂ ಆಗಿಲ್ಲ.

ಈಗ ಪವನ್‌ ಎಲ್ಲಿದ್ದಾನೆ ಎಂದು ನಿನಗೆ ಗೊತ್ತೆ?

ಅವನು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾನೆ ಎಂದು ಗೊತ್ತು. ಆದರೆ ಈಗ ಎಲ್ಲಿದ್ದಾನೆ ಎಂದು ಗೊತ್ತಿಲ್ಲ.

ಅವನು ಇಲ್ಲಿಗೆ ಬಂದಾಗ ಎಲ್ಲಿರುತ್ತಾನೆ ಎಂದು ಗೊತ್ತೆ ನಿನಗೆ?

ಅವರ ಕಂಪನಿ ಹೋಮ್‌ಸ್ಟೇಡ್‌ ಸ್ವೀಟ್ಸ್‌ನ ರೂಮುಗಳನ್ನು ಕಾರ್ಪೊರೇಟ್‌ ಗೆಸ್ಟ್‌ಹೌಸ್‌ ಆಗಿ ಬಳಸುತ್ತೆ ಎಂದು ನನಗೆ ಹೇಳಿದ್ದ. ಕಳೆದ ಬಾರಿ, ಅಂದರೆ ಅವರ ತಾಯಿ ತೀರಿಹೋದಾಗ ಅವನು ಅಲ್ಲೆ ಇದ್ದದ್ದು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ನಾನೆ ಅವನನ್ನು ಕರೆದುಕೊಂಡು ಹೋಗಿದ್ದು.

ಅದನ್ನು ನಮ್ಮವರಿಗೆ ಹೇಳುತ್ತೇನೆ. ಡ್ಯಾನ್‌ ಫೋನಿಟ್ಟ.

ಅನು ಆಫ್ಘನ್‌ ಶಾಲನ್ನು ಸೋಫಾದ ಹಿಂದಿನಿಂದ ಎಳೆದುಕೊಂಡು ಅದರಲ್ಲಿ ತನ್ನನ್ನು ಬೆಚ್ಚಗೆ ಸುತ್ತಿಕೊಂಡಳು. ಟಿವಿಯ ಧ್ವನಿಯನ್ನು ಹೆಚ್ಚಿಗೆ ಮಾಡಿ, ಅದರ ಪರದೆ ನೋಡುತ್ತ ಅಲ್ಲಿಯೆ ಕುಳಿತಳು. ಯಾವಾಗಲೂ ಸ್ತಿಮಿತದಲ್ಲಿ, ಧೈರ್ಯವಾಗಿ, ಆತ್ಮವಿಶ್ವಾಸದಿಂದ ಇರುವಂತೆಯೆ ಕಾಣಿಸುತ್ತಾಳೆ ಓಪ್ರಾ.

ಅವಳು ಮತ್ತೆ ಗಡಿಯಾರದಲ್ಲಿ ಸಮಯ ನೋಡಿದಾಗ ಅದು ಬೆಳಿಗ್ಗೆ 3 ಗಂಟೆಯನ್ನು ತೋರಿಸಿತು. ಅವಳು ಸೋಪಾದ ಮೇಲೆ ಹಾಗೆಯೆ ನಿದ್ದೆ ಮಾಡಿಬಿಟ್ಟಿದ್ದಳು. ಟಿವಿ ಇನ್ನೂ ಓಡುತ್ತಿತ್ತು.

ಬಾಗಿಲನ್ನು ತಟ್ಟಿದ ಶಬ್ದ ಕೇಳಿಸಿತಲ್ಲವೆ ಎಂದುಕೊಂಡಳು. ಅಥವ ಅದು ಟಿವಿ ಆಗಿತ್ತೆ? ಅಲ್ಲ. ಯಾಕೆಂದರೆ ಮತ್ತೊಮ್ಮೆ ಬಾಗಿಲು ಬಡಿದ ಶಬ್ದ ಕೇಳಿಸಿತು. ಅದರ ಹಿಂದೆಯೆ ಕರೆಗಂಟೆಯೂ ಬಂತು. ಇಷ್ಟೊತ್ತಿನಲ್ಲಿ ಯಾರಿರಬಹುದು? ಅವಳು ಅಲ್ಲಿಯವರೆಗೆ ನೋಡಿದ್ದ ಪ್ರತಿಯಾಂದು ಅಮೇರಿಕನ್‌ ಹಾರ್ರರ್‌ ಚಲನಚಿತ್ರವೂ ಅವಳ ಮನಸ್ಸಿನಲ್ಲಿ ಸುರುಳಿ ಬಿಚ್ಚಿತು. ಆದರೆ ಸೈಕೋಗಳು ಬಾಗಿಲು ಬಡಿದು, ಕರೆಗಂಟೆ ಬಾರಿಸುವುದಿಲ್ಲ.

ಅವಳಿಗೆ ಬಹಳ ಭಯವಾಯಿತು. ತಕ್ಷಣ ಗರಾಜಿನ ಬಾಗಿಲ ಹತ್ತಿರ ಹೋಗಿ ಅದರ ಅಲಾರ್ಮ್‌ ಅನ್ನು ಸೆಟ್‌ ಮಾಡಿದಳು. ಬಾಗಿಲ ಇಣಿಕಿಂಡಿಯ ಬಳಿಗೆ ಬರುತ್ತ ಫೋನಿನ ಹ್ಯಾಂಡ್‌ಸೆಟ್‌ ಹಿಡಿದುಕೊಂಡು ಡ್ಯಾನ್‌ಗೆ ಸ್ಪೀಡ್‌ಡಯಲ್‌ ಮಾಡಿದಳು.

ಅವನು ಕೂಡಲೆ ಉತ್ತರಿಸಿದ. ಅನು, ಅದು ನಾನೆ. ಬಾಗಿಲು ತೆಗೆ.

ಒಂದು ನಿಮಿಷ ಇರು! ಹೋಗಿ ಅಲಾರ್ಮ್‌ ಅನ್ನು ಆಫ್‌ ಮಾಡುತ್ತೇನೆ. ಯಾಕೆ ನೀನು ಬಾಗಿಲು ತಟ್ಟಿದ್ದು? ನಿನ್ನ ಬೀಗದ ಕೈ ಎಲ್ಲಿ? ನೀನು ನನಗೆ ಭಯ ಹುಟ್ಟಿಸಿಬಿಟ್ಟೆ.

ಲಿವಿಂಗ್‌ ರೂಮಿನಲ್ಲಿ ಲೈಟುಗಳನ್ನು ನೋಡಿದೆ. ಹಾಗಾಗಿ, ನೇರವಾಗಿ ಒಳಗೆ ಬಂದು ನಿನಗೆ ಭಯ ಹುಟ್ಟಿಸುವುದಕ್ಕೆ ನಾನು ಇಷ್ಟಪಡಲಿಲ್ಲ.

ಆಗ ಅವಳ ಫೋನ್‌ ಶಬ್ದ ಮಾಡಿತು.

ಡ್ಯಾನ್‌ ಅವಳಿಂದ ಹ್ಯಾಂಡ್‌ಸೆಟ್‌ ತೆಗೆದುಕೊಂಡು ತಾನೆ ಉತ್ತರಿಸಿದ. ಹೌದು? ಹಾಗೆಂದು ಹೇಳಿ, ಇಬ್ಬರೂ ಕೇಳುವಂತಾಗಲು ಅದರ ಸ್ಪೀಕರ್‌ ಫೋನ್‌ ಅನ್ನು ಆನ್‌ ಮಾಡಿದ.

ಮೊದಲೆ ಧ್ವನಿಮುದ್ರಿತವಾಗಿದ್ದ ಸಂದೇಶ ಅದರಲ್ಲಿ ಕೇಳಿಬಂತು. ...ಇದೊಂದು ಕಲೆಕ್ಟ್‌ ಕಾಲ್‌. ಕರೆ ಮಾಡುತ್ತಿರುವವರು... ಆಗ ಪರಿಚಿತ ಧ್ವನಿ: ರೂಪ ರಂಜನ್‌.

ಕರೆ ಸ್ವೀಕರಿಸಲು ಡ್ಯಾನ್‌ ಫೋನಿನ 1 ಸಂಖ್ಯೆಯನ್ನು ಒತ್ತಿ, ಹೇಳಿ, ಶ್ರೀಮತಿ ರಂಜನ್‌, ಎಂದು ಒರಟಾಗಿ ಉತ್ತರಿಸಿದ. ನಾನು ನಿಮಗೆ ಏನು ಮಾಡಬಹುದು?

ಅವಳ ಸ್ವರ ನಡುಗುತ್ತಿತ್ತು. ಇದು ಅನೂರವರ ಮನೆಯೆ?

ಹೌದು. ನಾನು ಡಿಟೆಕ್ಟಿವ್‌ ಕೂಪರ್‌. ನಾನು ನಿಮಗೆ ಹೇಗೆ ಸಹಾಯ ಮಾಡಬಹುದು?

ಫೋನಿಗೆ ಡ್ಯಾನ್‌ ಉತ್ತರಿಸುತ್ತಿರುವುದರಿಂದ ರೂಪಾಳಿಗೆ ಖಂಡಿತವಾಗಿಯೂ ಭಯವಾಗಿರುತ್ತದೆ. ಅದನ್ನು ನನಗೆ ಕೊಡು, ಡ್ಯಾನ್‌.

ಡ್ಯಾನ್‌ ಅವಳ ಕೈಗೆ ಫೋನ್‌ ಕೊಟ್ಟು, ತನ್ನ ತಲೆಯನ್ನು ಬೇಡವೆಂದು ಅಲ್ಲಾಡಿಸಿ, ತನ್ನ ಬೆರಳನ್ನು ತನ್ನ ಕಂಠದ ಮುಂದೆ ಅದನ್ನು ಕೊಯ್ಯುವ ರೀತಿಯಲ್ಲಿ ಅಡ್ಡಲಾಗಿ ಆಡಿಸಿದ. ಲೈನ್‌ ಕಟ್‌ ಮಾಡು ಎಂದು ಪಿಸುಗುಟ್ಟಿದ.

ಅನು? ನಾನು ಇಲ್ಲಿ ಆಸ್ಪತ್ರೆಯಲ್ಲಿ ನಿನಗೆ ಕಾಯುತ್ತ ಇದ್ದೇನೆ. ನೀನು ಬರುತ್ತೇನೆ ಎಂದು ಹೇಳಿದ್ದೆ. ಈಗ ನನ್ನ ಜೊತೆ ಮಾತನಾಡಿದವರು ನಮ್ಮ ಮನೆಗೆ ನನ್ನನ್ನು ಕರೆದುಕೊಂಡು ಬರಲು ಬಂದಿದ್ದ ಡೇನಿಯಲ್‌ ಕೂಪರ್ರೆ?

ಹೌದು, ರೂಪ. ಅವರು ಈಗ ಇಲ್ಲಿ ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ.

ನಾನು ನಿನ್ನನ್ನು ಒಂದು ಮಾತು ಕೇಳಬಹುದೆ, ಅನು?

ಖಂಡಿತ, ರೂಪ. ಏನದು?

ನೀನು ಬಿಳಿಯನ ಜೊತೆ ಓಡಿ ಹೋದೆ ಎಂದು ದೀಪಕ್‌ ಹೇಳಿದ ಬಿಳಿಯ ಇವರೆ ಏನು?

ಅದೆ ಏನು ಅವನು ನಿನಗೆ ಹೇಳಿದ್ದು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+