ನೂತನ ಪದಾಧಿಕಾರಿಗಳಿಂದ ಸಿಂಗಾರಗೊಂಡ ಸಿಂಗಪುರ ಕನ್ನಡ ಸಂಘ
ಕನ್ನಡ ಸಂಘ (ಸಿಂಗಪುರ)ದ 19ನೇ ವಾರ್ಷಿಕ ಮಹಾಸಭೆಯು ಇದೇ 27ನೇ ಜೂನ್ 2015, ಶನಿವಾರದಂದು ಸಿಂಗಪುರದ SINDA ಸಭಾಗೃಹದಲ್ಲಿ ವಿಧ್ಯುಕ್ತವಾಗಿ ಜರುಗಿತು.
ವಾರ್ಷಿಕ ಚಟುವಟಿಕೆಗಳ ವರದಿ, ಲೆಕ್ಕಪತ್ರ ಪರಿಶೋಧನೆ ಮತ್ತು ಇತರ ಔಪಚಾರಿಕ ಕಾರ್ಯಕಲಾಪದ ಜೊತೆ 2015-17 ಸಾಲಿನ ಪದಾಧಿಕಾರಿಗಳ ನೇಮಕಾತಿ ಯಾವ ಅಡೆತಡೆಯಿಲ್ಲದೆ ಸುಸೂತ್ರವಾಗಿ ನೆರವೇರಿತು. ಎಂದಿನಂತೆ ಪದಾಧಿಕಾರಿಗಳು ಸರ್ವಾನುಮತದಿಂದ ಆಯ್ಕೆಗೊಂಡರು.

ನೂತನ ಸಮಿತಿಯ ಪದಾಧಿಕಾರಿಗಳ ವಿವರ ಕೆಳಕಂಡತಿದೆ
ವಿಜಯರಂಗ ಪ್ರಸಾದ್ - ಅಧ್ಯಕ್ಷರು [ಚಳಿಗಾಲದಲ್ಲಿ ಏರ್ ಟೆಲ್ ಗೆ ಹಿಡಿದ ವೈರಲ್ ಜ್ವರ]
ಸುರೇಶ ಭಟ್ಟ - ಉಪಾಧ್ಯಕ್ಷರು [ಸಿಂಗಪುರದಲ್ಲಿ ಎಂಟಿಆರ್ ಮಾಲೀಕರ ಸಂದರ್ಶನ]
ಕೆ. ಜೆ. ಶ್ರೀನಿವಾಸ್ - ಕಾರ್ಯದರ್ಶಿ
ವೆಂಕಟೇಶ್ ಗದ್ದೆಮನೆ - ಸಹ ಕಾರ್ಯದರ್ಶಿ [ಇದ್ದು ಇಲ್ಲದಂತೆ ಅವಿತಿರುವೆ ನಿರೀಕ್ಷೆಗಳಲಿ]
ಸುಮನಾ ಹೆಬ್ಬಾರ್ - ಖಜಾಂಚಿ
ಸದಸ್ಯರು
ವೆಂಕಟ ರತ್ನಯ್ಯ
ಚಂದ್ರಶೇಖರ ಕೊಲಕಿ
ನಿರ್ಮಲ ಗೌಡ
ರಶ್ಮಿ ಉದಯ್ ಕುಮಾರ್
ಸಮಂತ್ ಯಾದವ್
ಸ್ನೇಹಲತಾ
ಕನ್ನಡ ಸಂಘ(ಸಿಂಗಪುರ) ಸಿಂಗನ್ನಡಿಗರಿಗೆ ಸದಾ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಲೇ ಬಂದಿದೆ. ಮನೋರಂಜನಾ ಕಾರ್ಯಕ್ರಮಗಳ ಜೊತೆಗೊತೆಗೆ ಕನ್ನಡ ಕಲಿ, ಸಿಂಗಾರ ಔದ್ಯೋಗಿಕ ವೇದಿಕೆ, ಸಿಂಚನ ಸಾಹಿತ್ಯ ಸ್ಪರ್ಧೆಗಳಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ.
ಹಲವು ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ 2013-15ರ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆಯಾಗಿದ್ದ ವಿಶಾಲಾಕ್ಷಿ ವೈದ್ಯ ಮತ್ತು ಅವರ ದಕ್ಷ ಕಾರ್ಯಕಾರಿ ಸಮಿತಿಗೆ ಸಿಂಗನ್ನಡಿಗರೆಲ್ಲರೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಾ ನೂತನ ಕಾರ್ಯಕಾರಿ ಸಮಿತಿಯನ್ನು ಆದರದಿಂದ ಸ್ವಾಗತಿಸಿದ್ದಾರೆ. ನೂತನ ಸಮಿತಿಗೆ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ. (ಒನ್ಇಂಡಿಯಾ ಕನ್ನಡ ವಾರ್ತೆ)












Click it and Unblock the Notifications