ಅಮೆರಿಕದಲ್ಲಿ ಪುತ್ತಿಗೆ ಶ್ರೀಗಳು, ಫಿನಿಕ್ಸ್‌ನಲ್ಲಿ ಸಂಭ್ರಮ
ಪರಮಪೂಜ್ಯ
ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕದ ಫೀನಿಕ್ಸ್ ಮಹಾನಗರದಲ್ಲಿ ಶ್ರೀ ವೆಂಕಟ ಕೃಷ್ಣ ಕ್ಷೇತ್ರದಲ್ಲಿ ಸಾವಿರಾರು ಭಕ್ತ ಜನರ ಸಮ್ಮುಖದಲ್ಲಿ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನೆಯನ್ನು ವೈದಿಕ ವಿದ್ವಾಂಸರೊಡಗೂಡಿ ಶಾಸ್ತ್ರೋಕ್ತವಾಗಿ ನೆರವೇರಿಸಿದರು. id="toptextpromo">3
ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಜ್ಞಾನ ಸತ್ರವು ವಿದ್ವಾಂಸರ ಮಾರ್ಗದರ್ಶನದಲ್ಲಿ ಜರಗಿತು. ಪ್ರಪ್ರಥಮ ಬಾರಿಗೆ ಅಮೆರಿಕದಲ್ಲಿ ರಾಯರು ಬಂದು ನೆಲೆಸಿದ್ದರಿಂದ ಅಮೆರಿಕಾದ್ಯಂತ ಇರುವ ರಾಯರ ಭಕ್ತರು ಶ್ರೀ ರಾಯರ ದರ್ಶನ ಪಡೆದು ಪುಳಕಿತರಾದರು. ಭಕ್ತರಿಗಾಗಿ ವಿಶೇಷ ಪ್ರವಚನವನ್ನು ಕೂಡ ಏರ್ಪಡಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಮೃತ್ತಿಕಾ
ಬೃಂದಾವನವನ್ನು ಘಂಟಾನಾದ, ಜಾಗಟೆಯ ಸದ್ದು, ಮಂತ್ರ ಘೋಷಗಳೊಂದಿಗೆ ಅತ್ಯಂತ ಸಂಭ್ರಮದಿಂದ ಪಲ್ಲಕಿಯಲ್ಲಿ ಇಟ್ಟುಕೊಂಡು ಮೆರವಣಿಗೆಯ ಮುಖಾಂತರ ಶ್ರೀ ವೆಂಕಟ ಕೃಷ್ಣ ಕ್ಷೇತ್ರಕ್ಕೆ ತರಲಾಯಿತು. ರಾಯರ ಅಷ್ಟೋತ್ತರ ಪಠಿಸಲಾಯಿತು. ಬೃಂದಾವನಕ್ಕೆ ಅಭಿಷೇಕವಾದನಂತರ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆಲ್ಲ ಪೂಜ್ಯ ಪುತ್ತಿಗೆ ಮಠದ ಶ್ರೀಗಳಾದ ಸುಗುಣೇಂದ್ರ ತೀರ್ಥರು ಮಂತ್ರಾಕ್ಷತೆ ನೀಡಿದರು. ಪ್ರತಿಷ್ಠಾಪನೆ, ಪೂಜೆಯ ನಂತರ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.











Click it and Unblock the Notifications