ವೀರೇಂದ್ರ ಹೆಗ್ಗಡೆಗೆ ಒಮಾನ್ ಸನ್ಮಾನ-ಸ್ಪಷ್ಟನೆ

ಈ ಕಾರ್ಯಕ್ರಮವನ್ನು ಒಮಾನ್ ನಲ್ಲಿ ನೆಲೆಸಿರುವ ಕರ್ನಾಟಕದ ಎಲ್ಲಾ ಸಮುದಾಯಕ್ಕೆ ಸೇರಿರುವ ಜನತೆಯಿಂದ ಆಯೋಜಿಸಲಾಗಿದೆಯೇ ವಿನಃ ಯಾವುದೇ ಒಂದು ನಿರ್ದಿಷ್ಟ ಸಮುದಾಯ ಅಥವಾ ಸಂಘದಿಂದಲ್ಲ ಎಂದು ಒಮಾನ್ ಬಂಟರ ಸಂಘ ಸ್ಪಷ್ಟಪಡಿಸಿದೆ.
ಕೇವಲ ಬಂಟರು ಮಾತ್ರ ಪಾಲ್ಗೊಳ್ಳಬಹುದೇ ಅಥವಾ ಇತರ ಸಮುದಾಯದ ಕನ್ನಡಿಗರು ಭಾಗವಹಿಸಬಹುದೇ ಎಂಬ ಬಗ್ಗೆ ಉದ್ಭವಿಸಿದ್ದ ಗೊಂದಲವನ್ನು ಈ ಮೂಲಕ ನಿವಾರಿಸಲಾಗುತ್ತಿದೆ ಎಂದು ಬಂಟರ ಸಂಘ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಗ್ಗಡೆ ಅವರ ಸನ್ಮಾನ ಸಮಾರಂಭ ಸೆಪ್ಟೆಂಬರ್ 27ರ ಗುರುವಾರ ಒಮಾನ್ ನ ಆಲ್ ಫಲಾಜ್ ಹೋಟೆಲಿನ ಗ್ರ್ಯಾಂಡ್ ಹಾಲ್ ನಲ್ಲಿ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಸಭಾಂಗಣದ ಬಾಗಿಲು ತೆರೆಯುತ್ತದೆ. 7 ಗಂಟೆಗೆ ಕಾರ್ಯಕ್ರಮ ಆರಂಭ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇರತ್ವೆ.
ಸ್ವಯಂಪ್ರೇರಣೆಯಿಂದ ಹರಿದುಬರುವ ಕಾಣಿಕೆಗಳಿಂದ ಕಾರ್ಯಕ್ರಮದ ಖರ್ಚುವೆಚ್ಚವನ್ನು ಭರಿಸಲಾಗುತ್ತದೆ. ಕಾಣಿಕೆ ನೀಡಬಯಸುವ ಬಂಟ್ ಸದಸ್ಯರು ಈ ಕೆಳಕಂಡ ಸ್ವಯಂಸೇವಕರನ್ನು ಸಂಪರ್ಕಿಸಬಹುದಾಗಿದೆ.
ಶಂಕರ್ ಟಿ ಶೆಟ್ಟಿ (99387409), ಶಶಿಧರ್ ಶೆಟ್ಟಿ (99335480), ನಾಗೇಶ್ ಶೆಟ್ಟಿ (99219004). ಕಾಣಿಕೆ ತಲುಪಿಸಲು ಕಡೆಯ ದಿನಾಂಕ 15 ಸೆಪ್ಟೆಂಬರ್. ಕರ್ನಾಟಕ ಸಂಜಾತ ಒಮಾನ್ ನಿವಾಸಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಆರ್ಶೀರ್ವಾದ ಪಡೆಯಬೇಕೆಂದು ಒಮಾನ್ ಬಂಟರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications